Asianet Suvarna News Asianet Suvarna News

ಇಷ್ಟೇ ಸಿಖ್ಖರು ಸತ್ತಿದ್ದಾ ಎಂದಿದ್ರಂತೆ ಕಾಂಗ್ರೆಸ್‌ನ ಜಗದೀಶ್ ಟೈಟ್ಲರ್: ಸಿಬಿಐ ಸ್ಪೋಟಕ ಚಾರ್ಜ್‌ಶೀಟ್‌

ನಮ್ಮ ತಾಯಿಯನ್ನು (ಇಂದಿರಾ ಗಾಂಧಿ) ಅವರನ್ನು ಸಿಖ್ಖರು ಕೊಂದಿದ್ದಾರೆ. ಹೀಗಾಗಿ ಅವರನ್ನು (ಸಿಖ್ಖರನ್ನು) ಕೊಲ್ಲಿ. ಕೊಲ್ಲಲು ಭಯ ಪಡಬೇಡಿ. ನಾಳೆ ನಿಮ್ಮ ಮೇಲೆ ಯಾವುದೇ ಕೇಸು ದಾಖಲಾಗದಂತೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ಜಗದೀಶ್‌ ಟೈಟ್ಲರ್‌ ಹೇಳಿದ್ದರು ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ ಎಂದು ಸಿಬಿಐ ಸಲ್ಲಿಸಿದ್ದ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿದೆ.

not enough sikhs killed said congress s jagdish tytler to mob cbi case ash
Author
First Published Aug 6, 2023, 2:30 PM IST

ನವದೆಹಲಿ (ಆಗಸ್ಟ್‌ 6, 2023): 1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದ ಸಿಖ್‌ ವಿರುದ್ಧ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜಗದೀಶ್‌ ಟೈಟ್ಲರ್‌ ಪ್ರಮುಖ ಪಾತ್ರ ವಹಿಸಿದ್ದರು. ದೆಹಲಿಯ ಗುರುದ್ವಾರದ ಬಳಿ ಸಿಖ್ಖರನ್ನು ಕೊಲ್ಲುವಂತೆ ಜನಸಮೂಹವನ್ನು ಪ್ರಚೋದಿಸಿದ್ದರು. ‘ಇನ್ನಷ್ಟು ಸಿಖ್ಖರು ಸಾಯಬೇಕಿತ್ತು’ ಎಂದೂ ಅವರು ಹೇಳಿದ್ದರು ಎಂಬ ಸ್ಫೋಟಕ ಅಂಶ ಎಂದು ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿದೆ. 

ಮೇ 20ರಂದು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಜಗದೀಶ್‌ ಟೈಟ್ಲರ್‌ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಹಾಗೂ ಅವರ ಪಾತ್ರ ವಿವರಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 39 ವರ್ಷಗಳಷ್ಟು ಹಳೆಯದಾದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜಗದೀಶ್‌ ಟೈಟ್ಲರ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.

ಇದನ್ನು ಓದಿ: Rahul Gandhi Disqualification: ಕೈ ಪ್ರತಿಭಟನೆಯಲ್ಲಿ ಜಗದೀಶ್ ಟೈಟ್ಲರ್ ಭಾಗಿ; ಗಾಂಧಿಗೆ ಅವಮಾನ ಎಂದು ನೆಟ್ಟಿಗರ ಟೀಕೆ

‘’ಟೈಟ್ಲರ್ ಸಿಖ್ಖರನ್ನು ಕೊಲ್ಲಲು ಜನಸಮೂಹವನ್ನು ಪ್ರಚೋದಿಸಿದರು, ಇದರ ಪರಿಣಾಮವಾಗಿ ಗುರುದ್ವಾರ ಪುಲ್ ಬಂಗಾಶ್ ಅನ್ನು ಜನಸಮೂಹವು ಸುಟ್ಟುಹಾಕಿತು ಮತ್ತು 1.11.1984 ರಂದು ಸಿಖ್ ಸಮುದಾಯಕ್ಕೆ ಸೇರಿದ ಮೂವರನ್ನು ಕೊಂದಿತು" ಎಂದು ಸಿಬಿಐ ಹೇಳಿದೆ. ಗುರುದ್ವಾರ ಪುಲ್ ಬಂಗಾಶ್ ಮತ್ತು ಠಾಕೂರ್ ಸಿಂಗ್ ಹಾಗೂ ಬಾದಲ್ ಸಿಂಗ್ ಎಂಬುವರು ಆ ವೇಳೆ ಬಲಿಯಾಗಿದ್ದರು. ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಗುಂಪನ್ನು ಪ್ರಚೋದಿಸುವುದನ್ನು ತಾನು ನೋಡಿದ್ದೇನೆ ಎಂದು ಸಾಕ್ಷಿಯೊಬ್ಬರು ಸಿಬಿಐ ಚಾರ್ಜ್ ಶೀಟ್ ಉಲ್ಲೇಖಿಸಿದ್ದಾರೆ.

ಜಗದೀಶ್‌ ಟೈಟ್ಲರ್‌ ಮಾಡಿದ್ದೇನು?:
ಆಗ ಸಂಸದರಾಗಿದ್ದ ಜಗದೀಶ್‌ ಟೈಟ್ಲರ್‌, ಇಂದಿರಾ ಅವರನ್ನು ಸಿಖ್‌ ಅಂಗರಕ್ಷಕರು ಹತ್ಯೆ ಮಾಡಿದ್ದರಿಂದ ಕ್ರುದ್ಧರಾಗಿದ್ದರು. ಹೀಗಾಗಿ ಜನರನ್ನು ಪ್ರಚೋದನೆಯಿಂದ 1984ರ ಡಿಸೆಂಬರ್ 1 ರಂದು ದೆಹಲಿಯಲ್ಲಿ ಗುರುದ್ವಾರದ ಮೇಲೆ ದಾಳಿ ನಡೆಸಿ ಮೂರು ಸಿಖ್ಖರನ್ನು ಉದ್ರಿಕ್ತರು ಕೊಂದು ಹಾಕಿದರು.

