ರಂಜಾನ್ ಪೇಟೆಯಲ್ಲಿ ಯುವತಿ ಚುಡಾಯಿಸಿದ್ದಕ್ಕೆ ಆಕ್ರೋಶ; ಪೊಲೀಸ್ ಜೀಪ್‌ಗೆ ಕಲ್ಲೆಸೆತ
ಪಟ್ಟಣದ ಮು ಖ್ಯರಸ್ತೆಯ ರಂಜಾನ್ ಪೇಟೆಯಲ್ಲಿ ಗುರುವಾರ ತಡರಾತ್ರಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದವನನ್ನು ಪ್ರಶ್ನಿಸಿದ್ದಕ್ಕೆ ವಾಗ್ವಾದ ನಡೆದಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಹೋದ ಪೊಲೀಸರನ್ನೇ ಒಂದು ಗುಂಪು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಪೊಲೀಸ್ ಜೀಪಿಗೆ ಹಾನಿ ಮಾಡಿದೆ.
ಭಟ್ಕಳ (ಏ.22) : ಪಟ್ಟಣದ ಮು ಖ್ಯರಸ್ತೆಯ ರಂಜಾನ್ ಪೇಟೆಯಲ್ಲಿ ಗುರುವಾರ ತಡರಾತ್ರಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದವನನ್ನು ಪ್ರಶ್ನಿಸಿದ್ದಕ್ಕೆ ವಾಗ್ವಾದ ನಡೆದಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಹೋದ ಪೊಲೀಸರನ್ನೇ ಒಂದು ಗುಂಪು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಪೊಲೀಸ್ ಜೀಪಿಗೆ ಹಾನಿ ಮಾಡಿದೆ.
ಯುವತಿಗೆ ಕಿರುಕುಳ ನೀಡಿದ್ದಾನೆನ್ನಲಾದ ಹದ್ಲೂರಿನ ಚಂದ್ರು ಸೋಮಯ್ಯ ಗೊಂಡ(Chandru somaiah gonda) ಎಂಬಾತನನ್ನು ಸುತ್ತುವರಿದ ಕೆಲವು ಯುವಕರು ಗಲಾಟೆ ಮಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಪೊಲೀಸರು ನಿಯಂತ್ರಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸುದ್ದಿ ತಿಳಿದು ಇನ್ನಷ್ಟುಜನ ಸೇರುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸ್ ಜೀಪಿನಲ್ಲಿ ಆರೋಪಿಯನ್ನು ಹಾಗೂ ಆತನೊಂದಿಗೆ ವಾಗ್ವಾದ ನಡೆಸುತ್ತಿದ್ದ ಮೊಹಮ್ಮದ್ ಮೀರಾನ್ ಎನ್ನುವವನನ್ನು ಕರೆದೊಯ್ಯಲು ಮುಂದಾದರು. ಆಗ ಅಲ್ಲಿ ಸೇರಿದ್ದ ಜನರು ಜೀಪನ್ನು ಅಡ್ಡಗಟ್ಟಿದ್ದಲ್ಲದೇ ಕಲ್ಲು ತೂರಾಟ ನಡೆಸಿದ್ದರಿಂದ ಜೀಪಿಗೆ ಹಾನಿಯಾಗಿದೆ. ತಕ್ಷಣ ಜಾಗ್ರತರಾದ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆ ತಂದರಲ್ಲದೇ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಐವರು ಹಾಗೂ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿಕೊಂಡು ಗುರುವಾರ ತಡರಾತ್ರಿಯೇ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮಾನಸಿಕ ಹಿಂಸೆ ಖಂಡಿಸಿ ಮೊಬೈಲ್ ಟವರ್ ಏರಿ ಪ್ರತಿಭಟನೆ!
ಪರವಾನಗಿ ಇಲ್ಲದ ಮಳಿಗೆ:
ಪುರಸಭೆ ಅನುಮತಿಯಿಲ್ಲದೇ ಮುಖ್ಯರಸ್ತೆಯಲ್ಲಿ ರಂಜಾನ್ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಹಾಕಲಾಗಿದೆ. ಈ ಸಲ ಪುರಸಭೆಯಿಂದ ರಂಜಾನ್ ಮಳಿಗೆಗಳನ್ನು ಹರಾಜು ಮಾಡದಿದ್ದರೂ ಕಳೆದ ವರ್ಷದಷ್ಟೇ ಮಳಿಗೆಗಳನ್ನು ಮುಖ್ಯರಸ್ತೆಯಲ್ಲಿ ಹಾಕಲಾಗಿತ್ತು.
ಪೋಕ್ಸೋ: ಚಿತ್ರದುರ್ಗದ ಶಿಕ್ಷಕನಿಗೆ 6 ವರ್ಷ ಕಠಿಣ ಶಿಕ್ಷೆ
ಚಿತ್ರದುರ್ಗ: ಇನ್‌ಸ್ಪೈರ್ ಆವಾರ್ಡ್ ಕಾರ್ಯಕ್ರಮಕ್ಕೆಂದು ಜಿಲ್ಲಾ ಕೇಂದ್ರಕ್ಕೆ ವಿದ್ಯಾರ್ಥಿನಿ ಕರೆತಂದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕ ನೋರ್ವ ನಿಗೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 6 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ರುಪಾಯಿ ದಂಡ ವಿಧಿಸಿ ಆದೇಶಿಸಿದೆ.
ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ : ಅಮೆರಿಕಾದ ಆರು ಶಿಕ್ಷಕಿಯರ ಬಂಧನ
ಮೊಳಕಾಲ್ಮೂರು ತಾಲೂಕಿನ ಮುರುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನರಸಿಂಹಸ್ವಾಮಿ ಎಂಬಾತನೇ ಶಿಕ್ಷೆಗೆ ಗುರಿಯಾದ ಆರೋಪಿ. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಶುಕ್ರವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೋ) ಎಚ್.ಆರ್.ಜಗದೀಶ್ ವಾದ ಮಂಡಿಸಿದ್ದರು.