Asianet Suvarna News Asianet Suvarna News

ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳಿಂದ ನರ್ಸ್ ಮೇಲೆ ಗ್ಯಾಂಗ್ ರೇಪ್-ಹತ್ಯೆ, 4 ವರ್ಷದ ಮಗಳು ಅನಾಥ!

ಖಾಸಗಿ ನರ್ಸ್‌ಹೋಮ್‌ನಲ್ಲಿ ಭೀಕರ ಅತ್ಯಾಚಾರ ಹಾಗೂ ಕೊಲೆ ನಡೆದಿದೆ.ವೈದ್ಯರು ಹಾಗೂ ಸಿಬ್ಬಂದಿಗಳು ನರ್ಸ್ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿ ಇಟ್ಟಿದ್ದಾರೆ. ಘಟನೆಯಿಂದ ಮಹಿಳೆಯ 4 ವರ್ಷದ ಮಗಳು ತಬ್ಬಲಿಯಾಗಿದ್ದಾಳೆ.

Nurse gang raped and murdered by Doctor and Hospital officials in Bihar body found in Ambulance ckm
Author
First Published Aug 13, 2023, 5:39 PM IST

ಪಾಟ್ನಾ(ಆ.13) ಅತ್ಯಾಚಾರ, ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಹಿಳೆ ಹಾಗೂ ಹೆಣ್ಣುಮಕ್ಕಳ ರಕ್ಷಣೆ ಇದೀಗ ಅತ್ಯಂತ ಸವಾಲಾಗುತ್ತಿದೆ. ಇದೀಗ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳೇ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದ ಘಟನೆ ನಡೆದಿದೆ. ಬಳಿಕ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿಟ್ಟ ಸಭ್ಯರಂತೆ ವರ್ತಿಸಿದ್ದಾರೆ. ಬಿಹಾರದ ಪೂರ್ವ ಚಂಪರನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದಿದೆ. ಈ ಘಟನೆಯಿಂದ ನರ್ಸ್ ಪುಟ್ಟು ಮಗಳು ತಬ್ಬಲಿಯಾಗಿದ್ದಾಳೆ.

30 ವರ್ಷದ ನರ್ಸ್ ಮೋತಿಹಾರಿಯಲ್ಲಿನ ಜಾನಿಕಿ ಸೇವಾ ಸದನ್ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಂಡನಿಂದ ವಿಚ್ಚೇದ ಪಡೆದಿರುವ ಈ ನರ್ಸ್‌ಗೆ 4 ವರ್ಷದ ಮಗಳಿದ್ದಾಳೆ. ತಾಯಿ ಜೊತೆಯಲ್ಲಿರುವ ನರ್ಸ್ ಹಾಗೂ ತನ್ನ 4 ವರ್ಷದ ಪುತ್ರಿ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದರು. ನರ್ಸ್ ತಾಯಿ ಪರಿಚಯಸ್ಥರಾಗಿರುವ ಮಂತೋಷ್ ಕುಮಾರ್ ಹಾಗೂ ಡಾ ಜಯಪ್ರಕಾಶ್ ದಾಸ್ , ಜಾನಿಕಿ ಸೇವಾ ಸದನ್ ನರ್ಸಿಂಗ್ ಹೋಮ್‌ ನಡೆಸುತ್ತಿದ್ದರು. ಇದೇ ವೇಳೆ ಇವರಿಬ್ಬರು ಮನೆಯಲ್ಲಿರುವ ಮಗಳನ್ನು ನರ್ಸ್ ಕೆಲಸಕ್ಕೆ ನೇಮಿಸಿಕೊಳ್ಳುವ ಪ್ರಸ್ತಾವನೆ ಮುಂದಿಟ್ಟಿದ್ದರು.

Bengaluru: ರೇಪ್‌ ಮಾಡಲು ಯತ್ನಿಸಿದಾಗ ವಿರೋಧಿಸಿದಕ್ಕೆ ಉಸಿರುಗಟ್ಟಿಸಿ ಕೊಂದ ಸೆಕ್ಯೂರಿಟಿ!