ಇದನ್ನೂ ಓದಿ: ಮಾಜಿ ಸಿಎಂ OSDಗೆ ವಿಡಿಯೋ ಕಾಲ್‌ ಮೂಲಕ ಹನಿಟ್ರ್ಯಾಪ್‌: ಲಕ್ಷಾಂತರ ರೂ. ಸುಲಿಗೆ ಮಾಡಿದ ವಂಚಕರು!

‘ನಾನು ಅತಿ ಹೆಚ್ಚು ಸಿಖ್ಖರನ್ನು ಕೊಲ್ಲಿಸುವುದಾಗಿ ಭರವಸೆ ನೀಡಿದ್ದೆ. ಆದರೆ ನೀವು ಕಡಿಮೆ ಜನರನ್ನು ಕೊಂದು ನನಗೆ ಮೋಸ ಮಾಡಿದಿರಿ’ ಎಂದು ಉದ್ರಿಕ್ತರಿಗೆ ಜಗದೀಶ್‌ ಟೈಟ್ಲರ್‌ ಹೇಳಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮ ಸಭೆಯಲ್ಲಿ ಭಾಗವಹಿಸಿದ್ದರು. ಮೇಲಾಗಿ ಅಂದು ಕಾರಿನಿಂದ ಇಳಿದ ಜಗದೀಶ್‌ ಟೈಟ್ಲರ್‌ ಗುಂಪನ್ನು ಪ್ರಚೋದಿಸಿದ್ದನ್ನು ತಾನು ನೋಡಿದ್ದಾಗಿ ಸಾಕ್ಷಿಯೊಬ್ಬರು ಹೇಳಿದ್ದಾರೆ ಎಂದು ಸಿಬಿಐ ಹೇಳಿದೆ. ಶುಕ್ರವಾರವಷ್ಟೇ ಜಗದೀಶ್‌ ಟೈಟ್ಲರ್‌ಗೆ ದಿಲ್ಲಿ ಸ್ಥಳೀಯ ಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ನಮ್ಮ ತಾಯಿಯ ಕೊಂದಿದ್ದಾರೆ:
‘ನಮ್ಮ ತಾಯಿಯನ್ನು (ಇಂದಿರಾ ಗಾಂಧಿ) ಅವರನ್ನು ಸಿಖ್ಖರು ಕೊಂದಿದ್ದಾರೆ. ಹೀಗಾಗಿ ಅವರನ್ನು (ಸಿಖ್ಖರನ್ನು) ಕೊಲ್ಲಿ. ಕೊಲ್ಲಲು ಭಯ ಪಡಬೇಡಿ. ನಾಳೆ ನಿಮ್ಮ ಮೇಲೆ ಯಾವುದೇ ಕೇಸು ದಾಖಲಾಗದಂತೆ ನಾನು ಗ್ಯಾರಂಟಿ ನೀಡುತ್ತೇನೆ’ ಎಂದೂ ಜಗದೀಶ್‌ ಟೈಟ್ಲರ್‌ ಹೇಳಿದ್ದರು ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ ಎಂದು ಸಿಬಿಐ ಸಲ್ಲಿಸಿದ್ದ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿದೆ.

ಇದನ್ನೂ ಓದಿ: ಸಲಿಂಗಿ ಪುರುಷರನ್ನು ಬೆತ್ತಲೆಗೊಳಿಸಿ ದರೋಡೆ ಮಾಡ್ತಿದ್ದ ರೌಡಿ ಶೀಟರ್ ಅಫ್ರಿದಿ!

1984 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ವಿವಾದಾತ್ಮಕ "ಆಪರೇಷನ್ ಬ್ಲೂ ಸ್ಟಾರ್" ನಂತರ ಹತ್ಯೆ ಮಾಡಿತ್ತು. ಇದು, ದೇಶದಲ್ಲಿ ಸಿಖ್ ಸಮುದಾಯದ ಮೇಲೆ ಹಿಂಸಾತ್ಮಕ ದಾಳಿಗೆ ಕಾರಣವಾಯಿತು. ಗಲಭೆಯಲ್ಲಿ ಕನಿಷ್ಠ 3,000 ಜನರು ಸತ್ತರು. ಸ್ವತಂತ್ರ ಮೂಲಗಳು ದೆಹಲಿಯಲ್ಲಿ ಕನಿಷ್ಠ 3,000 ಸೇರಿದಂತೆ 8,000 ಜನ ಸತ್ತರು ಎಂದು ಅಂದಾಜಿಸಿದೆ. ಜಗದೀಶ್‌ ಟೈಟ್ಲರ್‌ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮೂರು ಸಂದರ್ಭಗಳಲ್ಲಿ ಕ್ಲೀನ್ ಚಿಟ್ ನೀಡಿತು. ಆದರೆ ನ್ಯಾಯಾಲಯವು ಈ ವಿಷಯವನ್ನು ಮತ್ತಷ್ಟು ತನಿಖೆ ಮಾಡಲು ಏಜೆನ್ಸಿಯನ್ನು ಕೇಳಿದೆ.

ಇದನ್ನೂ ಓದಿ: 2ನೇ ಮದ್ವೆಯಾಗಿದ್ಕೆ ಸತ್ತ ಮೇಲೂ ಸವತಿ ಕಾಡಿದ ಮೊದಲ ಹೆಂಡ್ತಿ: ‘ಆತ್ಮ’ದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ

Follow Us:
Download App:
  • android
  • ios