ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೇ ಸ್ಟೇಷನ್‌ ನಿವಾಸಿ ಗಾರೆ ಕೆಲಸಗಾರ ರಂಗಾ ಬೋವಿ ತನಗೆ ಕೆಲವರು ಮಾನಸಿಕ ಹಿಂಸೆ ನೀಡಿದ್ದಲ್ಲದೆ, ದೈಹಿಕ ಹಲ್ಲೆ ಮಾಡುತ್ತಿದ್ದಾರೆ ಎಂದು ನೊಂದು ಬುಧವಾರ ಮೊಬೈಲ್‌ ಟವರ್‌ ಏರಿ ಪ್ರತಿಭಟಿಸಿದರು.

ತರೀಕೆರೆ (ಏ.20) : ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೇ ಸ್ಟೇಷನ್‌ ನಿವಾಸಿ ಗಾರೆ ಕೆಲಸಗಾರ ರಂಗಾ ಬೋವಿ ತನಗೆ ಕೆಲವರು ಮಾನಸಿಕ ಹಿಂಸೆ ನೀಡಿದ್ದಲ್ಲದೆ, ದೈಹಿಕ ಹಲ್ಲೆ ಮಾಡುತ್ತಿದ್ದಾರೆ ಎಂದು ನೊಂದು ಬುಧವಾರ ಮೊಬೈಲ್‌ ಟವರ್‌ ಏರಿ ಪ್ರತಿಭಟಿಸಿದರು.

ಬೆಳಗ್ಗೆ 5 ಗಂಟೆಗೆ ನೂರು ಅಡಿ ಟವರ್‌ ಏರಿದ ರಂಗಾಬೋವಿ(Rangabovi) ಯಾರಾದರೂ ಟವರ್‌ ಹತ್ತಲು ಪ್ರಯತ್ನಿಸಿದರೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿ ಮೇಲಕ್ಕೇರುತ್ತಿದ್ದ. ಬಿಸಿಲಲ್ಲಿ ಟವರ್‌ನ(Mobile tower) ಅಡ್ಡ ಕಬ್ಬಿಣದ ರಾಡ್‌ ಮೇಲೆ ಕುಳಿತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು ವೀಡಿಯೋ ಮಾಡಿ ಕಳುಹಿಸಿ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ರಾಜ್ಯ ಬೋವಿ ಸಮಾಜದ ಅಧ್ಯಕ್ಷರು ಬರಬೇಕೆಂದು ತಾಕೀತು ಮಾಡಿದರು.

ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದಾಕೆಯ ರಕ್ಷಿಸಿದ ಕಣಜದ ಹುಳುಗಳು

ಹಿಂದುಳಿದ ವರ್ಗದಲ್ಲಿ ಹುಟ್ಟಿದ ನನಗೆ ಕಳೆದ 13 ವರ್ಷಗಳಿಂದ ಹಿಂಸೆ ಕೊಡುತ್ತಿದ್ದಾರೆ. ಸಮಾಜದಲ್ಲಿ ಉತ್ತಮ ಸಂಸ್ಕಾರ ಹೊಂದಿದ್ದೇನೆ. ಚುನಾವಣೆಗೆ ನಿಲ್ಲಿಸುತ್ತಾರೆ, ಸೋಲಿಸುತ್ತಾರೆ. ಓಡಾಡಿದರೆ ನನ್ನ ಮೇಲೆ ಕಲ್ಲು ಎಸೆಯುತ್ತಾರೆ. ಲಾಂಗು ಮಚ್ಚು ಹಿಡಿದುಕೊಂಡು ಹೊಡೆಯಲು ಬರುತ್ತಾರೆ. ಕೆಲಸ ಮಾಡಲು ಅಹೋದರೆ, ಕೆಲಸ ಸಿಗದಂತೆ ಮಾಡುತ್ತಾರೆ.

ಬೈಕ್‌, ನಗದು, ಕೈ ಚೈನ್‌, ಉಂಗುರ ಕಿತ್ತುಕೊಂಡು ಹೊಡೆಯುತ್ತಾರೆ. ಇಂತಹ ವರ್ತನೆಗಳಿಂದ ನನ್ನ ಪತ್ನಿ, ಮಕ್ಕಳು ದೂರವಾಗಿದ್ದಾರೆ. ರೈಲ್ವೇ ಸ್ಟೇಷನ್‌ನಲ್ಲಿ ಭಿಕ್ಷೆ ಬೇಡುತ್ತಿದ್ದೇನೆ ಎಂದು ಬಿಂಬಿಸಿ ಚಿತ್ರದುರ್ಗದಲ್ಲಿ ಜೈಲಿಗೆ ನನ್ನನ್ನು ಹಾಕಿಸಿದರು.

ಪರಿಹಾರ ವಿಳಂಬ: ಟವರ್ ಹತ್ತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಮಂಡ್ಯ ರೈತ

ನನಗಾಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು, ನನಗೆ ನ್ಯಾಯ ದೊರಕಿಸಿಕೊಡಿ, ನಾನು ಎಲೆಕ್ಷನ್‌ನಲ್ಲಿ ನಿಲ್ಲಬೇಕು, ಬಿಜೆಪಿ ಟಿಕೆಟ್‌ ಬೇಕು ಎಂದು ಅಲವತ್ತುಕೊಂಡಿದ್ದಾರೆ.

ಆಯಕಟ್ಟಿನ ಜಾಗದಲ್ಲಿ ಕುಳಿತುಕೊಂಡು, ಮೊಬೈಲ್‌ ಪವರ್‌ ಬ್ಯಾಂಕ್‌, ಲೀಟರ್‌ ಖಾರ ಮಂಡಕ್ಕಿ ಸೇವಿಸುತ್ತಾ ಮಾತನಾಡಿದರು. ಪೊಲೀಸರು, ಸಾರ್ವಜನಿಕರು, ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳದಲ್ಲಿದ್ದು ರಂಗಾಬೋವಿಯನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಮಧ್ಯಾಹ್ನ 2.30ಕ್ಕೆ ಸ್ವಯಂ ಆತನೇ ಕೆಳಗಿಳಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.