ಬೈಲಹೊಂಗಲ(ಜು.06): ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ಕಿರುಕುಳ ತಾಳಲಾರದೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯರಡಾಲ ಗ್ರಾಮದಲ್ಲಿ ಭಾನುವಾರ ಜರುಗಿದೆ.

ಪಾರವ್ವ ಮಡಿವಾಳಪ್ಪ ವಾರದ (70) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿದ್ದ 2 ಲಕ್ಷ ಠೇವಣಿ ಹಣವನ್ನು ಮಗ ಶಿವಬಸಪ್ಪ ಮಡಿವಾಳಪ್ಪ ವಾರದ ಕೊಡುವಂತೆ ಪೀಡಿಸುತ್ತಾ ಮೇಲಿಂದ ಮೇಲೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.

ಪೊಲೀಸರು ಬೈಕ್ ಸೀಜ್ ಮಾಡಿದ್ದಕ್ಕೆ ಬಾಲಕ ಆತ್ಮಹತ್ಯೆ

ಇದರಿಂದ ಬೇಸತ್ತ ತಾಯಿ ಹಣವನ್ನು ಮಗನ ಹೆಸರಿಗೆ ವರ್ಗಾಯಿಸಿದ್ದರಿಂದ ಮಾನಸಿಕವಾಗಿ ನೊಂದುಕೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮಗಳು ಗಂಗವ್ವ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.