ಬೈಲಹೊಂಗಲ(ಜು. 06): ಮದುವೆಯಾಗಲು ವಧು ಸಿಗದ ಕಾರಣ ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಹರಳಯ್ಯ ಕಾಲೋನಿಯಲ್ಲಿ ಶನಿವಾರ ಜರುಗಿದೆ. 

ಶೇಖರ ದೇವಪ್ಪ ಕಟ್ಟಿಮನಿ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ವ್ಯಕ್ತಿಯು ಮದುವೆಯಾಗಲು ಎಷ್ಟೇ ಹುಡುಕಾಟ ನಡೆಸಿದರೂ ವಧು ಸಿಕ್ಕಿರಲಿಲ್ಲ ಎಂದು ಹೇಳಲಾಗುತ್ತಿದೆ. 

ಬೆಳಗಾವಿ: ಬರೀ ಹೆಣ್ಮಕ್ಕಳೇ ಜನಿಸಿದ್ದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.