Asianet Suvarna News Asianet Suvarna News

ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!

ಮಗನ ಸಾಕಿ ಸಲಹಿದ್ದಾಳೆ, ಶಿಕ್ಷಣ ಕೊಡಿಸಿದ್ದಾಳೆ. ಆದರೆ ಮೈಬಗ್ಗಿಸಿ ಕೆಲಸ ಮಾಡುವುದು ಆತನಿಗೆ ಇಷ್ಟವಿರಲಿಲ್ಲ. ಆನ್‌ಲೈನ್ ಗೇಮಿಂಗ್, ಜೂಜಿನಲ್ಲೇ ಕಾಲ ಕಳದೆ. ಕೊನೆಗೆ ಮಗ ಮಾಡಿದ ಸಾಲಕ್ಕೆ ಇದೀಗ ತಾಯಿ ಬಲಿಯಾದ ದುರಂತ ಘಟನೆ ಇದೆ. 

Online Gaming Addicts Man kills mother to repay debt amount through Insurance ckm
Author
First Published Feb 25, 2024, 6:29 PM IST

ಲಖನೌ(ಫೆ.25) ಮಗನಿಗೆ ಆನ್‌ಲೈನ್ ಗೇಮಿಂಗ್ ಹುಚ್ಚು. ಪ್ರತಿ ದಿನ ಹಣ ಕಳದುಕೊಂಡರೂ ಹುಚ್ಚು ಬಿಡಲಿಲ್ಲ. ಇತ್ತ ಸಾಲಗಾರರ ಬೆದರಿಕೆ ಹೆಚ್ಚಾಯಿತು. ಗೆಳೆಯರಿಂದ ಸಾಲ ಪಡೆದು ಅಲ್ಪ ಸ್ವಲ್ಪ ತೀರಿಸಿದರೂ ಈತ ಮಾಡಿದ್ದು ಬೆಟ್ಟದಷ್ಟು ಸಾಲ. ಕೊನೆಗೆ ಸಾಲ ತೀರಿಸಲು ಮಾಸ್ಟರ್ ಐಡಿಯಾ ಮಾಡಿದ್ದಾನೆ. ಪೋಷಕರ 50 ಲಕ್ಷ ರೂಪಾಯಿ ವಿಮೆ ಪಡೆದು ಸಾಲ ತೀರಿಸಲು ಲೆಕ್ಕಾಚಾರ ಹಾಕಿದ್ದಾನೆ. ಇದಕ್ಕಾಗಿ ತಾಯಿಯನ್ನೇ ಪಾಪಿ ಮಗ ಹತ್ಯೆ ಮಾಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

ಹಿಮಾಂಶು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಿಮಾಂಶು ಪೋಷಕರು ಇದ್ದ ಜಮೀನಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಕೃಷಿಯಿಂದ ಬಂದ ಸಣ್ಣ ಆದಾಯದಲ್ಲಿ ಹಿಮಾಂಶು ದರ್ಬಾರು ನಡೆಸುತ್ತಿದ್ದ. ಒಂದೇ ಬಾರಿಗೆ ಹಣ ಮಾಡಿ ಶ್ರೀಮಂತನಾಗಬೇಕು ಅನ್ನೋದು ಹಿಮಾಂಶು ಫಿಲಾಸಫಿ. ಕಷ್ಟ ಪಟ್ಟು ದುಡಿದು ಮುಪ್ಪಿನಲ್ಲಿ ಶ್ರೀಮಂತನಾದರೆ ಪ್ರಯೋಜನವೇನು ಎಂದು ಈತ ಜೂಜು, ಆನ್ಲೈನ್ ಗೇಮಿಂಗ್‌ನಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಂಡಿದ್ದ.

Murder: ತಾಯಿಯನ್ನ ಕೊಂದು ಠಾಣೆಗೆ ಬಂದು ಶರಣಾದ ಮಗ..! ಊಟ ಹಾಕಲ್ಲ ಎಂದಿದ್ದಕ್ಕೆ ಉಸಿರೇ ನಿಲ್ಲಿಸಿದ ಪಾಪಿ ಪುತ್ರ !

