Crime News: ಬಾವನ ಮರ್ಮಾಂಗಕ್ಕೆ ಬಿಸಿ ನೀರು ಸುರಿದ ಅತ್ತಿಗೆ: ಕಾರಣ ಇಷ್ಟೇ

ಶುಕ್ರವಾರ ಮನೆಯಲ್ಲಿ ಜಮೀನಿನ ವಿಚಾರವಾಗಿ ಸಣ್ಣಪುಟ್ಟ ಜಗಳವಾಗಿತ್ತು ಎಂದು ಗಾಯಗೊಂಡ ಯುವಕನ ಪತ್ನಿ ತಿಳಿಸಿದ್ದಾರೆ

sister in law pours hot water on private part of the brother in law due to property issue mnj

ಪಾಟ್ನಾ (ಜೂ. 17): ಕೆಲವೊಮ್ಮೆ ಮನೆಯಲ್ಲಿ ಸಣ್ಣ ವಿಷಯಗಳಿಗಾಗುವ ಜಗಳ ತಾರಕಕ್ಕೇರಿ ಅವಾಂತರಕ್ಕೆ ಕಾರಣವಾಗುತ್ತದೆ. ಇಂತಹದೊಂದು ಘಟನೆ ಬಿಹಾರದ ರಾಜಧಾನಿಯಲ್ಲಿ ನಡೆದಿದೆ. ಪಾಟ್ನಾದಲ್ಲಿ ಅತ್ತಿಗೆ ಕೋಪದಲ್ಲಿ ಮಾಡಿದ ಕೃತ್ಯಕ್ಕೆ ಈಗ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ನಡೆದ ಜಗಳದ ನಡುವೆಯೇ ಸಿಟ್ಟಿಗೆದ್ದ ಅತ್ತಿಗೆ, ಬಾವನ ಗುಪ್ತಾಂಗದ ಮೇಲೆ ಕುದಿಯುವ ನೀರನ್ನು ಸುರಿದಿದ್ದಾಳೆ. ಬಿಸಿ ನೀರು ಮೈಮೇಲೆ ಬಿದ್ದ ತಕ್ಷಣ ಯುವಕ ಕಿರುಚಲು ಆರಂಭಿಸಿದ್ದು ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಗಾಯಾಳುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕೃತ್ಯದ ನಂತರ ಅತ್ತಿಗೆ ಇದನ್ನು ಏಕೆ ಮಾಡಿದೆ ಎಂದು ಕೂಡ ವಿವರಿಸಿದ್ದಾಳೆ. ಈ ವಿಷಯ ಭೂ ವಿವಾದಕ್ಕೆ ಸಂಬಂಧಿಸಿದ್ದು ಇದರಿಂದ ಕೋಪಗೊಂಡ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ಬಳಿಕ ತಿಳಿದುಬಂದಿದೆ. 

ವಾಸ್ತವವಾಗಿ, ಫತುಹಾದ ಮಕ್ಸೂದ್‌ಪುರ ಪ್ರದೇಶದ ಮನೆಯೊಂದರಲ್ಲಿ ಜಮೀನಿನ ಬಗ್ಗೆ ವಿವಾದವಿತ್ತು. ಈ ವಿಚಾರವಾಗಿ ಮನೆಯಲ್ಲಿ ಚರ್ಚೆಯಾಗುತ್ತಿತ್ತು. ಶುಕ್ರವಾರವೂ ಜಮೀನಿನ ಹಕ್ಕು ವಿಚಾರವಾಗಿ ಕುಟುಂಬಸ್ಥರು ಜಗಳವಾಡಿದ್ದರು. ಈ ವಿಚಾರದಲ್ಲಿ ಸಿಟ್ಟಿಗೆದ್ದ ಅತ್ತಿಗೆ ಬಾವನ ಗುಪ್ತಾಂಗದ ಮೇಲೆ ಬಿಸಿ ನೀರು ಎರಚಿದ್ದಾಳೆ. 

ಇದನ್ನೂ ಓದಿ: ವ್ಯಾಪಾರದಲ್ಲಿ ನಷ್ಟ: 3 ವರ್ಷದ ಮಗಳ ಮೇಲೆ ವಾಮಾಚಾರ ಮಾಡಿ ಕೊಂದ ತಂದೆ

ಘಟನೆ ಬಳಿಕ ಯುವಕ ಜೋರಾಗಿ ಅಳಲು ಪ್ರಾರಂಭಿಸಿದ್ದು ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  ಘಟನೆಯಲ್ಲಿ ಬಾವನ ಖಾಸಗಿ ಅಂಗಗಳು ಸುಟ್ಟು ಕರಕಲಾಗಿವೆ. ಈ ಬೆನ್ನಲ್ಲೇ ಗಾಯಾಳು ಮಿಥ್ಲೇಶ್ ಕುಮಾರ್ ಅವರ ಪತ್ನಿ ಶೋಭಾದೇವಿ ಅವರು ಫತುಹಾ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. 

ಗಾಯಗೊಂಡ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶುಕ್ರವಾರ ಮನೆಯಲ್ಲಿ ಜಮೀನಿನ ವಿಚಾರವಾಗಿ ಸಣ್ಣಪುಟ್ಟ ಜಗಳವಾಗಿತ್ತು ಎಂದು ಗಾಯಗೊಂಡ ಯುವಕನ ಪತ್ನಿ ತಿಳಿಸಿದ್ದಾರೆ. "ಇದರಲ್ಲಿ ನನ್ನ ಮತ್ತು ಅವಳ ನಡುವೆ ಜಗಳವಾಗಿತ್ತು. ಅದರ ನಂತರ ಅವಳು ನನ್ನ ಗಂಡನ ಮೇಲೆ ಬಿಸಿ ನೀರನ್ನು ಎಸೆದಳು, ಇದರಿಂದಾಗಿ ಅವರ ಜನನಾಂಗವು ಸುಟ್ಟುಹೋಯಿತುʼ ಎಂದು ಪತ್ನಿ ಹೇಳಿದ್ದಾಳೆ.  ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ. 

Latest Videos
Follow Us:
Download App:
  • android
  • ios