Asianet Suvarna News Asianet Suvarna News

ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ : ಅಮೆರಿಕಾದ ಆರು ಶಿಕ್ಷಕಿಯರ ಬಂಧನ

ವಿದ್ಯಾರ್ಥಿಗಳೊಂದಿಗೆ ದೈಹಿಕ  ಸಂಬಂಧ ಹೊಂದಿದ್ದ ಆರೋಪದ ಮೇಲೆ ಕೇವಲ ಎರಡು ದಿನಗಳಲ್ಲಿ ಒಟ್ಟು ಆರು ಮಹಿಳಾ ಶಿಕ್ಷಕಿಯರನ್ನು ಅಮೆರಿಕಾದ ಪೊಲೀಸರು ಬಂಧಿಸಿದ್ದಾರೆ.  

Rape and sexually assult on student 6 american Female teachres arrested in US akb
Author
First Published Apr 16, 2023, 11:54 AM IST

ನ್ಯೂಯಾರ್ಕ್: ವಿದ್ಯಾರ್ಥಿಗಳೊಂದಿಗೆ ದೈಹಿಕ  ಸಂಬಂಧ ಹೊಂದಿದ್ದ ಆರೋಪದ ಮೇಲೆ ಕೇವಲ ಎರಡು ದಿನಗಳಲ್ಲಿ ಒಟ್ಟು ಆರು ಮಹಿಳಾ ಶಿಕ್ಷಕಿಯರನ್ನು ಅಮೆರಿಕಾದ ಪೊಲೀಸರು ಬಂಧಿಸಿದ್ದಾರೆ.  ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ಅವರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡ ಹಿನ್ನೆಲೆಯಲ್ಲಿ ಆರು ಶಿಕ್ಷಕಿಯರನ್ನು ಬಂಧಿಸಲಾಗಿದೆ.  ಬಂಧಿತರಲ್ಲಿ ಓರ್ವಳಾಗಿರುವ ಡಾನ್ವಿಲ್ಲೆಯ ಶಿಕ್ಷಕಿ ಇಲ್ಲೆನ್ ಶೆಲ್ ವಿರುದ್ಧ 3ನೇ ಹಂತದ ಲೈಂಗಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.  16 ವರ್ಷದ ಇಬ್ಬರು ಬಾಲಕರ ಮೇಲೆ ಈಕೆ ಎರಡು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದು ಈಕೆಯ ವಿರುದ್ಧ ದಾಖಲಾಗದ ಅಪರಾಧ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.  ಗುರುವಾರ ಆಕೆಯನ್ನು ಗ್ಯಾರಾರ್ಡ್‌ನ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಅಲ್ಲಿನ ನ್ಯೂಸ್ ವೆಬ್‌ಸೈಟ್‌ ಪ್ರಕಾರ ಈಕೆ ವುಡ್‌ಲಾನ್ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡಿದ್ದಳು ಮತ್ತು ಅದಕ್ಕೂ ಮೊದಲು ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದಳು. ಈಕೆಯ ಬಂಧನದ ಬಗ್ಗೆ ಬೋಯ್ಲ್ ಕೌಂಟಿ ಶಾಲೆಯ ಅಧಿಕಾರಿಗಳು ಪೋಷಕರಿಗೆ ಪತ್ರ ಬರೆದಿದ್ದು, ಈಕೆಯ ಬಂಧನದ ಬಗ್ಗೆ ಎಚ್ಚರಿಸಿದ್ದಾರೆ ಎಂದು ನ್ಯೂಸ್ ಪೋರ್ಟಲ್ ವರದಿ ಮಾಡಿದೆ. ಪ್ರಕರಣ ಬಯಲಾದ ನಂತರ ಈ ಶಿಕ್ಷಕಿಯನ್ನು ರಜೆಯ ಮೇಲೆ ಕಳುಹಿಸಲಾಗಿತ್ತು.

ಇತ್ತೀಚೆಗೆ ಒಟ್ಟು ಆರು ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ.  ಮಹಿಳಾ ಶಿಕ್ಷಕಿಯರು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೂ ಮೊದಲು ಅರ್ಕಾಂಸದ ಶಿಕ್ಷಕಿ 32 ವರ್ಷದ ಹೀಥರ್ ಹ್ಯಾರೆ ವಿರುದ್ಧ ಮೊದಲ ಹಂತದ ಅತ್ಯಾಚಾರ ಅಪರಾಧ ಪ್ರಕರಣ ದಾಖಲಾಗಿದೆ. ಈಕೆ ಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದಳು ಎಂದು ಅರ್ಕಾನ್ಸಸ್ ಟೈಮ್ಸ್ ವರದಿ ಮಾಡಿದೆ. 

