Asianet Suvarna News Asianet Suvarna News

ಜೀವ ತೆಗೆದ ಬಾಡಿಗೆ ಮನೆ : ಗೋಡೆ ಕುಸಿದು ವೃದ್ಧೆ ಸಾವು!

ಬೆಟಗೇರಿಯ ಕುಲಕರ್ಣಿ ಗಲ್ಲಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ..  ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಬೆಳಗಿನ ಜಾವ ಕುಸಿದಿತ್ತು ಪರಿಣಾಮ ಹಾಲ್ ನಲ್ಲಿ ಮಲಗಿದ್ದ ಸೂಸವ್ವ ಕಲ್ಮಠ, ಬಸಮ್ಮ ನಡಕಟ್ಟಿನ ಅವರ ಮೇಲೆ ಗೋಡೆ ಬಿದ್ದಿದೆ. 

old woman daies after house collapse at gadag betageri
Author
First Published Oct 13, 2022, 2:23 PM IST

ಗದಗ (ಅ.13): ಬೆಟಗೇರಿಯ ಕುಲಕರ್ಣಿ ಗಲ್ಲಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ..  ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಬೆಳಗಿನ ಜಾವ ಕುಸಿದಿತ್ತು ಪರಿಣಾಮ ಹಾಲ್ ನಲ್ಲಿ ಮಲಗಿದ್ದ ಸೂಸವ್ವ ಕಲ್ಮಠ, ಬಸಮ್ಮ ನಡಕಟ್ಟಿನ ಅವರ ಮೇಲೆ ಗೋಡೆ ಬಿದ್ದಿದೆ. 

ಮಳೆಗೆ ಶಿಥಿಲಗೊಂಡಿದ್ದ ಮನೆ ಕುಸಿದು ವೃದ್ಧೆ ಸಾವು

ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ಅಡವಯ್ಯ ಕಲ್ಮಠ ಅವರು  ಗೋಡೆ ಕುಸಿದ ತಕ್ಷಣ ಕುಟುಂಬಸ್ಥರು ಗೋಡೆಯ ಅವಶೇಷಗಳ ಅಡಿ ಸಿಲುಕಿದ್ದನ್ನ ಗಮನಿಸಿ ಜನರ ಸಹಾಯದಿಂದ ಮಣ್ಣಿನಡಿ ಸಿಲುಕಿದ್ದ ಇಬ್ಬರನ್ನ ರಕ್ಷಿಸಿದ್ದಾರೆ. ಅಡವಯ್ಯ ಅವರ ಮೊಮ್ಮಗ ಪುಟ್ಟರಾಜ ಖಾಸಗಿ ಹೋಟೆಲ್ ವೊಂದ್ರಲ್ಲಿ ಕೆಲಸ ಮಾಡ್ತಿದ್ದು, ಅವರು ರಾತ್ರಿ ಕೆಲಸಕ್ಕೆ ಹೋಗಿದ್ರು.

ಜೀವಕ್ಕೆ ಕಂಟಕವಾಯ್ತು ಬಾಡಿಗೆ ಮನೆ..!

ರೋಣ(Rona) ತಾಲೂಕಿನ ಅಸೂಟಿ ಮೂಲದವರಾದ ಅಡವಯ್ಯ ಕಲ್ಮಠ(Adavaiah kalmath) ಅವರ ಮೊಮ್ಮಗ ಗದಗ(Gadag)ನಲ್ಲಿ ಕೆಲಸ ಮಾಡ್ತಿದ್ರು.. ಹೀಗಾಗಿ ಗದಗನಲ್ಲಿ ನೆಲೆಸೋದಕ್ಕೆ ಕುಟುಂಬ ಮುಂದಾಗಿತ್ತು. ಕಡಿಮೆ ಬಾಡಿಗೆ ಅನ್ನೋ ಕಾರಣ ಬೆಟಗೇರಿ(Betageri)ಯ ಕುಲಕರ್ಣಿ ಬಡಾವಣೆಯಲ್ಲಿ ಬಾಡಿಗೆ ಬಂದಿದ್ರು. ಕಳೆದ ಎರಡು ವರ್ಷದಿಂದ ಖಾಲಿಯಾಗಿದ್ದ ಮನೆಯನ್ನ ಅಬ್ಬಿಗೇರಿ(Abbigeri) ಅನ್ನೋರು ಬಾಡಿಕೆ ಕೊಟ್ಟಿದ್ರು.

