ಹರಪನಹಳ್ಳಿ(ಜು.16): ಅಣ್ಣನ ಸಾವಿನಿಂದ ಮನನೊಂದು ತಮ್ಮನೊಬ್ಬ ನೇಣಿಗೆ ಶರಣಾದ ಘಟನೆ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ. ನಿಂಗಪ್ಪ (35) ನೇಣಿಗೆ ಶರಣಾದ ವ್ಯಕ್ತಿ.

ಆತ್ಮಹತ್ಯೆ ಮಾಡಿಕೊಂಡ ನಿಂಗಪ್ಪನ ಅಣ್ಣ ಮಲ್ಲೇಶಪ್ಪನು ಕಿಡ್ನಿ ಸಮಸ್ಯೆಯಿಂದ ಕಳೆದ ವಾರ ಸಾವನ್ನಪ್ಪಿದ್ದನು. ಅಲ್ಲಿಂದ ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟು ಕೊಂಡ ಸಹೋದರ (ತಮ್ಮ) ನಿಂಗಪ್ಪನು ಪದೇ ಪದೇ ಮಲ್ಲೇಶಣ್ಣ ಇಲ್ಲದೆ ನಾನು ಬದುಕುವುದಿಲ್ಲ, ನಾನು ಎಲ್ಲಿಯಾದರೂ ಹೋಗಿ ಸಾಯುತ್ತೇನೆ ಎಂದು ಹೇಳುತ್ತಿದ್ದನು, ಆ ಸಂದರ್ಭದಲ್ಲಿ ಮನೆಯವರು ಸಮಾಧಾನ ಮಾಡುತ್ತಿದ್ದರು.

ತಾಯಿ ನಿಂದಿಸಿದ್ದಕ್ಕೆ ತಂದೆಯನ್ನೇ ಕೊಲೆಗೈದ ಪುತ್ರ

ಮಂಗಳವಾರ ರಾತ್ರಿ ಗ್ರಾಮದ ಹೊರವಲಯದಲ್ಲಿ ಇರುವ ಹುಣಸೇಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಮೃತನ ಸಹೋದರ ರಮೇಶ ಎಂಬಾತ ನೀಡಿದ ದೂರನ್ನು ಹಲುವಾಗಲು ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಕೃಷ್ಣಪ್ಪ ಟಿ.ಆರ್‌. ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.