ಶಿವಮೊಗ್ಗ(ಜು.15): ತಾಯಿಯನ್ನು ನಿಂದಿಸಿದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪುತ್ರ ತನ್ನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಹಳೆ ಬೊಮ್ಮನಕಟ್ಟೆಸಿದ್ದಪ್ಪ ನಗರದ ಮಂಜುನಾಥ (56) ಹತ್ಯೆಗೀಡಾದ ವ್ಯಕ್ತಿ. ಪುತ್ರ ರಾಕೇಶ್‌ (24) ತಂದೆಯನ್ನೇ ಕೊಲೆ ಮಾಡಿದ ಆರೋಪಿ.

ಮಂಜುನಾಥ ಅವರ ಹಿರಿಯ ಪುತ್ರಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ತಾಯಿ ಕೂಡ ಆಸ್ಪತ್ರೆಗೆ ತೆರಳಿದ್ದರು. ಮದ್ಯ ಸೇವಿಸಿ ಮನೆಗೆ ಬಂದಿದ್ದ ಮಂಜುನಾಥ ತನ್ನ ಪುತ್ರನೊಂದಿಗೆ ಜಗಳವಾಡಿ ಪತ್ನಿಯನ್ನು ನಿಂದಿಸಿದ್ದಾನೆ. 

BJP ಬೆಂಬಲಿತ ಪಂಚಾಯತ್ ಸದಸ್ಯನ ಮರ್ಡರ್..!

ಇದರಿಂದ ಆಕ್ರೋಶಗೊಂಡ ರಾಕೇಶ್‌ ಕಬ್ಬಿಣದ ಸಲಾಕೆಯಿಂದ ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ. ಗಾಯಗೊಂಡಿದ್ದ ಮಂಜುನಾಥ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಪಿಯು ಅನುತ್ತೀರ್ಣ: ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಂಸಿ ಸಮೀಪದ ಮರಸ ಗ್ರಾಮದಲ್ಲಿ ನಡೆದಿದೆ.

ಚೈತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಕುಂಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಫಲಿತಾಂಶ ಬಂದ ನಂತರ ಬೇಸತ್ತು ತಂದೆ-ತಾಯಿ ಹೊಲಕ್ಕೆ ಹೋಗಿದ್ದ ವೇಳೆ ತೊಟ್ಟಿಲು ತೂಗುವ ಕೊಂಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕುಂಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.