Asianet Suvarna News Asianet Suvarna News

Robbery: ಪತ್ನಿ ನೋಡಿಕೊಳ್ಳಲು ನೇಮಿಸಿದ ನರ್ಸ್..ರಾತ್ರೋ ರಾತ್ರಿ ಆಭರಣಗಳೊಂದಿಗೆ ಎಸ್ಕೇಪ್!

* ಕೆಲಸಕ್ಕೆ ಅಂತ ಬಂದು ಮನೆಗೆ ಕನ್ನ ಹಾಕಿದ ಖತರ್ನಾಕ್ ನರ್ಸ್

* ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಬೆಲೆಬಾಳು ಚಿನ್ನ ಕದ್ದು ಎಸ್ಕೇಪ್

* ಅಮೃತಹಳ್ಳಿಯ ವೆಂಕಟ ಲೇಔಟ್ ನಲ್ಲಿ ನಡೆದ ಘಟನೆ

* ಪತ್ನಿಯನ್ನು ನೋಡಿಕೊಳ್ಳಲು ಏಜೆನ್ಸಿ ಯಿಂದ ನರ್ಸ್ ನೇಮಕ ಮಾಡಿಕೊಂಡಿದ್ದ ಮನೆ ಮಾಲೀಕ

Nurse flees with gold jewellery Bengaluru mah
Author
Bengaluru, First Published Dec 29, 2021, 12:24 AM IST

ಬೆಂಗಳೂರು(ಡಿ. 29)  ಕೆಲಸಕ್ಕೆ ಅಂತಾ ಬಂದ ಈ ನರ್ಸಮ್ಮ(Nurse) ಮನೆಗೆ  ಕನ್ನ ಹಾಕಿದ್ದಾಳೆ ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ (Gold) ಕದ್ದು (Theft) ಎಸ್ಕೇಪ್ ಆಗಿದ್ದಾಳೆ. ಅಮೃತಹಳ್ಳಿಯ (Bengaluru) ವೆಂಕಟ ಲೇಔಟ್ ನಲ್ಲಿ ನಡೆದ ಘಟನೆ ನಡೆದಿದೆ.

ಮನೆ ಮಾಲೀಕ ಪತ್ನಿಯನ್ನು ನೋಡಿಕೊಳ್ಳಲು ಏಜೆನ್ಸಿ ಯಿಂದ ನರ್ಸ್ ನೇಮಕ ಮಾಡಿಕೊಂಡಿದ್ದ.  ಅನಾರೋಗ್ಯದಿಂದ (Health Issue) ಬಳಲುತ್ತಿದ್ದ (Wife) ಪತ್ನಿಯನ್ನು ನೋಡಿಕೊಳ್ಳಲು ಡಿ ನೋವಾ ಏಜೆನ್ಸಿ ಯಿಂದ ಪವಿತ್ರ ಎಂಬ ನರ್ಸ್ ನನ್ನ ನೇಮಿಸಿಕೊಳ್ಳಲಾಗಿತ್ತು. ಮನೆಗೆ ಬಂದು ಎಂಟು ದಿನಗಳಲ್ಲಿ  ನರ್ಸ್ ಚಾಲಾಕಿತನ ತೋರಿಸಿದ್ದಾಳೆ.

ರಾತ್ರಿ ಮನೆಯ ಕಬೋರ್ಡ್ ನಲ್ಲಿದ್ದ ನಾಲ್ಕೂವರೆ ಲಕ್ಷ ಬೆಲೆಬಾಳು ಚಿನ್ನವನ್ನು ಕದ್ದು ಎಸ್ಕೇಪ್ ಆಗಿದ್ದಾಳೆ. ತನ್ನ ತಾಯಿಗೆ ಹುಷಾರು ಇಲ್ಲ ಅಂತಾ ನೆಪ ಹೇಳಿ ಮನೆ ಮಾಲೀಕರಿಂದ ಹಣ ಪಡೆದು ಎಸ್ಕೇಪ್ ಆಗಿದ್ದಾಳೆ. ಸದ್ಯ ಖತರ್ನಾಕ್ ಕಳ್ಳಿ ನರ್ಸ್ ನ ಬಂಧಿಸಿರುವ ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Suvarna FIR: ವಿಜಯಪುರ,  ಹಗಲಿಗೆ ಐಪೋನ್ ಜಾರ್ಜರ್‌ ಕೇಳಿ ರಾತ್ರಿ ಮನೆ ದೋಚುತ್ತಾರೆ...!

