Asianet Suvarna News Asianet Suvarna News

ಆನ್ ಲೈನ್ ಜೂಜಾಟದ ಎಲ್ಲ ಅಪ್ಲಿಕೇಶನ್ ಸ್ಥಗಿತ... ಆಟ ಆಡಿದ್ರೆ ಶಿಕ್ಷೆ ಖಚಿತ!

* ಕರ್ನಾಟಕದಲ್ಲಿ ಆನ್ ಲೈನ್ ಗೇಮ್ ನಿಷೇಧ ಕಾಯ್ದೆ ಜಾರಿ ಹಿನ್ನಲೆ...

* ಇಂದಿನಿಂದ ಅನ್ ಲೈನ್ ಬೆಟ್ಟಿಂಗ್ ಆ್ಯಪ್ ಬಂದ್...

* ತನ್ನ ಕಾರ್ಯಚರಣೆಯನ್ನು ಸ್ಥಗಿತ ಗೊಳಿಸಿದ ಅನ್ ಲೈನ್ ಆ್ಯಪ್..

* ಕರ್ನಾಟಕದಲ್ಲಿ ಅನ್ ಲೈನ್ ಆ್ಯಪ್ ಕಾರ್ಯಚರಣೆ ಸ್ಥಗಿತ..

online gambling banned in Karnataka mah
Author
Bengaluru, First Published Oct 10, 2021, 5:20 PM IST

*ಬೆಂಗಳೂರು(ಅ. 10) ಆನ್ ಲೈನ್ (Online Gaming)  ಗೇಮಿಂಗ್ ನ್ನು ಕರ್ನಾಟಕ ರಾಜ್ಯ ಸರ್ಕಾರ(Karnataka Govt)  ಸಂಪೂರ್ಣವಾಗಿ ನಿಷೇಧಿಸಿದೆ.   ಡ್ರೀಮ್ ಇಲೆವೆನ್, ಮೈ ಇಲೆವೆನ್ ಸರ್ಕಲ್ ಸೇರಿದಂತೆ ಹಲವು ಅನ್ ಲೈನ್  ಗೇಮಿಂಗ್ ಆಪ್ ಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಈ ಮೂಲಕ ರಾಜ್ಯ ಸರ್ಕಾರ ದಿಟ್ಟ  ನಿರ್ಧಾರ ಒಂದನ್ನು ತೆಗೆದುಕೊಂಡಿದೆ.

ಕ್ರಿಕೆಟ್ (Cricket) ಸೇರಿದಂತೆ ಹಲವು ಆಟಗಳ  ಮೇಲೆ  ನಿಮ್ಮ ಇಷ್ಟದ ಪ್ಲೇಯರ್ ಆಯ್ಕೆ ಮಾಡಿಕೊಂಡು ಪಾಯಿಂಟ್ ಗಳಿಸಬಹುದಿತ್ತು. ಆದರೆ  ಈಗ ಎಲ್ಲ ಗೇಮ್ ಗಳಿಗೂ  ನಿಷೇಧ ಹೇರಲಾಗಿದೆ.  ಕಳೆದ ವಿಧಾನಸಭೆ ಕಲಾಪದ ಸಂದರ್ಭದಲ್ಲಿಯೇ ಮಸೂದೆ ಪಾಸಾಗಿತ್ತು.

ಆನ್ ಲೈನ್ ಜೂಜಾಟ.. ಹೊಸ ಕಾಯ್ದೆಯಡಿ ಮೂವರ ಬಂಧನ

ಕರ್ನಾಟಕ ಪೊಲೀಸ್ ಕಾಯಿದೆ 1963ಕ್ಕೆ ತಿದ್ದುಪಡಿ ತಂದು ಕಂಪ್ಯೂಟರ್, ಡಿವೈಸ್, ಮೊಬೈಲ್, ಮೊಬೈಲ್ ಆಪ್, ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್ ಲೈನ್ ಮೂಲಕ ಹಣದ ವ್ಯವಹಾರ ನಡೆಸುವ ಜೂಜಾಟದ ಮಾದರಿಯನ್ನು ನಿಷೇಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.
 
ಕೇರಳ ಮತ್ತು ತಮಿಳುನಾಡಿನಲ್ಲಿಯೂ ಈ ಬಗೆಯ ಗೇಮಿಂಗ್‌ ಗೆ ಈಗಾಗಲೇ ನಿಷೇಧ ಹೇರಲಾಗಿದೆ.  ಆನ್ ಲೈನ್ ಗೇಮಿಂಗ್ ನಿಷೇಧ ಮಾಡಲಾಗಿದ್ದು ಇದರಲ್ಲಿ ತೊಡಗಿಕೊಳ್ಳುವುದು ಕಂಡು ಬಂದರೆ ದಂಡ ಮತ್ತು  ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. 

ಆನ್ ಲೈನ್ ಬೆಟ್ಟಿಂಗ್ ಗೇಮಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಾಯಕ ನಟರ ವಿರುದ್ಧವೂ ಕಮೆಂಟ್ ಗಳು ಕೇಳಿಬಂದಿದ್ದವು.  ಆನ್ ಲೈನ್ ಜೂಜಾಟ ನಿಲ್ಲಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ  ಕ್ಯಾಂಪೇನ್ ಸಹ ನಡೆದಿತ್ತು.  ಅಂತಿಮವಾಗಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಇಂದಿನಿಂದ ಆನ್ ಲೈನ್ ಜೂಜಾಟದ  ಯಾವ ಅಪ್ಲಿಕೇಶನ್ ಗಳು ಓಪನ್ ಆಗುವುದಿಲ್ಲ..

ಆನ್‌ಲೈನ್‌ನಲ್ಲಿ ಇಸ್ಪೀಟ್‌ ಮಾತ್ರವಲ್ಲದೆ ಎಲ್ಲ ರೀತಿಯ ಹಣ ಪಣಕ್ಕಿಡುವ ಆಟಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ.  ಮೂರು ವರ್ಷದವರೆಗೂ ಶಿಕ್ಷೆಯಾಗುವ ಸಾಧ್ಯತೆ ಇದೆ.   ಸೋಶಿಯಲ್ ಮೀಡಿಯಾದಲ್ಲಿಯೂ ಸರ್ಕಾರದ ಕ್ರಮಕ್ಕೆ ಸ್ವಾಗತ ವ್ಯಕ್ತವಾಗಿದೆ.

 

Follow Us:
Download App:
  • android
  • ios