ಧಾರವಾಡ, (ಜ.24): ಕಳೆದ ಜ. 15ರಂದು ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೇದ ಮಂಜುನಾಥ (47) ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.

ಧಾರವಾಡ ಅಪಘಾತದ ಘೋರ ಚಿತ್ರಗಳು..ಬಾಲ್ಯದ ಗೆಳತಿಯರೆಲ್ಲ ದುರಂತಕ್ಕೆ ಬಲಿ

ಮೃತರಾಗಿರುವ ವೇದ ಅವರು ಮಾಜಿ ಶಾಸಕ ಎಚ್. ಚಂದ್ರಶೇಖರ ಅವರ ಪುತ್ರ ಎಚ್.ಎಂ. ಮಂಜುನಾಥ ಅವರ ಧರ್ಮಪತ್ನಿ. ಲಾರಿ ಹಾಗೂ ಮಿನಿ ಬಸ್ ಮಧ್ಯೆ ನಡೆದ ಅಪಘಾತದಲ್ಲಿ ವೇದ ಅವರ 8 ಜನ ಸ್ನೇಹಿತೆಯರು ಅಂದು ಮೃತಪಟ್ಟಿದ್ದರು. ಗಾಯಗೊಂಡಿದ್ದ ವೇದ ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಮಾಜಿ ಸಿಎಂ ಪಟೇಲರ ಸಂಬಂಧಿ,  ಇಂಜಿನಿಯರಿಂಗ್ ಸ್ಟೂಡೆಂಟ್ ಬಲಿಪಡೆದ ಟಿಪ್ಪರ್..ಕಣ್ಣೀರ ಕತೆಗಳು
 
ಆದ್ರೆ, ಇಂದು (ಭಾನುವಾರ) ಚಿಕಿತ್ಸೆ ಫಲಕಾರಿ ಆಗದೇ ಅವರು ಸಹ ಮೃತಪಟ್ಟಿದ್ದು ದುರ್ದೈವದ ಸಂಗತಿ.  ವೇದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಿಡ್ನಿ ಹಾಗೂ ಲಿವರ್‌ನ್ನು ದಾನ ಮಾಡಿದ್ದಾರೆ ತಿಳಿದುಬಂದಿದೆ. ಈ ಮೂಲಕ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿದಂತಾಗಿದೆ.