ಮಾಜಿ ಸಿಎಂ OSDಗೆ ವಿಡಿಯೋ ಕಾಲ್‌ ಮೂಲಕ ಹನಿಟ್ರ್ಯಾಪ್‌: ಲಕ್ಷಾಂತರ ರೂ. ಸುಲಿಗೆ ಮಾಡಿದ ವಂಚಕರು!

ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಇವರಿಗೆ ಹನಿಟ್ರ್ಯಾಪ್‌ ಮಾಡಲಾಗಿದ್ದು, ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.  

aide of ex cm attends video call loses rs 6 8 lakhs to sextortion ash

ಬೆಂಗಳೂರು (ಆಗಸ್ಟ್‌ 5, 2023): ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಒಎಸ್‌ಡಿ) ಸೇವೆ ಸಲ್ಲಿಸಿದ 58 ವರ್ಷದ ವ್ಯಕ್ತಿಯೊಬ್ಬರಿಗೆ ಹನಿಟ್ರ್ಯಾಪ್‌ ಮಾಡಲಾಗಿದೆ. ಇತ್ತೀಚೆಗೆ ನಕಲಿ ವಿಡಿಯೋ ಕಾಲ್‌ ಬಂದಿದ್ದು, ಬಳಿಕ ಲಕ್ಷಾಂತರ ರೂ. ಹಣ ಸುಲಿಗೆಗೊಳಗಾಗಿರುವ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಅತಿಥಿ ಗೃಹದಲ್ಲಿ ಸ್ನಾನ ಮುಗಿಸಿ ಬಾತ್‌ರೂಮಿನಿಂದ ಹೊರಬರುತ್ತಿದ್ದಾಗ ವಿಡಿಯೋ ಕರೆ ಬಂದಿದೆ. ಈ ವಿಡಿಯೋ ಕಾಲ್‌ಗೆ ಸಂಬಂಧಪಟ್ಟಂತೆ 6.8 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ವಂಚಕರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಇವರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಬಳಿಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಸಲಿಂಗಿ ಪುರುಷರನ್ನು ಬೆತ್ತಲೆಗೊಳಿಸಿ ದರೋಡೆ ಮಾಡ್ತಿದ್ದ ರೌಡಿ ಶೀಟರ್ ಅಫ್ರಿದಿ!

ಜೂನ್ 12 ರಂದು ಯಾವುದೋ ಕೆಲಸದ ನಿಮಿತ್ತ ನಾಸಿಕ್‌ಗೆ ಹೋಗಿ ಅತಿಥಿ ಗೃಹದಲ್ಲಿ ತಂಗಿದ್ದೆ. ರಾತ್ರಿ 8 ಗಂಟೆ ಸುಮಾರಿಗೆ ಸ್ನಾನ ಮಾಡಿ ಬಾತ್‌ರೂಮಿನಿಂದ ಹೊರಬಂದೆ. ಟವೆಲ್‌ನಿಂದ ತನ್ನನ್ನು ತಾನೇ ಒಣಗಿಸುತ್ತಿರುವಾಗ, ತನಗೆ ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕರೆ ಬಂದಿತು. ಕಾಲ್‌ ರಿಸೀವ್ ಮಾಡಿದಾಗ, ಆ ಕಡೆಯಲ್ಲಿ ತನಗೆ ಪರಿಚಯವಿಲ್ಲದ ಮಹಿಳೆ ಮತ್ತು ಪುರುಷ ಇದ್ದರು. ನಾನು ಕಾಲ್‌ ಕಟ್‌ ಮಾಡುವ ಮೊದಲು, ಕರೆ ಮಾಡಿದವರೇ ಸ್ವತಃ ಸ್ಥಗಿತಗೊಳಿಸಿದರು ಎಂದೂ ಅವರು ಹೇಳಿಕೊಂಡಿದ್ದಾರೆ.

ಬಳಿಕ, ಯಾರೋ ತಪ್ಪಾಗಿ ಕರೆ ಮಾಡಿ ನಿರ್ಲಕ್ಷಿಸಿರಬಹುದು ಎಂದು ತಿಳಿದುಕೊಂಡೆ. ಆದರೆ, ಮರುದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಮಹೇಂದ್ರ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾರೆ ಮತ್ತು ರಾಷ್ಟ್ರೀಯ ಹಿಂದಿ ಸುದ್ದಿ ವಾಹಿನಿಯ ವರದಿಗಾರ ಎಂದು ಹೇಳಿಕೊಂಡರು. ತನಗೆ ವಿಡಿಯೋ ಕಾಲ್ ಮಾಡಿ ವಿವಸ್ತ್ರಗೊಳಿಸಿದ ಬಗ್ಗೆ ಮಹಿಳೆಯಿಂದ ದೂರು ಬಂದಿರುವುದಾಗಿ ಕರೆ ಮಾಡಿದವರು ಹೇಳಿದ್ದಾರೆ. ಹಾಗೂ, ಅವರ ವಿಡಿಯೋ ಕ್ಲಿಪ್ಪಿಂಗ್ ಅನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳಿ ಕರೆ ಮಾಡಿದವರು ಹಣಕ್ಕೆ ಬೇಡಿಕೆಯಿಟ್ಟರು ಎಂದೂ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆಯಾಗಿದ್ಕೆ ಸತ್ತ ಮೇಲೂ ಸವತಿ ಕಾಡಿದ ಮೊದಲ ಹೆಂಡ್ತಿ: ‘ಆತ್ಮ’ದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ

