ಇಡಿ ಹೆಸರಲ್ಲಿ Nippon Paints ಮುಖ್ಯಸ್ಥರ ಟಾರ್ಗೆಟ್‌ ಮಾಡಿ 20 ಕೋಟಿ ಬೇಡಿಕೆ ಇಟ್ಟ ಗ್ಯಾಂಗ್‌ಸ್ಟರ್‌ಗಳು..!

ಮುಂಬೈ ಮೂಲದ ಗ್ಯಾಂಗ್‌ ಮಹಾರಾಷ್ಟ್ರ ರಾಜಧಾನಿಯಲ್ಲಿರುವ ನಿಪ್ಪಾನ್‌ ಪೇಂಟ್ಸ್‌ನ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ನಕಲಿ ಸಮನ್ಸ್‌ ನೀಡಿ, ಇಡಿಯ ದೆಹಲಿ ಕಚೇರಿಗೆ ಬರುವಂತೆ ಹೇಳಿದ್ದಾರೆ. ಹಾಗೂ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆಗೆ ಹಾಜರಾಗಬೇಕೆಂದೂ ಅವರು ಸಮನ್ಸ್‌ ಮೂಲಕ ನಿರ್ದೇಶಿಸಿದ್ದಾರೆ.  

pay 20 crores nippon paints targeted by gang posing as probe agency enforcement directorate ash

ಜಪಾನ್‌ ಮೂಲದ ನಿಪ್ಪಾನ್‌ ಪೇಂಟ್ಸ್‌ ಕಂಪನಿಗೆ ಇಡಿ ಹೆಸರಲ್ಲಿ 20 ಕೋಟಿ ರೂ. ಹಣ ಸುಲಿಗೆ ಮಾಡಲು ಅಂತಾರಾಜ್ಯ ಗ್ಯಾಂಗ್‌ವೊಂದು ಪ್ರಯತ್ನ ಮಾಡಿದೆ. ಈ ಸಂಬಂಧ ಇಡಿ ಹಾಗೂ ದೆಹಲಿ ಪೊಲೀಸ್‌ ಜಂಟಿ ಕಾರ್ಯಾಚರಣೆ ನಡೆಸಿ ಹಲವು ವಂಚಕರನ್ನು ಬಂಧಿಸಿದ್ದಾರೆ. ಕಂಪನಿಯ ಪ್ರಮುಖ ಅಧಿಕಾರಿಗಳಿಗೆ ಇಡಿ ಹೆಸರಲ್ಲಿ ನಕಲಿ ಸಮನ್ಸ್ ನೀಡಿ ಕೋಟ್ಯಂತರ ರೂ. ಹಣ ಸುಲಿಗೆ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ. 
 
ಮುಂಬೈ ಮೂಲದ ಗ್ಯಾಂಗ್‌ ಮಹಾರಾಷ್ಟ್ರ ರಾಜಧಾನಿಯಲ್ಲಿರುವ ನಿಪ್ಪಾನ್‌ ಪೇಂಟ್ಸ್‌ನ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ನಕಲಿ ಸಮನ್ಸ್‌ ನೀಡಿ, ಇಡಿಯ ದೆಹಲಿ ಕಚೇರಿಗೆ ಬರುವಂತೆ ಹೇಳಿದ್ದಾರೆ. ಹಾಗೂ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆಗೆ ಹಾಜರಾಗಬೇಕೆಂದೂ ಅವರು ಸಮನ್ಸ್‌ ಮೂಲಕ ನಿರ್ದೇಶಿಸಿದ್ದಾರೆ.  

ಇದನ್ನು ಓದಿ: Bengaluru: ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ವ್ಯಾಪಾರಿಗಳ ಸುಲಿಗೆ: 7 ಜನರ ಬಂಧನ

ನಂತರ, ಕಂಪನಿಯ ಅಧಿಕಾರಿಗಳಿಗೆ ಕರೆ ಮಾಡಿ ಸಂಪರ್ಕಿಸಿದ ಗ್ಯಾಂಗ್‌ನ ಸದಸ್ಯರು, ನಾವು ಕೆಲ ಇಡಿ ಅಧಿಕಾರಿಗಳ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಅಲ್ಲದೆ, 15 - 20 ಕೋಟಿ ರೂ. ಯಲ್ಲಿ ಈ ಪ್ರಕರಣವನ್ನು ಮಧ್ಯಸ್ಥಿಕೆ  ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಂತರ, ಕಂಪನಿಯ ಅಧಿಕಾರಿಗಳಿಗೆ ಈ ಬಗ್ಗೆ ಅನುಮಾನ ಬಂದು, ಈ ಸಮನ್ಸ್‌ ಬಗ್ಗೆ ಹಾಗೂ ಮಧ್ಯಸ್ಥಿಕೆ ಬಗ್ಗೆ ಇಡಿಗೆ ಮಾಹಿತಿ ನೀಡಿದಾಗ, ಸುಲಿಗೆ ಯತ್ನದ ಪ್ರಕರಣ ಬೆಳಕಿಗೆ ಬಂದಿದೆ. 