ಜೀವನದಲ್ಲಿ ನೋಂದಿರುವ ತನ್ನ ಮಗಳಿಗ ಈ ಕೆಲಸದಿಂದ ಸ್ವಾಲಂಬಿಯಾಗಲು ಸಾಧ್ಯ. ಜೊತೆಗೆ ವಿಚ್ಚೇದನ ಹಾಗೂ ಸಂಸಾರದ ನೋವಿನಿಂದ ಹೊರಬರಲು ಉತ್ತಮ ಮಾರ್ಗ ಎಂದು ಮಗಳನ್ನು ಮನವೋಲಿಸಿ ಕೆಲಸಕ್ಕೆ ಸೇರಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಮನೆಗೆ ಬಂದ ಮಗಳು,ಮತ್ತೆ ನರ್ಸಿಂಗ್ ಹೋಮ್‌ಗೆ ತೆರಳಲು ನಿರಾಕರಿಸಿದ್ದಾರೆ. ವಿಚ್ಚೇದಿತ ಮಹಿಳೆಯಾಗಿದ್ದ ಕಾರಣ ಮಂತೋಷ್ ಕುಮಾರ್ ಹಾಗೂ ಡಾ ಜಯಪ್ರಕಾಶ್ ದಾಸ್ ಕಿರುಕುಳ ನೀಡಲು ಆರಂಭಿಸಿದ್ದರು. ಲೈಂಕಿಗವಾಗಿ ಬಳಸಿಕೊಳ್ಳು ಪ್ರಯತ್ನ ನಡೆದಿತ್ತು. ಹೀಗಾಗಿ ಮತ್ತೆ ನರ್ಸಿಂಗ್ ಹೋಮ್‌ಗೆ ಮರಳಲು ನಿರಾಕರಿಸಿದ್ದರು.

ನರ್ಸ್ ಮರಳಿ ಬಾರದ ಕಾರಣ ಮಂತೋಷ್ ಕುಮಾರ್ ಹಾಗೂ ಡಾ ಜಯಪ್ರಕಾಶ್ ದಾಸ್ ನೇರವಾಗಿ ನರ್ಸ್ ಮನೆಗೆ ಬಂದು ತಾಯಿ ಬಳಿಯಲ್ಲಿ ತಮ್ಮಿಂದ ತಪ್ಪಾಗಿದೆ, ಕ್ಷಮಿಸಿ, ಮುಂದೇ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕ್ಷಮೆ ಕೇಳಿದ್ದಾರೆ. ಇಷ್ಟೇ ಅಲ್ಲ ನಾಳೆಯಿಂದಲೇ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ. ಇವರ ಮಾತು ನಂಬಿದ ತಾಯಿ ಮತ್ತೆ ಮಗಳನ್ನು ಮನವೊಲಿಸಿ ಕೆಲಸಕ್ಕೆ ಕಳುಹಿಸಿದ್ದಾಳೆ.

ಆಗಸ್ಟ್ 8 ರಂದು ಕೆಲಸಕ್ಕೆ ಹೋದ ಮಗಳು ಎರಡು ದಿನವಾದರೂ ಫೋನ್ ಮಾಡಿರಲಿಲ್ಲ. ಇತ್ತ ನೈಟ್ ಶಿಫ್ಟ್ ಸೇರಿದಂತೆ ಹೆಚ್ಚುವರಿ ಕೆಲಸದಿಂದ ದೂರವಾಣಿ ಕರೆಗೆ ಸಮಯ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಇತ್ತ ಡಾ.ಜಯಪ್ರಕಾಶ್ ಕರೆ ಮಾಡಿ ನಿಮ್ಮ ಮಗಳ ಆರೋಗ್ಯ ಗಂಭೀರವಾಗಿದೆ. ಈಕೆ ಮುಝಾಫರ್ ನಗರದಲ್ಲಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. 

ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್‌ ಮಾಡಿದ್ರೆ ಇನ್ಮುಂದೆ 20 ವರ್ಷ ಕಠಿಣ ಶಿಕ್ಷೆ: ಅಮಿತ್ ಶಾ ಪ್ರಸ್ತಾಪ

ತಕ್ಷಣವೇ ಆಸ್ಪತ್ರೆಗೆ ತೆರಳಿದ ತಾಯಿಗೆ ಎಲ್ಲೂ ಮಗಳು ಪತ್ತೆಯಾಗಲಿಲ್ಲ. ಅಷ್ಟರಲ್ಲೇ ತಾಯಿಗೆ ಪ್ರಕರಣದ ಗಂಭೀರತೆ ಅರಿವಾಗಿದೆ. ಮಂತೋಷ್ ಕುಮಾರ್ ಹಾಗೂ ಜಯಪ್ರಕಾಶ್ ಫೋನ್ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲ ಸೂಚನೆ ಸಿಕ್ಕಿದೆ. ಇತ್ತ ನರ್ಸ್‌ಗಾಗಿ ಹುಡುಕಾಟ ಶುರುವಾಗಿದೆ. ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ನರ್ಸ್ ಮೃತದೇಹ ಪತ್ತೆಯಾಗಿದೆ. 

ನರ್ಸ್ ತಾಯಿಗೆ ಕರೆ ಮಾಡಿದ ಬಳಿಕ ಮಂತೋಷ್ ಹಾಗೂ ಜಯಪ್ರಕಾಶ್ ನಾಪತ್ತೆಯಾಗಿದ್ದಾರೆ. ಇತ್ತ ಈ ಕೃತ್ಯದಲ್ಲಿ ಭಾಗಿಯಾದ ಕೆಲ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನರ್ಸಿಂಗ್ ಹೋಮ್‌ ಸೀಲ್‌ಡೌನ್ ಮಾಡಲಾಗಿದೆ.
 

Follow Us:
Download App:
  • android
  • ios