ಬೆಳಗಾವಿ(ಜು. 01): ಕೇವಲ ಹೆಣ್ಣು ಮಕ್ಕಳು ಜನಿಸಿದ್ದರಿಂದ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದಲ್ಲಿ ನಡೆದಿದೆ.

ರಾಮಾ ಅಪ್ಪಯ್ಯಾ ಕಾಂಬಳೆ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹೊನಗಾ ಗ್ರಾಮದ ಜನತಾ ಪ್ಲಾಟ್‌ನಲ್ಲಿ ವಾಸವಾಗಿದ್ದರು. ಮೃತರಿಗೆ ಐದು ಹೆಣ್ಣು ಮಕ್ಕಳಿದ್ದು, ಇವರ ಪೋಷಣೆ ಮತ್ತು ಮದುವೆಯ ಬಗ್ಗೆ ಸದಾ ಚಿಂತೆಯಲ್ಲಿರುತ್ತಿದ್ದ ರಾಮಾ ತನಗೆ ಗಂಡು ಮಕ್ಕಳಾಗಲಿಲ್ಲ ಎಂಬ ಇನ್ನೊಂದು ಕೊರಗು ಅವನಲ್ಲಿ ಕಾಡುತ್ತಿತ್ತು. 

ಹಾಸನ:  ಹೊಟ್ಟೆ ನೋವು, SSLC ಪರೀಕ್ಷೆ ಸರಿಯಾಗಿಲ್ಲ, ಬಾಲಕಿ ಆತ್ಮಹತ್ಯೆ

ಇದರಿಂದ ಕುಡಿತಕ್ಕೆ ಅಂಟಿಕೊಂಡು ಹೆಂಡತಿ ಮಕ್ಕಳನ್ನು ಹೊಡೆದು ತವರು ಮನೆಗೆ ಕಳಿಸಿ ತಾಯಿಯ ಜೊತೆಗೆ ವಾಸವಾಗಿದ್ದ. ಈತನಿಗೆ ಯಾವುದೇ ತೊಂದರೆ ಕೊಡದೆ ಹೆಂಡತಿ ಮಕ್ಕಳನ್ನು ತಮ್ಮ ಪಾಲಿಗೆ ಜೀವನ ನಡೆಸುತ್ತಿದ್ದರು. ಇಷ್ಟಾದರೂ ಈತ ಮಾತ್ರ ಸದಾ ಮದ್ಯದ ಅಮಲಿನಲ್ಲಿ ಕಾಲ ಕಳೆಯುತ್ತಿದ್ದ. ಯಾರೂ ಇಲ್ಲದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತನ ಪತ್ನಿ ಕಾಕತಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದಾಳೆ. ಈ ಕುರಿತು ಕಾಕತಿ ಪೊಲೀಸ್‌ ಪ್ರಕರಣ ದಾಖಲಾಗಿದೆ.