ಒಕ್ಲಹೊಮಾದ (Oklahoma) 26 ವರ್ಷದ ಶಿಕ್ಷಕಿ ಇಮಿಲಿ ಹಾಂಕಾಕ್ ಎಂಬಾಕೆಯನ್ನು ಕೂಡ ಗುರುವಾರ ಇದೇ ರೀತಿಯ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವಿದ್ಯಾರ್ಥಿಯೊಂದಿಗೆ ಆಕೆಯ ಸಂಬಂಧದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕ ನಂತರ ಈ ಬಂಧನ ನಡೆದಿದೆ. 

ಹಾಗೆಯೇ  ಲಿಂಕನ್ ಕೌಂಟಿಯ (Lincoln County) ಬದಲಿ ಶಿಕ್ಷಕಿಯೊಬ್ಬರನ್ನು 15 ವರ್ಷದ ವಿದ್ಯಾರ್ಥಿಯೊಂದಿಗೆ ಹೊಂದಿದ್ದ ಸಂಬಂಧಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.  ಬಂಧಿತ ಶಿಕ್ಷಕಿ ಎಮ್ಮಾ ಡೆಲಾನಿ ಹ್ಯಾನ್‌ಕಾಕ್ ವೆಲ್‌ಸ್ಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮತ್ತು ಶಾಲೆಯಲ್ಲಿಯೇ ಆಕೆ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದು ತಿಳಿದು ಬಂದಿದೆ.  ಆಕೆ ಈ ವಿಚಾರವಾಗಿ ವಿದ್ಯಾರ್ಥಿಯೊಂದಿಗೆ ಸ್ನಾಪ್‌ಚಾಟ್‌ನಲ್ಲಿ ಸಂಭಾಷಣೆ ನಡೆಸಿದ್ದಳು ಎಂದು ತಿಳಿದು ಬಂದಿದೆ. 

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿರುವ ಕ್ಯಾಥೋಲಿಕ್ ಪ್ರೌಢಶಾಲೆಯಲ್ಲಿ (Catholic high school) ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ  36 ವರ್ಷದ ಕ್ರಿಸ್ಟನ್ ಗ್ಯಾಂಟ್ ಕೂಡ ಹದಿಹರೆಯದ ವಿದ್ಯಾರ್ಥಿಯೊಂದಿಗೆ ತನ್ನ ಶಾಲೆಯ ಒಳಗೆ ಮತ್ತು ಬೇರೆಡೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. 

ಹಾಗೆಯೇ  33 ವರ್ಷದ ಅಲಿಹ್ ಖೇರದ್‌ಮಂಡ್ (Allieh Kheradmand) ಎಂಬ ಶಿಕ್ಷಕಿ ಜೇಮ್ಸ್ ಮ್ಯಾಡಿಸನ್ ವಿರುದ್ಧ ಹೈಸ್ಕೂಲ್‌ನಲ್ಲಿ ಹಲವು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿ ಬಂದಿದೆ . ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವವರಿಗೆ  ಅಲಿಹ್ ಖೇರದ್‌ಮಂಡ್ ಶಿಕ್ಷಕಿಯಾಗಿದ್ದು, ಈತನ ವಿರುದ್ಧ ನಾಲ್ಕು ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ. 

ಹಾಗೆಯೇ ಪೆನ್ಸಿಲ್ವೇನಿಯಾದ (Pennsylvania) ಬಾಲಕರ ಶಾಲೆಯ ಶಿಕ್ಷಕಿಯ ವಿರುದ್ಧ 17 ವರ್ಷದ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.  ಹಾಗೆಯೇ 26 ವರ್ಷದ ಶಿಕ್ಷಕಿ ಹನ್ನಾ ಮಾರ್ತ್ (Hannah Marth) ಎಂಬಾಖೆ  ನಾರ್ಥಾಂಪ್ಟನ್ ಏರಿಯಾ ಹೈಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ನೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ಕಂಡು ಬಂದ ನಂತರ ಆಕೆಯನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ.

Follow Us:
Download App:
  • android
  • ios