Asianet Suvarna News Asianet Suvarna News

ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಮಂಗಳವಾರ ಹಿರಿಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್‌, ದರ್ಶನ್‌ಗೆ ಜಾಮೀನು ನೀಡದೇ ಇರುವಂತೆ ವಾದ ಮಂಡನೆ ಮಾಡುವ ವೇಳೆ ಕೆಲವೊಂದು ಶಾಕಿಂಗ್‌ ಮಾಹಿತಿಯನ್ನು ರಿವಿಲ್‌ ಮಾಡಿದ್ದಾರೆ.

pavithra gowda Texts Super to renuka swamy vulgar message and Photo san
Author
First Published Oct 8, 2024, 10:44 PM IST | Last Updated Oct 8, 2024, 10:44 PM IST

ಬೆಂಗಳೂರು (ಅ.8): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್‌ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್‌ ದೊಡ್ಡ ಪ್ರಮಾಣದಲ್ಲಿ ವಾದ ಮಂಡಿಸಿದ್ದರು. ಈ ವಾದಕ್ಕೆ ತಿರುಗೇಟು ನೀಡುವಂತೆ ಇಂದು ದರ್ಶನ್‌, ಪವಿತ್ರಾ ಗೌಡ ಹಾಗೂ ಅನುಕುಮಾರ್‌ ಅವರ ಬೇಲ್‌ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನಕುಮಾರ್‌ ವಾದ ಮಾಡಿದರು. ಈ ವೇಳೆ ಕೆಲವೊಂದು ಶಾಕಿಂಗ್‌ ಮಾಹಿತಿಗಳನ್ನು ಅವರು ರಿವಿಲ್‌ ಮಾಡಿದ್ದಾರೆ. ರೇಣುಕಾಸ್ವಾಮಿ ಪವಿತ್ರಗೌಡ ಗೆ ಫೆಬ್ರವರಿಯಿಂದ ಮೆಸೇಜ್ ಮಾಡ್ತಾ ಇದ್ದ ಎಂದು ಎಸ್​ಪಿಪಿ ವಾದ ಮಾಡಿದ್ದಾರೆ.  ರೇಣುಕಾಸ್ವಾಮಿ ಫೆಬ್ರವರಿಯಿಂದಲೇ ಪವಿತ್ರಾ ಗೌಡಗೆ ಮೆಸೇಜ್‌ ಮಾಡುತ್ತಿದ್ದ, ಆ ನಂತರ ಜೂನ್‌ನಲ್ಲಿ ಪವಿತ್ರಾ ಅವರು ರೇಣುಕಾಸ್ವಾಮಿ ಜೊತೆ ಮಾತನಾಡಲು ಆರಂಭಿಸಿದ್ದರು. ಈ ವೇಳೆ Drop me ur number ಎಂದು ಪವಿತ್ರಾ ಗೌಡ, ರೇಣುಕಾಸ್ವಾಮಿಗೆ ಮೆಸೇಜ್‌ ಮಾಡಿ ಆತನ ನಂಬರ್‌ಅನ್ನು ಪಡೆದುಕೊಳ್ತಾರೆ. ಈ ವೇಳೆ ಪವಿತ್ರಾ ಗೌಡ, ರೇಣುಕಾಸ್ವಾಮಿಗೆ ಪವನ್‌ನ ನಂಬರ್‌ಅನ್ನು ಕಳಿಸಿದ್ದಾಳೆ ಎಂದು ಎಎಸ್‌ಪಿ ಮಾಹಿತಿ ನೀಡಿದ್ದಾರೆ.

ರೇಣುಕಾಸ್ವಾಮಿಗೆ ನಂಬರ್‌ ಕಳಿಸಿದ್ದ ಪವಿತ್ರಾ ಇದು ನನ್ನ ನಂಬರ್‌ ಇದಕ್ಕೆ ಕಾಲ್‌ ಮಾಡು ಎನ್ನುತ್ತಾರೆ. ಪವಿತ್ರಾ ಗೌಡ ಅವರ ಮನೆಯಲ್ಲಿಯೇ ಪವನ್‌ ಇದ್ದ, ಈ ವೇಳೆ ರೇಣುಕಾಸ್ವಾಮಿ ಕಾಲ್‌ ಮಾಡಿ ಪವಿತ್ರಾ ಗೌಡ ಜೊತೆ ಮಾತನಾಡಿದ್ದು, ಆಕೆಗೆ ಅಶ್ಲೀಲ ಮೆಸೇಜ್‌ಗಳು ಹಾಗೂ ಫೋಟೋಗಳನ್ನು ಕಳಿಸಿದ್ದಾನೆ. ಅಲ್ಲದೆ, ಈ ಅಶ್ಲೀಲ ಮೆಸೇಜ್‌ ಹೇಗಿದೆ, ಫೋಟೋ ಹೇಗಿದೆ ಎಂದು ಅಭಿಪ್ರಾಯ ಕೂಡ ಪವಿತ್ರಾ ಗೌಡ ಬಳಿ ಕೇಳಿದ್ದಾನೆ. ಈ ವೇಳೆ ಪವಿತ್ರಾ ಗೌಡ ಇದಕ್ಕೆ ಸೂಪರ್‌ ಅನ್ನೋ ಮೆಸೇಜ್‌ ಕೂಡ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಕೋರ್ಟ್‌ಗೆ ತಿಳಿಸಲಾಗಿದೆ.

