ಅಧಿಕಾರಿಗಳ ಪ್ರಕಾರ, ಆರೋಪಿ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ.
ಮುಂಬೈ (ಜೂ. 17): ಆಘಾತಕಾರಿ ಘಟನೆಯೊಂದರಲ್ಲಿ ಮುಂಬೈನ ಜುಹು ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ 35 ವರ್ಷದ ಮಹಿಳೆಯನ್ನು 75 ವರ್ಷದ ಉದ್ಯಮಿಯೊಬ್ಬಅತ್ಯಾಚಾರ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅನ್ವಯ ಆರೋಪ ಹೊರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಅಧಿಕಾರಿಗಳ ಪ್ರಕಾರ, ಆರೋಪಿ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಉದ್ಯಮಿಯ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದು ವಿಸ್ಮಯಕಾರಿ ಟ್ವಿಸ್ಟ್ ಏನೆಂದರೆ, ಉದ್ಯಮಿಯ ವಿರುದ್ಧ ದೂರು ದಾಖಲಿಸದಂತೆ ಬೆದರಿಕೆ ಹಾಕುವ "ಡಿ" ಗ್ಯಾಂಗ್‌ನಿಂದ ತನಗೆ ಫೋನ್ ಕರೆ ಬಂದಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆರೋಪಿ ಉದ್ಯಮಿ ಸಂತ್ರಸ್ತೆಯಿಂದ 2 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಇದಲ್ಲದೆ, ಸಂತ್ರಸ್ತ ಮಹಿಳೆ ತನ್ನ ವಿರುದ್ಧ ನಡೆಯುತ್ತಿರುವ ಅಪರಾಧಗಳ ವಿರುದ್ಧ ಮಾತನಾಡಲು ಪ್ರಯತ್ನಿಸಿದಾಗ ಉದ್ಯಮಿ ಬೆದರಿಕೆ ಹಾಕಿದ್ದ" ಎಂದು ಮಹಿಳೆ ದೂರಿದ್ದಾರೆ.
ಇದನ್ನೂ ಓದಿ:ಬಾವನ ಮರ್ಮಾಂಗಕ್ಕೆ ಬಿಸಿ ನೀರು ಸುರಿದ ಅತ್ತಿಗೆ: ಕಾರಣ ಇಷ್ಟೇ
ಆರೋಪಿ ಉದ್ಯಮಿ ಮತ್ತು ದಾವೂದ ಇಬ್ರಾಹಿಂನೊಂದಿಗೆ ಸಂಬಂಧ ಹೊಂದಿರುವ ಇತರರು ಆಕೆಯನ್ನು ಮಾತನಾಡಿದರೆ ಕೊಲೆ ಮಾಡಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ತನಿಖೆಯನ್ನು ಈಗ ಅಂಬೋಲಿ ಪೊಲೀಸರಿಂದ ಎಂಐಡಿಸಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಎಂಐಡಿಸಿ ಪೊಲೀಸರು ಮಹಿಳೆಯ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
