Bengaluru: ರೇಪ್‌ ಮಾಡಲು ಯತ್ನಿಸಿದಾಗ ವಿರೋಧಿಸಿದಕ್ಕೆ ಉಸಿರುಗಟ್ಟಿಸಿ ಕೊಂದ ಸೆಕ್ಯೂರಿಟಿ!

ಮನೆ ಹೊರಗೆ ಬಂದವಳ ಎಳೆದೊಯ್ದು ರೇಪ್‌ಗೆ ಯತ್ನ . ಪ್ರತಿರೋಧಿಸಿದ್ದಕ್ಕೆ ಅವಳ ಕುತ್ತಿಗೆಗೆ ಕಟ್ಟಿದ್ದ ದಾರವನ್ನೇ ಬಿಗಿದು ಕೊಂದ ಸೆಕ್ಯೂರಿಟಿ. ಒಡಿಶಾ ಮೂಲದ ಪುರುಷ. ಮೃತ ಯುವತಿ ಕಲಬುರಗಿಯವಳು. 

 

 

Security guard attempt to rape woman strangles her to death in bengaluru gow

ಬೆಂಗಳೂರು (ಆ.13): ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಯುವತಿ ಮುಂಜಾನೆ ಮನೆ ಆವರಣದಲ್ಲೇ ಶವವಾಗಿ ಪತ್ತೆಯಾಗಿದ್ದ ಪ್ರಕರಣ ಭೇದಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲೇ ನೆಲೆಸಿದ್ದ ಕೊಲೆಗಾರನನ್ನು ಬಂಧಿಸಿದ್ದಾರೆ. ಮಹೇಶ್ವರಿನಗರ ನಿವಾಸಿ ಕೃಷ್ಣ ಚಂದ್ರ ಸೇತಿ (28) ಬಂಧಿತ. ಆರೋಪಿಯು ಗುರುವಾರ ರಾತ್ರಿ ಪಕ್ಕದ ಮನೆಯ ಮಹಾನಂದಾ (21)ಳನ್ನು ಮನೆಯೊಳಗೆ ಎಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಜೋರಾಗಿ ಚೀರಾಡಿ ಪ್ರತಿರೋಧವೊಡ್ಡಿದಾಗ ಆಕೆ ಕುತ್ತಿಗೆಗೆ ಧರಿಸಿದ್ದ ದಾರವನ್ನೇ ಬಿಗಿಯಾಗಿ ಹಿಡಿದು ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮುಂಜಾನೆ ಮೃತದೇಹವನ್ನು ಆಕೆಯ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲೂ ಉಡುಪಿ ರೀತಿ ಟಾಯ್ಲೆಟ್‌ನಲ್ಲಿ ವಿಡಿಯೋ : ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಪ್ರಕರಣದ ಹಿನ್ನೆಲೆ: ಕಲಬುರಗಿ ಮೂಲದ ಮಹಾನಂದಾ ಮತ್ತು ಆಕೆಯ ಅಕ್ಕ ಸರೋಜಾ ಮಹದೇವಪುರದ ಮಹೇಶ್ವರಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಲ್ಲಿನ ಖಾಸಗಿ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಸಹೋದರಿಯರು ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಏಕಾಏಕಿ ಮಹಾನಂದಾ ನಾಪತ್ತೆಯಾಗಿದ್ದಳು. ಎಲ್ಲೆಡೆ ಹುಡುಕಾಡಿದ ಅಕ್ಕ ಸರೋಜಾ ರಾತ್ರಿ 12ಕ್ಕೆ ಮಹದೇವಪುರ ಠಾಣೆಗೆ ತೆರಳಿ ತಂಗಿ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಶುಕ್ರವಾರ ಮುಂಜಾನೆ 5 ಗಂಟೆಗೆ ಸರೋಜಾ ಮನೆಯಿಂದ ಹೊರ ಬಂದಾಗ ಆವರಣದಲ್ಲೇ ತಂಗಿ ಮಹಾನಂದಾಳ ಮೃತದೇಹ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಉಸಿರುಗಟ್ಟಿಸಿ ಮಹಾನಂದಾಳನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.

ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಮುಖ್ಯ ಎಂಜಿನಿಯರ್‌ ಸೇರಿ 9

ಪಾದಗಳು ನೀಡಿದ ಸುಳಿವು!: ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಮೃತದೇಹವನ್ನು ಕೂಲಂಕಷವಾಗಿ ತಪಾಸಣೆ ಮಾಡಿದಾಗ, ಮಹಾನಂದಾಳ ಚಪ್ಪಲಿಗಳು ಮನೆ ಬಳಿಯೇ ಇದ್ದವು. ಇನ್ನು ಮೃತದೇಹ ಪಾದಗಳಲ್ಲಿ ಯಾವುದೇ ಧೂಳು ಇಲ್ಲದಿರುವುದು ಕಂಡು ಬಂದಿದೆ. ಮನೆಯ ಸುತ್ತಮುತ್ತ ಮಹಾನಂದಾಳ ಕೊಲೆಯಾಗಿದ್ದು, ಹಂತಕರು ಸಮೀಪದಲ್ಲೇ ಇರಬಹುದು ಎಂದು ಶಂಕಿಸಿದ್ದರು. ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ ಪೊಲೀಸರು, ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ಮಾಡಿದಾಗ, ನೆರೆ ಮನೆಯ ಕೃಷ್ಣ ಚಂದ್ರ ಸೇತಿ ನಡವಳಿಕೆ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಂದು ಡ್ರಮ್‌ನಲ್ಲಿ ಶವ ಇರಿಸಿದ್ದ ಕೃಷ್ಣ: ಆರೋಪಿ ಒಡಿಶಾ ಮೂಲದ ಕೃಷ್ಣ ಚಂದ್ರ ಸೇತಿ ನಗರದ ಟೆಕ್‌ ಪಾರ್ಕ್ವೊಂದರಲ್ಲಿ ಸೆಕ್ಯೂರಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಭಾಗ್ಯಶ್ರೀ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ರಾತ್ರಿ 12 ಗಂಟೆವರೆಗೆ ಪತ್ನಿ ಭಾಗ್ಯಶ್ರೀಗೆ ಕೆಲಸವಿತ್ತು. ಹೀಗಾಗಿ ಮನೆಯಲ್ಲಿ ಕೃಷ್ಣ ಚಂದ್ರ ಒಬ್ಬನೇ ಇದ್ದ. ರಾತ್ರಿ 8 ಗಂಟೆ ಸುಮಾರಿಗೆ ಮಹಾನಂದಾ ಮನೆಯಿಂದ ಹೊರಗೆ ಬಂದಾಗ, ಆರೋಪಿ ಏಕಾಏಕಿ ಆಕೆಯನ್ನು ತನ್ನ ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿ ಆತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಕಿರುಚಾಡಲು ಮುಂದಾದಾಗ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಡ್ರಮ್‌ ಒಳಗೆ ಬಚ್ಚಿಟ್ಟಿದ್ದಾನೆ.

ಮನೆಯಿಂದ ಹೊರಗೆ ಬರಲಿಲ್ಲ: ಆರೋಪಿ ಕೃಷ್ಣ ಚಂದ್ರ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಮೃತದೇಹವನ್ನು ಡ್ರಮ್‌ನಿಂದ ಹೊರಗೆ ತೆಗೆದು ಮಹಾನಂದಾಳ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದಾನೆ. ಬೆಳಗ್ಗೆ ಮೃತದೇಹ ಪತ್ತೆಯಾಗಿ ಜನ ಜಮಾಯಿಸಿದ್ದರೂ ಆರೋಪಿ ಮಾತ್ರ ಮನೆಯಿಂದ ಹೊರಗೆ ಬಂದಿಲ್ಲ. ಪೊಲೀಸರು ವಠಾರದಲ್ಲಿರುವ ಪ್ರತಿಯೊಬ್ಬರನ್ನು ವಿಚಾರಣೆ ಮಾಡುವಾಗ, ಕೃಷ್ಣ ಚಂದ್ರನನ್ನು ಕರೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ಅನುಮಾನಾಸ್ಪದವಾಗಿ ವರ್ತಿಸಿದಾಗ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮಹಾನಂದಾಳ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ.

Latest Videos
Follow Us:
Download App:
  • android
  • ios