ಚಾಮರಾಜನಗರ: ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‌ಬುಕ್‌ನಲ್ಲಿ ಅಶ್ಲೀಲತೆ
ಕಳೆದ ಎರಡು ತಿಂಗಳ ಹಿಂದೆ ಫೇಸ್‌ಬುಕ್ ಪೇಜ್‌ನ್ನು ಹ್ಯಾಕ್ ಮಾಡಲಾಗಿದೆ. ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಪೋಟೋ, ವಿಡಿಯೋ ಹಾಕಲಾಗುತ್ತಿದೆ.
ಹನೂರು(ಸೆ.22): ಮಲೆಮಹದೇಶ್ವರ ಸ್ವಾಮಿ ಹೆಸರಿನಲ್ಲಿ ಪೇಸ್‌ಬುಕ್ ಪೇಜ್‌ನಲ್ಲಿ ಅಶ್ಲೀಲ ವಿಡಿಯೋ ಅಪ್‌ಲೋಡ್ ಆಗುತ್ತಿದ್ದು, ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ. ಕೊಳ್ಳೇಗಾಲದ ಸಂಜಯ್‌ಕುಮಾರ್ 2013ರಲ್ಲಿ ಕ್ರಿಯೇಟ್ ಮಾಡಿರುವ ಈ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿದ್ದರು. ಈ ಪೇಜ್‌ಗೆ ಸುಮಾರು 17 ಸಾವಿರ ಅನುಯಾಯಿಗಳಿದ್ದಾರೆ. ಇದರಲ್ಲಿ ದೇವರ ಪೋಟೋಗಳು, ಪೂಜಾ ಕೈಂಕರ್ಯ ಸೇರಿದಂತೆ ಇತರ ಮಾಹಿತಿಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಈ ಪೇಜ್‌ನ್ನು ಹ್ಯಾಕ್ ಮಾಡಲಾಗಿದೆ. ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಪೋಟೋ, ವಿಡಿಯೊ ಹಾಕಲಾಗುತ್ತಿದೆ.
ಫೇಸ್‌ಬುಕ್ ಪೇಜ್ ಹ್ಯಾಕ್ ಆದ ಮರುದಿನವೇ ಅಡ್ಮಿನ್ ಸಂಜಯ್‌ಕುಮಾರ್ ಸೈಬರ್ ಕ್ರೈಂಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. 30 ಜನರಿಂದ ಈ ಪೇಜ್ ವಿರುದ್ಧ ರಿಪೋರ್ಟ್ ಮಾಡಿಸು ಎಂದು ಪೊಲೀಸರು ಸಂಜಯ್‌ಗೆ ಸಲಹೆ ನೀಡಿದ್ದಾರೆ. ಈವರೆಗೆ 5 ಜನರಿಂದ ಸಂಜಯ್ ರಿಪೋರ್ಟ್ ಮಾಡಿಸಿದ್ದಾರೆ. ಹ್ಯಾಕ್ ಆದ ಪೇಜ್‌ನ್ನು ನಾಶಪಡಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
Bengaluru Crime News: ಸೀರಿಯಲ್ ಡ್ರಗ್ಸ್ ಪೆಡ್ಲರ್ ₹1.60 ಕೋಟಿ ಪ್ರಾಪರ್ಟಿ ಸೀಝ್
ನಾನು ಕ್ರಿಯೇಟ್ ಮಾಡಿದ್ದ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ. ಅದರಲ್ಲಿ ಅಶ್ಲೀಲ ಪೋಟೋ, ವಿಡಿಯೋ ಅಪ್‌ಲೋಡ್ ಆಗುತ್ತಿದ್ದು, ಹ್ಯಾಕ್ ಆಗಿರುವ ಬಗ್ಗೆ ತಿಳಿದ ಜನರು ನನಗೆ ಕರೆ ಮಾಡಿ ಬೈಯುತ್ತಿದ್ದಾರೆ ಅಂತ ಫೇಸ್‌ಬುಕ್ ಪೇಜ್ ಕ್ರಿಯೇಟರ್ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾದಪ್ಪನ ಭಕ್ತರಿಗೆ ತೆರೆದ ಫೇಸ್ಬುಕ್ನಲ್ಲಿ ಹ್ಯಾಕ್ ಮಾಡುವ ಮೂಲಕ ಅಶ್ಲೀಲ ಚಿತ್ರ,ವಿಡಿಯೋ ಹಾಕಿ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಮಾಡಬಾರದು.
ಮಾದೇಶ್ವರ ಸ್ವಾಮಿಗೆ ಕೃತ್ಯಗಳನ್ನು ಯಾರು ಮಾಡಬಾರದು, ಧಾರ್ಮಿಕವಾಗಿ ಪ್ರತಿಯೊಬ್ಬರು ಒಳ್ಳೆಯದನ್ನು ಯೋಚನೆ ಮಾಡಬೇಕು. ಇದರ ಬಗ್ಗೆ ಸಂಬಂಧಪಟ್ಟ ಸೈಬರ್ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಅಂತ ಮಲೆ ಮಹದೇಶ್ವರ ಬೆಟ್ಟ ಪ್ರಗತಿಪರ ಚಿಂತಕ ನಾಗೇಂದ್ರ ಹೇಳಿದ್ದಾರೆ.