ಉಂಡ ಮನೆಗೆ ಕನ್ನ:  ಮನೆಯವರಿಗೆ ಆಮಲು ಪದಾರ್ಥ ನೀಡಿ  ಮನೆ ಕೆಲಸದಾಕೆಯೇ ಮನೆ ದರೋಡೆ ಮಾಡಿದ್ದ ಪ್ರಕರಣ ಮಹಾರಾಷ್ಟ್ರದ ಪುಣೆ(pune)ಯ ಬವ್ಧಾನ್‌(Bavdhan)ನಿಂದ ವರದಿಯಾಗಿತ್ತು.  ಮನೆಯ ಯಜಮಾನ ವಿದೇಶದಲ್ಲಿದ್ದು, ಇಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳು ಮಾತ್ರ ಇದ್ದರು. ಮನೆ ಯಜಮಾನನ ಪತ್ನಿ ಹಾಗೂ ಮಕ್ಕಳಿಗೆ ಆಮಲು ಪದಾರ್ಥ ನೀಡಿದ ಮನೆ ಕೆಲಸದಾಕೆ ಮನೆಯಲ್ಲಿದ್ದ  1.5  ಲಕ್ಷ ಮೊತ್ತದ ಹಣವನ್ನು  ಎತ್ತಿಕೊಂಡು ಪರಾರಿಯಾಗಿದ್ದಳು.

ಮನೆ ಕೆಲಸದಾಕೆ ತನ್ನ ಗಂಡನ ನೆರವಿನಿಂದ ಈ ಕೃತ್ಯವೆಸಗಿದ್ದಳು.  ಮೊದಲು ಮನೆಯವರಿಗೆ ಆಮಲು ಪದಾರ್ಥ ನೀಡಿದ ಆಕೆ ಮನೆಯವರು ಪ್ರಜ್ಞೆ ತಪ್ಪುತ್ತಿದ್ದಂತೆ ತನ್ನ ಗಂಡನನ್ನು ಕರೆಸಿ ಮನೆಯಲ್ಲಿದ್ದ ಸುಮಾರು 1.5 ಲಕ್ಷ ಮೌಲ್ಯದ ಹಣದೊಂದಿಗೆ ಪರಾರಿಯಾಗಿದ್ದರು. ಇತ್ತ ವಿದೇಶದಲ್ಲಿರುವ ಪತಿ ಪುಣೆಯಲ್ಲಿರುವ ತನ್ನ ಹೆಂಡತಿ ಮಕ್ಕಳಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರು ಯಾರು ಕರೆ ಸ್ವೀಕರಿಸಿರಲಿಲ್ಲ.

ಧಾರಾವಾಹಿ ಹುಚ್ಚು..ಮನೆ ದರೋಡೆ:  ತಮಿಳುನಾಡಿನ (Tamil Nadu) ಕಾಂಚೀಪುರಂನಲ್ಲಿ ಮನೆಯೊಂದನ್ನು ದರೋಡೆ (Robbery) ಮಾಡಲಾಗಿತ್ತು.. ಕಳ್ಳರು ದರೋಡೆ ಮಾಡುತ್ತಿರುವಾಗ ಇಬ್ಬರು ಮಹಿಳೆಯರು (Woman) ಸೀರಿಯಲ್  (TV serial) ನೋಡುತ್ತಲೇ  ಇದ್ದರು! ನಾಲ್ವರು ಕಳ್ಳರ ತಂಡ ಮನೆಯನ್ನು ದರೋಡೆ ಮಾಡಿದ್ದು ಸುಮಾರು  19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು (Gold Jewellery)ದೋಚಿ ಪರಾರಿಯಾಗಿತ್ತು.

ವೃತ್ತಿಯಲ್ಲಿ ಆಡಿಟರ್ ಆಗಿರುವ ಮೇಗನಾಥನ್  ಅವರ ಮನೆ ದರೋಡೆಯಾಗಿದೆ. ಅವರ  ಸಹೋದರ ಸರ್ಕಾರಿ ನೌಕರ. ಕಳ್ಳತನ ನಡೆಯುವ ವೇಳೆ ಮೇಘನಾಥನ್ ಅವರ ಪತ್ನಿ ತನ್ನ ಸೋದರ ಸಂಬಂಧಿಯೊಂದಿಗೆ  ಸೀರಿಯಲ್ ನೋಡುತ್ತಿದ್ದರು!

ಮನೆಯ ಬಾಗಿಲಿನ ಕಡೆ ಗಮನ ಕೊಡದೇ ಟಿವಿ ಸೌಂಡ್ ಜಾಸ್ತಿ ಇಟ್ಟುಕೊಂಡು ಧಾರಾವಾಹಿ ನೋಡುವುದರಲ್ಲಿ ತಲ್ಲೀನವಾಗಿದ್ದರು.  ಈ ಗ್ಯಾಪ್ ನಲ್ಲಿ ಮಾಸ್ಕ್ ಧರಿಸಿ ಬಂದ ತಂಡ ಮನೆಯಲ್ಲಿನ ಆಭರಣ ದೋಚಿದೆ. 50 ಸವರಿನ್ ಚಿನ್ನಾಭರರಣ ಕಳ್ಳರ ಪಾಲಾಗಿತ್ತು. 

Follow Us:
Download App:
  • android
  • ios