'ರಾತ್ರಿ 7.30ಕ್ಕೆ ಹೊರಗಡೆ ಹೋಗಿದ್ಯಾಕೆ..' ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪ್ರಶ್ನಿಸಿದ ಪೊಲೀಸರು!
Noida woman assaulted ಉತ್ತರ ಪ್ರದೇಶದ ನೋಯ್ಡಾದಲ್ಲಿ ಯುವತಿಯ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಬಳಿಕ ಇಬ್ಬರು ಹುಡುಗಿಯರು ಮಧ್ಯಪ್ರವೇಶಿಸಿದ್ದರಿಂದ ಶಮಕಿತ ವ್ಯಕ್ತಿ ಪರಾರಿಯಾಗಿದ್ದಾನೆ.
ನವದೆಹಲಿ (ಆ.13): ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 48 ಪ್ರದೇಶದಲ್ಲಿ ಯುವಕನೊಬ್ಬ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಳೆ ಬರುತ್ತಿದ್ದ ಕಾರಣಕ್ಕೆ ಇದರ ವಿಡಿಯೋ ಮಾಡಲು ತಾನು ಮನೆಯೊಂದ ಹೊರಗೆ ಹೋಗಿದ್ದೆ ಎಂದು ಯುವತಿ ಹೇಳಿದ್ದಾಳೆ. ಈ ವೇಳೆ ಆಕೆಯ ಬಳಿ ಬಂದ ಯುವಕನೊಬ್ಬ ಆಕೆಯ ಬಳಿಕ ಬಂದು, ಆಕೆಯ ಶಾರ್ಟ್ಸ್‌ಅನ್ನು ಎಳೆದಿದ್ದಾನೆ. ಆಕೆಯ ಮೇಲೆ ಯುವಕ ಹಲ್ಲೆ ಮಾಡಲು ಮುಂದಾಗುತ್ತಿದ್ದಾಗ, ಇಬ್ಬರು ಯುವತಿಯರು ಬಂದು ಆಕೆಯನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಶಂಕಿತ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತಾಗಿ ದೂರು ನೀಡಲು ಯುವತಿ ಸೆಕ್ಟರ್ 49 ಪೊಲೀಸ್ ಸ್ಟೇಷನ್‌ಗೆ ತೆರಳಿದ್ದಳು. ಆದರೆ, ಅಲ್ಲಿಯೂ ಆಕೆಗೆ ಅವಮಾನವಾಗಿದೆ. ಡ್ಯೂಟಿಯಲ್ಲಿದ್ದ ಪೊಲೀಸ್ ಅಧಿಕಾರಿ ಎಫ್‌ಐಆರ್ ದಾಖಲು ಮಾಡಲು ಬದಲು, ಸಂಜೆಯ ವೇಳೆ ಮಳೆ ಬರುತ್ತಿರುವುದನ್ನು ಶೂಟ್ ಮಾಡಲು ಮನೆಯಿಂದ ಹೊರಗೆ ಹೋಗಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಮಹಿಳೆ ತನ್ನ ಗೇಟೆಡ್ ಸೊಸೈಟಿಯಿಂದ ಸಿಸಿಟಿವಿ ವಿಡಿಯೋಗಳನ್ನು ಪಡೆಯುವ ಮೂಲಕ ಮೂಲಕ ಸಾಕ್ಷ್ಯವನ್ನು ಸಂಗ್ರಹಿಸುವ ಪ್ರಯತ್ನ ಮಾಡಿದ್ದಳು. ಆದರೆ, ಆಕೆಯ ಪ್ರಯತ್ನ ಎಲ್ಲವೂ ವಿಫಲವಾಗಿದೆ. ಅಲ್ಲಿನ ಅನೇಕ ಸಿಸಿಟಿವಿ ಕ್ಯಾಮೆರಾಗಳು ಕೆಲಸವೇ ಮಾಡುತ್ತಿಲ್ಲ ಎನ್ನುವುದು ಆಕೆಗೆ ಗೊತ್ತಾಗಿದೆ.
ತನಗಾದ ಕೆಟ್ಟ ಸ್ಥಿತಿಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ, ತಮ್ಮ ಮೇಲೆ ಆದ ದೌರ್ಜನ್ಯ ಹಾಗೂ ಪೊಲೀಸರ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ವಿವರಿಸುವ ವಿಡಿಯೋ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೀಘ್ರ ವೈರಲ್ ಆಗಿದ್ದು, ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರದಲ್ಲೊಂದು ಸಲಿಂಗಿ ವಿವಾಹ: ಗಂಡನ ಬಿಟ್ಟು ಸೊಸೆಯ ಮದ್ವೆಯಾದ ಅತ್ತೆ
ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವುದನ್ನು ಕಂಡ ಬೆನ್ನಲ್ಲಿಯೇ ನೊಯ್ಡಾ ಪೊಲೀಸರು ತಾವು ದೂರನ್ನು ಸ್ವೀಕಾರ ಮಾಡಿರುವುದಾಗಿ ತಿಳಿಸಿರುವ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. "ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ತಕ್ಷಣವೇ ಪ್ರಕರಣ ದಾಖಲಿಸಲಾಗಿದೆ. ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತಿದೆ, ಇಂದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತರುಣ್ ಸುಧೀರ್ ಮದ್ವೇಲಿ ದರ್ಶನ್! ಸೋಷಿಯಲ್ ಮೀಡಿಯಾ ಫೋಟೋ ಅಸಲಿಯತ್ತಿದು!