ಜೂನ್ 12 ರಂದು ತನಗೆ ವಿಡಿಯೋ ಕಾಲ್ ಮಾಡಿದ್ದ ಪುರುಷ ಮತ್ತು ಮಹಿಳೆ ತನ್ನನ್ನು ರೆಕಾರ್ಡ್ ಮಾಡಿದ್ದಾರೆ. ನಾನು ಹನಿಟ್ರ್ಯಾಪ್‌ಗೊಳಗಾಗಿದ್ದೇನೆ ಎಂದು ಅವರು ಅರಿತುಕೊಂಡರು. ಅಲ್ಲದೆ, ಹಣವನ್ನು ಸ್ವೀಕರಿಸಿದ ನಂತರ ವಿಡಿಯೋ ಡಿಲೀಟ್‌ ಮಾಡೋದಾಗಿ ಮಹೇಂದ್ರ ಸಿಂಗ್ ಎಂದು ಹೇಳಿದವರು ದೂರು ನೀಡಿದ ವ್ಯಕ್ತಿಗೆ ಭರವಸೆ ನೀಡಿದರು. ಬಳಿಕ, ಕರೆ ಮಾಡಿದ ವ್ಯಕ್ತಿ ನೀಡಿದ ಎರಡು ಖಾತೆಗಳಿಗೆ 1.5 ಲಕ್ಷ ಮತ್ತು 50 ಸಾವಿರ ರೂ. -ಹೀಗೆ 2 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ.

ಬಳಿಕ, ಜುಲೈ 14 ರಂದು ನಾಸಿಕ್‌ನಲ್ಲೇ ಇದ್ದ ಅವರಿಗೆ ನಾಲ್ಕು ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬಂದವು. ಆ ಕರೆ ಮಾಡಿದವರೆಲ್ಲರೂ, ಸಿಬಿಐನ ವಿಶೇಷ ಅಧಿಕಾರಿ ದಿನೇಶ್ ಕುಮಾರ್ ಎಂದು ಪರಿಚಯಿಸಿಕೊಂಡರು. ನಿಮ್ಮ ವಿಡಿಯೋ ಕಾಲ್‌ನಲ್ಲಿ ನಗ್ನವಾಗಿ ಮಾತನಾಡಿರುವ ಬಗ್ಗೆ ಮಹಿಳೆಯೊಬ್ಬರು ತನಗೆ ದೂರು ನೀಡಿದ್ದರು ಎಂದು ಅವರು ಹೇಳಿದ್ದಾರೆ. ಹಾಗೂ, ರತ್ನೇಶ್ ಕುಮಾರ್ ಹೆಸರಿನಲ್ಲಿರುವ ಎರಡು ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸುವಂತೆ ಡಿಮ್ಯಾಂಟ್‌ ಇಟ್ಟಿದ್ದಾರೆ.. ಕರೆ ಮಾಡಿದವರ ಬೇಡಿಕೆಯಂತೆ ಅ ವ್ಯಕ್ತಿ ಒಂದು ಖಾತೆಗೆ 2 ಲಕ್ಷ ಹಾಗೂ ಇನ್ನೊಂದು ಖಾತೆಗೆ 2.8 ಲಕ್ಷ ರೂ. ಟ್ರಾನ್ಸ್‌ಫರ್‌ ಮಾಡಿದ್ದಾರೆ.

ಇದನ್ನೂ ಓದಿ:  ಬಾಲಕಿ ರೇಪ್‌ ಮಾಡಿ ಸಾಕ್ಷ್ಯ ನಾಶ ಮಾಡಲು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಕೊಂದ ಪಾಪಿಗಳು!

ಆದರೆ, ಮತ್ತೆ  ಹೆಚ್ಚುವರಿ 7.2 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್‌ ಮಾಡಿದಾಗ, ಆ ವ್ಯಕ್ತಿ ಜುಲೈ 15 ರಂದು ಬೆಂಗಳೂರಿಗೆ ಧಾವಿಸಿ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರನ್ನು ಸಂಪರ್ಕಿಸಿದರು. ನಂತರ, ಜುಲೈ 18 ರಂದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bengaluru Crime: ಯುವತಿ ಜತೆ ಲವ್ವಿಡವ್ವಿ: ಫ್ರೆಂಡ್ಸ್‌ ಜತೆ ಡ್ಯಾನ್ಸ್‌ ಟೀಚರ್‌ನಿಂದ ಗ್ಯಾಂಗ್‌ರೇಪ್‌!

Latest Videos
Follow Us:
Download App:
  • android
  • ios