ಆದರೆ ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಹಾಕಿದ್ದೇ ಬಂದು, ವಾಪಸ್ ಸಿಗಲಿಲ್ಲ. ಲಕ್ಷ  ಲಕ್ಷ ರೂಪಾಯಿ ಕಳೆದುಕೊಂಡ. ಗೆಳೆಯರಿಂದ ಹಣ ಪಡೆದು ಮರಳಿ ಪಡೆಯುವ ಯತ್ನವೂ ಕೈಗೂಡಲಿಲ್ಲ. ಸಾಲ ಹೆಚ್ಚಾಯಿತು. ಸಾಲಗಾರರ ಬೆದರಿಕೆ ಶುರುವಾಯಿು. ಗೆಳೆಯರಿಂದ ರೋಟೇಶನ್ ಮಾಡಿ ಒಂದಿಷ್ಟು ಸಮಾಧಾನ ಮಾಡುವ ಪ್ರಯತ್ನವನ್ನೂ ಮಾಡಿದ. ಆದರೆ ಯಾವುದು ಪ್ರಯೋಜನವಾಗಲಿಲ್ಲ. 

ಕಳೆದೆರಡು ವರ್ಷದಿಂದ ಜೂಜಿನಲ್ಲೇ ಹಿಮಾಂಶು ಹಣ ಕಳೆದುಕೊಂಡಿದ್ದ. ಇದರ ನಡುವೆ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದ. ತನ್ನ ಸಾಲ ಲಕ್ಷ ರೂಪಾಯಿ ದಾಡುತ್ತಿದ್ದಂತೆ ಕುಟುಂಬಸ್ಥರ ಮನೆಯಿಂದ ಚಿನ್ನಾಭರಣ ಕದ್ದು ತಂದೆ ಹಾಗೂ ತಾಯಿಗೆ 50 ಲಕ್ಷ ರೂಪಾಯಿ ವಿಮೆ ಮಾಡಿಸಿದ್ದ. ತಂದೆ ತಾಯಿ ಹೆಚ್ಚು ದಿನ ಬದುಕುವುದಿಲ್ಲ. ಈ ಹಣ ತನಗೆ ಬರಲಿದೆ ಅನ್ನೋ ಲೆಕ್ಕಾಚಾರ ಹಾಕಿದ್ದ.

ತಾಯಿಯನ್ನೇ ಮುಗಿಸಿದ ಹೆಂಡತಿ, ತಿಥಿ ದಿನ ರಟ್ಟಾಯ್ತು ಕೊಲೆಯ ರಹಸ್ಯ!

ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪೋಷಕರ ಆರೋಗ್ಯ ಉತ್ತಮವಾಗಿಯೇ ಇತ್ತು. ಇತ್ತ ತನ್ನ ಸಾಲ ಮಾತ್ರ ಹೆಚ್ಚಾಗುತ್ತಲೇ ಹೋಯಿತು. ಸದ್ಯಕ್ಕೆ ಪೋಷಕರ ವಯೋಸಹಜ ಸಾವು ಸಾಧ್ಯವಿಲ್ಲ ಅನ್ನೋದನ್ನು ಅರಿತ ಹಿಮಾಂಶು, ತಾಯಿಯನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದೆ. ತಾಯಿ ಹತ್ಯೆಯಿಂದ ವಿಮೆ ಹಣ ಸಿಗಲಿದೆ. ಈ ಹಣದಿಂದ ತನ್ನ ಸಾಲವೂ ತೀರಲಿದೆ. ಐಷಾರಾಮಿ ಜೀವನವೂ ಆಗಲಿದೆ ಎಂದುಕೊಂಡು ತಾಯಿಯನ್ನೇ ಹತ್ಯೆ ಮಾಡಿದ್ದಾನೆ.

ತಂದೆ ಇಲ್ಲದಿರುವ ವೇಳೆ ತಾಯಿಯನ್ನು ಹತ್ಯೆ ಮಾಡಿ ಯಮುನಾ ನದಿ ತೀರಕ್ಕೆ ಮೃತದೇಹ ಎಸೆದಿದ್ದ. ಆದರೆ ತಂದೆ ಅನುಮಾನಗೊಂಡು ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಹಿಮಾಂಶು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಹೊರಬಂದಿದೆ.
 

Follow Us:
Download App:
  • android
  • ios