ಪೊಲೀಸರು ಬೈಕ್ ಸೀಜ್ ಮಾಡಿದ್ದಕ್ಕೆ ಬಾಲಕ ಆತ್ಮಹತ್ಯೆ

ಪೊಲೀಸರು ಬೈಕ್‌ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

Boy commits suicide as his bike seized by Police in Mysore

ಮೈಸೂರು(ಜು.01): ಪೊಲೀಸರು ಬೈಕ್‌ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕೆ.ಆರ್‌. ಮೊಹಲ್ಲಾ ಸುಣ್ಣದಕೇರಿಯ ನಿವಾಸಿ ಕುಮಾರ್‌ ಎಂಬವರ ಪುತ್ರ ದರ್ಶನ್‌(17) ಆತ್ಮಹತ್ಯೆ ಮಾಡಿಕೊಂಡವರು. ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಕೆ.ಆರ್‌. ಸಂಚಾರ ಠಾಣೆ ಪೊಲೀಸರು ದರ್ಶನ್‌ ಬೈಕ್‌ ವಶಕ್ಕೆ ಪಡೆದಿದ್ದು, 2 ತಿಂಗಳ ನಂತರ ಬಿಟ್ಟು ಕಳುಹಿಸಿದ್ದರು.

ಎಪಿಎಂಸಿ ಎಲೆಕ್ಷನ್: ಬಿಜೆಪಿಗರಿಂದ ಕಾಂಗ್ರೆಸ್‌ಗೆ ಮತ..!

ಹೀಗಿರುವಾಗಿ, ಸೋಮವಾರ ಸಂಜೆ ಹಿಂಬದಿ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ಕೆ.ಆರ್‌. ಠಾಣೆಯ ಮುಂಭಾಗದಲ್ಲಿ ದರ್ಶನ್‌ ಮತ್ತು ಆತನ ಸ್ನೇಹಿತ ರವಿ ಹೋಗುವಾಗ ಪೊಲೀಸರು ನಿಲ್ಲಿಸಿ, ಹಿಂಬದಿಯ ನಂಬರ್‌ ಪ್ಲೇಟ್‌ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬೈಕ್‌ನ ದಾಖಲಾತಿ ತೋರಿಸುವಂತೆ ಕೇಳಿದ್ದಾರೆ. ದಾಖಲಾತಿ ಇಲ್ಲದಿದ್ದಾಗ ಬೈಕ್‌ ವಶಪಡಿಸಿಕೊಂಡು, ಮಂಗಳವಾರ ಬೆಳಗ್ಗೆ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಆದರೆ, ಮನೆಗೆ ಬಂದ ದರ್ಶನ್‌ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೈಕ್‌ ವಶಪಡಿಸಿಕೊಂಡ ಪೊಲೀಸರು ರವಿಯನ್ನು ಮನೆಗೆ ಕಳುಹಿಸಿ, ದರ್ಶನ್‌ ಥಳಿಸಿ ಬಳಿಕ ಮನೆಗೆ ಕಳುಹಿಸಿದ್ದಾರೆ. ಈ ನೋವಿನಲ್ಲಿ ದರ್ಶನ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಸಂಬಂಧಿಗಳು, ಸ್ನೇಹಿತರು ಆರೋಪಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ: ಏನೇ ಆದ್ರೂ ನಮ್ ಜವಾವ್ದಾರಿ ಎಂದ ಅಧಿಕಾರಿಗಳು

ಲಾಕ್‌ಡೌನ್‌ ಸಂದರ್ಭದಲ್ಲೂ ಸಂಚಾರ ಪೊಲೀಸರು ದರ್ಶನ್‌ ಬೈಕ್‌ ವಶಕ್ಕೆ ಪಡೆದು, ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸಿದ್ದರು. ದರ್ಶನ್‌ ಬಾಲಕನಾಗಿದ್ದು, ಆತನ ಬಳಿ ಡಿಎಲ್‌ ಇಲ್ಲ. ಹಾಗೆಯೇ, ಬೈಕ್‌ನ ದಾಖಲಾತಿ ಸಹ ಇಲ್ಲ. ಮತ್ತೆ ಪೊಲೀಸರು ಬೈಕ್‌ ವಶಪಡಿಸಿಕೊಂಡಿರುವುದರಿಂದ ಮನೆಯಲ್ಲಿ ಬೈಯುತ್ತಾರೆ ಎಂದು ಹೆದರಿ ದರ್ಶನ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೆ.ಆರ್‌. ಉಪ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ತಿಳಿಸಿದ್ದಾರೆ. ಈ ಕುರಿತು ಕೆ.ಆರ್‌. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Latest Videos
Follow Us:
Download App:
  • android
  • ios