Rahul Gandhi Disqualification: ಕೈ ಪ್ರತಿಭಟನೆಯಲ್ಲಿ ಜಗದೀಶ್ ಟೈಟ್ಲರ್ ಭಾಗಿ; ಗಾಂಧಿಗೆ ಅವಮಾನ ಎಂದು ನೆಟ್ಟಿಗರ ಟೀಕೆ
ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಕ್ಕಾಗಿ ದೇಶದ ಅತಿ ಹಳೆಯ ಪಕ್ಷವು ರಾಹುಲ್‌ಗೆ ಬೆಂಬಲ ನೀಡಲು ನಡೆಸುತ್ತಿರುವ ಪಕ್ಷದ "ಸಂಕಲ್ಪ ಸತ್ಯಾಗ್ರಹ" ದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಕಾಣಿಸಿಕೊಂಡರು. ಗಾಂಧಿ ವಂಶಸ್ಥನ ಅನರ್ಹತೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಟೈಟ್ಲರ್ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ.
ನವದೆಹಲಿ (ಮಾರ್ಚ್ 26, 2023): ಕಳಂಕಿತ ಕಾಂಗ್ರೆಸ್ ನಾಯಕ ಮತ್ತು 1984 ರ ಸಿಖ್ ವಿರೋಧಿ ದಂಗೆಯ ಆರೋಪಿ ಜಗದೀಶ್ ಟೈಟ್ಲರ್ ಅವರು ಭಾನುವಾರ ರಾಹುಲ್ ಗಾಂಧಿಯ ಅನರ್ಹತೆಯ ವಿರುದ್ಧ ದೆಹಲಿಯ ರಾಜ್‌ಘಾಟ್‌ನಲ್ಲಿ ನಡೆಯುತ್ತಿರುವ "ಸಂಕಲ್ಪ ಸತ್ಯಾಗ್ರಹ" ದಲ್ಲಿ ಭಾಗವಹಿಸಿದ್ದಾರೆ. ಕಾಂಗ್ರೆಸ್ ಸತ್ಯಾಗ್ರಹದಲ್ಲಿ 1984ರ ಗಲಭೆಯ ಆರೋಪಿ ಉಪಸ್ಥಿತಿಯಾಗಿರುವುದು ಭಾರಿ ವಿವಾದವನ್ನು ಹುಟ್ಟುಹಾಕಿದೆ. ಈ ಹಿನ್ನೆಲೆ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದು, ಪಕ್ಷವನ್ನು ಸಿಖ್ ವಿರೋಧಿ ಎಂದು ಆರೋಪಿಸಿದೆ.
ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಕ್ಕಾಗಿ ದೇಶದ ಅತಿ ಹಳೆಯ ಪಕ್ಷವು ರಾಹುಲ್‌ಗೆ ಬೆಂಬಲ ನೀಡಲು ನಡೆಸುತ್ತಿರುವ ಪಕ್ಷದ "ಸಂಕಲ್ಪ ಸತ್ಯಾಗ್ರಹ" ದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಕಾಣಿಸಿಕೊಂಡರು. ಗಾಂಧಿ ವಂಶಸ್ಥನ ಅನರ್ಹತೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಟೈಟ್ಲರ್ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ.
ಇದನ್ನು ಓದಿ: ಕರ್ನಾಟಕ ಗೆದ್ದು ರಾಹುಲ್ ಅನರ್ಹತೆಗೆ ಉತ್ತರ ನೀಡೋಣ: ಸಾಮೂಹಿಕ ರಾಜೀನಾಮೆಗೆ ಮುಂದಾದ ಸಂಸದರಿಗೆ ಪ್ರಿಯಾಂಕಾ ಸಲಹೆ
'ಕಾಂಗ್ರೆಸ್ ಸಿಖ್ ವಿರೋಧಿ': ಬಿಜೆಪಿ
ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಗಾಂಧಿ ಕುಟುಂಬವನ್ನು ಕಟುವಾಗಿ ಟೀಕಿಸಿದ್ದು ಅವರು ಒಬಿಸಿ ಮತ್ತು ಸಿಖ್ ವಿರೋಧಿ ಎಂದು ಆರೋಪಿಸಿದರು. ಕೇಸರಿ ಪಕ್ಷವು ಮಾಜಿ ವಯನಾಡ್ ಸಂಸದರನ್ನು ಮೋದಿ ಸರ್‌ನೇಮ್ ಹೇಳಿಕೆಯ ಕುರಿತು ಒಬಿಸಿ ವಿರೋಧಿ ಎಂದು ಆರೋಪಿಸುತ್ತಿದೆ. 1951ರ ಜನತಾ ಪ್ರಾತಿನಿಧ್ಯ ಕಾಯಿದೆಯಡಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ಮೋದಿ ಸರ್‌ನೇಮ್ ಕುರಿತ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತು.
"ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವು ಒಬಿಸಿ ವಿರೋಧಿ ಮಾತ್ರವಲ್ಲ, ಸಿಖ್ ವಿರೋಧಿಯೂ ಆಗಿದೆ. 1984 ರ ನರಮೇಧದ ಆರೋಪಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ! ಇದು ನ್ಯಾಯಾಲಯಗಳು, ಒಬಿಸಿ ಸಮಾಜ ಮತ್ತು ಸಿಖ್ಖರ ವಿರುದ್ಧ ದುರಾಗ್ರಹವೇ ಹೊರತು ಸತ್ಯಾಗ್ರಹವಲ್ಲ," ಎಂದು ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ. "ಕಾಂಗ್ರೆಸ್ ಒಬಿಸಿಗಳು ಮತ್ತು ಸಿಖ್ಖರನ್ನೂ ದ್ವೇಷಿಸುತ್ತದೆ. ಜಗದೀಶ್ ಟೈಟ್ಲರ್ ಅವರಿಗೆ ಕಾಂಗ್ರೆಸ್ ಪದೇ ಪದೇ ಪ್ರಮುಖ ಸ್ಥಾನವನ್ನು ನೀಡಿದ್ದು, ಒಂದು ಬಾರಿ ಮಾತ್ರ ಅಲ್ಲ" ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: ಕೈ ನಾಯಕನಿಗೆ ಶಾಕ್: ರಾಹುಲ್ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!
ಬಿಜೆಪಿ ನಾಯಕ ಮಾತ್ರವಲ್ಲದೆ, ಹಲವು ನೆಟ್ಟಿಗರು ಸಹ ಇದಕ್ಕೆ ಟೀಕೆ ಮಾಡಿದ್ದಾರೆ. ದೆಹಲಿಯ ರಾಜ್‌ಘಾಟ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜಗದೀಶ್ ಟೈಟ್ಲರ್ ಮೊದಲು ಆಗಮಿಸಿದ್ದಾರೆ. ಇದಕ್ಕೆ ಗಾಂಧೀಜಿ ಪ್ರತಿಕ್ರಿಯೆ ಹೇಗಿರುತ್ತದೆ ನೋಡಿ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಭಾನುವಾರದಂದು ಒಂದು ದಿನದ ಸತ್ಯಾಗ್ರಹವನ್ನು ಆಯೋಜಿಸುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಮಾರ್ಚ್ 26 ರಂದು ಬೆಳಿಗ್ಗೆ 10 ಗಂಟೆಗೆ ಸತ್ಯಾಗ್ರಹ ಪ್ರಾರಂಭವಾಗಿದ್ದು, ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