 ಪರಿಚಯಸ್ಥರು ಅನ್ನೋ ಕಾರಣಕ್ಕೆ ಕಡಿಮೆ ಬಾಡಿಗೆಗೆ ಮನೆ ಕೊಟ್ಟಿದ್ರು ಎನ್ನಲಾಗಿದೆ.. ತಂದೆಯನ್ನ ನೋಡೋದಕ್ಕೆ ಬಸಮ್ಮ ಅವರು ಮನೆಗೆ ಬಂದಿದ್ರು. ಆದ್ರೆ, ನಿನ್ನೆ ಸುರಿದ ಮಳೆಯಿಂದ ಗೋಡೆ ಕುಸಿದು ಅವಘಡ ಸಂಭವಿಸಿದೆ.. 

ಆಂಬ್ಯುಲೆನ್ಸ್ ಬರಲಿಲ್ಲ:

ಬೆಳಗಿನ ಜಾವ 6 ಗಂಟೆ ಸುಮಾರಿಗೆ ಏಕಾಏಕಿ ಗೋಡೆ ಕುಸಿದಿದೆ.. ಅಡವಯ್ಯ ಕೂಗಿದ್ದನ್ನ ಕೇಳಿ ಜನ ಸೇರಿದ್ರು. ಸ್ಥಳೀಯರು ಆ್ಯಂಬ್ಯುಲೆನ್ಸ್ (Ambulance)ಗೆ ಫೋನ್ ಮಾಡಿದ್ರು.. ಪ್ರಯೋಜನವಾಗ್ಲಿಲ್ಲ. ಪೊಲೀಸರು, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ರು. ಸ್ಥಳೀಯರಾದ ಮಂಜುನಾಥ್ ಮೆಣಸಿನಕಾಯಿ, ನಾಗರಾಜ್ ಮೆಣಸಿನಕಾಯಿ, ಮುತ್ತಣ್ಣ ತೆಗ್ಗಿನಕೇರಿ, ವಿರೇಶ್ ಬೇಲೇರಿ, ನಿಂಗಪ್ಪ ಹುಚ್ಚನಗೌಡರ್, ಅಶೋಕ್ ಹೆಳವಿ, ನಾಗರಾಜ್ ಹೆಳವಿ, ಅನ್ವರ್ ನದಾಫ್ ಅವರು, ಮಣ್ಣಿನಡಿ ಸಿಲುಕಿದ್ದ ಸೂಸವ್ವ, ಬಸಮ್ಮ ಅವರನ್ನ ಹೊರ ತೆಗೆದ್ರು. 

ರಕ್ಷಣೆ ವೇಳೆ ತಿಪ್ಪಣ್ಣ ಬುರಡಿ ಅನ್ನೋರ ಬೆರಳಿಗೆ ಗಾಯವಾಗಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ, ತೀವ್ರವಾಗಿ ಗಾಯಗೊಂಡಿದ್ದ ಸೂಸವ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದಿದ್ರೆ ಸೂಸವ್ವ ಉಳಿಯುತ್ತಿದ್ದಳು ಅಂತಾ ಸ್ಥಳಿಯರು ಮಾತನಾಡುತ್ತಿದ್ದರು. ಅಂಬುಲೆನ್ಸ್ ವಿಳಂಬಕ್ಕೆ ಸ್ಥಳೀಯರು ಆಕ್ರೋಶಗೊಂಡರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದ ಬಳಿಕ ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ರು. ಬೆಟಗೇರಿ ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಪರಿಶೀಲನೆ ನಡೆಸಿದರು.

ಕೊಪ್ಪಳ: ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು..!

ಆಸ್ಪತ್ರೆಗೆ ಭೇಟಿ ನೀಡಿದ ನಗರಸಭೆ ಅಧ್ಯಕ್ಷೆ:

ವಿಷಯ ತಿಳಿಯುತ್ತಿದ್ದಂತೆ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಾದ ಉಷಾ ಮಹೇಶ ದಾಸರ ಗದಗನ ಸಿಎಸ್ಐ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಆರೋಗ್ಯ ವಿಚಾರಿಸಿದರು. ನೊಂದ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದರು. ಅಲ್ಲದೇ, ಸರ್ಕಾರದಿಂದ ಸಿಗಬಹುದಾದ ಪರಿಹಾರವನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು..

Follow Us:
Download App:
  • android
  • ios