ನಂತರ, ಇಡಿ ಹಾಗೂ ದೆಹಲಿ ಪೊಲೀಸರು ವಂಚಕರನ್ನು ಬಂಧಿಸಲು ಬಲೆ ಹೆಣೆದಿದ್ದಾರೆ. ಹಾಗೂ, ಮತ್ತಷ್ಟು ಮಾತುಕತೆ ನಡೆಸಲು ದೆಹಲಿಗೆ ಬರುವಂತೆಯೂ ಗ್ಯಾಮಗ್‌ನ ಸದಸ್ಯರಿಗೆ ಹೇಳಿದ್ದಾರೆ. ಮೊದಲಿಗೆ ಅವರು ನಿರಾಕರಿಸಿದರೂ, ನಂತರ ಒಪ್ಪಿಕೊಂಡು ಗ್ಯಾಂಗ್‌ನ ಹಲವು ಸದಸ್ಯರು ರಾಷ್ಟ್ರ ರಾಜಧಾನಿಗೆ ಹೋಗಿದ್ದರು ಎಂದು ತಿಳಿದುಬಂದಿದೆ.  ಬಳಿಕ, ಇಡಿ ಹಾಗೂ ದೆಹಲಿ ಪೊಲೀಸ್‌ನ ಜಂಟಿ ತಂಡ ಗ್ಯಾಂಗ್‌ನ ಕಿಂಗ್‌ಪಿನ್‌ ಹಾಗೂ ಮುಂಬೈ ನಿವಾಸಿ ಅಖಿಲೇಶ್‌ ಮಿಶ್ರಾ ಸೇರಿ ಹಲವು ಸದಸ್ಯರನ್ನು ದೆಹಲಿ ಹೋಟೆಲ್‌ವೊಂದರಿಂದ ಬಂಧಿಸಿದ್ದಾರೆ.  

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ

ಗ್ಯಾಂಗ್‌ ಸದಸ್ಯರ ಪೈಕಿ ಒಬ್ಬ ದೇವೇಂದರ್‌ ದುಬೇ ಎಂಬಾತ ಕಂಪನಿಯ ಸಿಬ್ಬಂದಿಗೆ ಬೆದರಿಕೆ ಹಾಕಿರುವುದು ಸಹ ವರದಿಯಾಗಿದೆ. ಈ ವಿಷಯವನ್ನು ಸೆಟಲ್‌ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮನ್ನು ಮರುದಿನವೇ ಬಂಧಿಸಲಾಗುವುದು ಎಂದು ಆತ ಹೇಳಿದ್ದಾನೆ. ಅಲ್ಲದೆ, ಕಾರೊಂದಕ್ಕೆ ಸರ್ಕಾರಿ ಸ್ಟಿಕ್ಕರ್‌ಗಳನ್ನು ಆತ ಅಂಟಿಸಿಕೊಂಡಿದ್ದ ಎಂದೂ ಇಡಿ ಹೇಳಿದ್ದು, ಆತನನ್ನು ಸಹ ಬಂಧಿಸಲಾಗಿದೆ. 

ಒಟ್ಟಾರೆ ಕಿಂಗ್‌ಪಿನ್‌ ಸೇರಿ 10 ಜನರು ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದೂ ಪೊಲೀಸರು ಹೇಳಿದ್ದಾರೆ. ಗ್ಯಾಂಗ್‌ಸ್ಟರ್‌ಗಳ ಇಂತಹ ಬಲೆಗೆ ಜನರು ಬೀಳಬಾರದು. ಹಾಗೂ ಇಡಿ ಏಜೆನ್ಸಿಯ ಹೆಸರಲ್ಲಿ ನೀಡಿರುವ ಸಮನ್ಸ್‌ನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು. ಸಮನ್ಸ್‌ ದಾಖಲೆಯಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ದಾಖಲೆಯ ನೈಜತೆ ಅರಿಯಬೇಕೆಂದು ಇಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.  

ಇದನ್ನೂ ಓದಿ: Bengaluru: ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್‌ ಮಾಡಿ 16 ಲಕ್ಷ ಸುಲಿಗೆ!

Latest Videos
Follow Us:
Download App:
  • android
  • ios