ಆಕೆಗೆ ಈ ಹಂತದಲ್ಲಿ ಪೊಲೀಸರಿಗೆ ದೂರು ನೀಡುವ ಅವಕಾಶಗಳಿದ್ದವು. ಅಥವಾ ಅಕೌಂಟ್‌ಅನ್ನು ಬ್ಲಾಕ್‌ ಮಾಡಬಹುದಿತ್ತು. ಆದರೆ, ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನೆ ಅಧ್ಯಕ್ಷನ ಸಂಪರ್ಕ ಮಾಡಿ ರೇಣುಕಾಸ್ವಾಮಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದರು.

ಆತನನ್ನು ಟ್ರ್ಯಾಪ್‌ ಮಾಡುವ ಹಂತದಲ್ಲಿ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ರೇಣುಕಾಸ್ವಾಮಿ ಹೇಳಿದ್ದಾರೆ. ನೀನು ಸುಳ್ಳು ಹೇಳ್ತಾ ಇದ್ದೀಯಾ ಎಂದು ರೇಣುಕಾಸ್ವಾಮಿಗೆ ತಿಳಿಸಿದಾಗ ಆತ ಫೋಟೋಗಳನ್ನು  ಕಳಿಸಿದ್ದಾನೆ. ಈ ವೇಳೆ ರೇಣುಕಾಸ್ವಾಮಿಯನ್ನ ಸರ್ಚ್‌ ಮಾಡಲು ಮುಂದಾಗುತ್ತಾರೆ. ಈ ವೇಳೆ ರೇಣುಕಾಸ್ವಾಮಿ ಜಿಗಣಿ ಬಳಿ ಇರುವ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿರಬಹುದು ಎನ್ನುವುದು ಗೊತ್ತಾಗಿದೆ ಎಂದು ಎಸ್‌ಎಸ್‌ಪಿ ವಾದ ಮಾಡಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಡೆವಿಲ್ ದರ್ಶನ್‌ಗೆ ಕಾಡ್ತಿದ್ಯಾ ರೇಣುಕಾಸ್ವಾಮಿ ಆತ್ಮ? ಅಸಲಿ ಸತ್ಯ ಇಲ್ಲಿದೆ

ಜೂನ್ 6 ರಂದು ಪವಿತ್ರಾ, ಪವನ್, ವಿನಯ್, ರಾಘವೇಂದ್ರ ಹಾಗೂ ದರ್ಶನ್ ಹಲವು ಬಾರಿ ಪೋನ್​ನಲ್ಲಿ ಮಾತಾಡಿದ್ದಾರೆ. ಇವರೆಲ್ಲ ಪರಿಚಿತ ವ್ಯಕ್ತಿಗಳು ಕ್ರೈಂ ಮಾಡೋದಕ್ಕೆ ಮಾತನಾಡಿದ್ದಾರೆ ಅಂತ ಹೇಳೋಕೆ ಆಗಲ್ಲ. ಎ3 ಆರೋಪಿ ಮೆಸೇಜ್ ಗಳು ಅನುಮಾನ ಮೂಡಿಸುತ್ತೆ ಎಂದು ಎಸ್​ಪಿಪಿ ವಾದ ಮಾಡಿದ್ದಾರೆ. ಜೂನ್ 8ರಂದು ಇಟಿಯೋಸ್ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದಾರೆ. ಘಟನೆ ಕುರಿತ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಿಕ್ಕಿವೆ. ಕಿಡ್ನಾಪ್ ಮಾಡ್ಕೊಂಡು ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ರೇಣುಕಾಸ್ವಾಮಿ ಹಲ್ಲೆಯ ಫೋಟೋಗಳು ವಿನಯ್ ಫೋನ್​ನಲ್ಲಿ ಸಿಕ್ಕಿದೆ. ಇದೇ ಫೋಟೋಗಳನ್ನು ದರ್ಶನ್​ಗೆ ಕಳುಹಿಸಿದ್ದಾರೆ ಎಂದು ಎಸ್​ಪಿಪಿ ವಾದ ಮಾಡಿದ್ದಾರೆ.

ನಟ ದರ್ಶನ್‌ನನ್ನು ಜೈಲಿಗೆ ಕಳುಹಿಸಿದ ಮೂವರು ಅಭಿಮಾನಿಗಳು ಜೈಲಿನಿಂದ ಬಿಡುಗಡೆ!

Latest Videos
Follow Us:
Download App:
  • android
  • ios