Asianet Suvarna News Asianet Suvarna News

Sexual Harassment : ಮದುವೆಗೆ ಅಡ್ಡಿ ಎಂದು ಮಗುವಿನ ಮೇಲೆ ಎರಗಿದ ಅಜ್ಜಿಯ ಬಾಯ್ ಫ್ರೆಂಡ್!

* ಕಂದಮ್ಮನ ಮೇಲೆ ಎರಗಿದ ವೃದ್ಧ
* ತನ್ನ ಮದುವೆಗೆ ಬಾಲಕಿಯೇ ಅಡ್ಡಿ ಎಂದು ಭಾವಿಸಿದ
* ದೂರು ಕೊಟ್ಟ ಅಜ್ಜಿಯೇ ತಪ್ಪು ಒಪ್ಪಿಕೊಂಡಳು

Noida 3-year-old girl raped, killed by grandmother s lover Crime News mah
Author
Bengaluru, First Published Jan 5, 2022, 12:26 AM IST

ನೋಯ್ಡಾ(ಜ. 04)   ಇದೊಂದು ಘೋರ ಪ್ರಕರಣ .. ತಾತನ (Grand Father) ವಯಸ್ಸಿನ ವ್ಯಕ್ತಿ ಪುಟ್ಟ ಕಂದಮ್ಮನ ಮೇಲೆ ಎರಗಿದ್ದಾನೆ .  ವಿಚಿತ್ರ ಎಂದರೆ ಈ ವ್ಯಕ್ತಿ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಅಜ್ಜಿಯ (Boy Friend) ಬಾಯ್ ಫ್ರೆಂಡ್!

ತಮ್ಮ ಮದುವೆಗೆ (Marriage) ಈ ಮಗುವೇ ಅಡ್ಡಿ ಎಂದು ಭಾವಿಸಿ ಇಂಥ ಹೀನ ಕೃತ್ಯ ಮಾಡಿದ್ದಾನೆ.  ಪ್ರಕರಣಕ್ಕೆ ಸಂಬಂಧಿಸಿ ಅಜ್ಜಿಯನ್ನು ಬಂಧಿಸಲಾಗಿದೆ. 50 ವರ್ಷದ ಗೆಳತಿಯ ಮೂರು ವರ್ಷದ ಮೊಮ್ಮಗಳನ್ನು ಮೇಲೆ 55 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ನೋಯ್ಡಾದಿಂದ ವರದಿಯಾಗಿದೆ. 

Woman Suicide : ಮದುವೆಗೂ ಮುನ್ನವೇ ಒಂದಾಗಿದ್ದ ಜೋಡಿ, ಸಾನಿಟೈಸರ್ ಕುಡಿದು ಗರ್ಭಿಣಿ ಸುಸೈಡ್!

ಡಿಸೆಂಬರ್ 25 ನಾಪತ್ತೆಯಾಗಿದ್ದ ಮಗುವಿನ ಶವ ಡಿಸೆಂಬರ್ 28 ರಂದು ಇಲಾಹಬಾಸ್ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಪತ್ತೆಯಾಗುತ್ತದೆ.  ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆಯ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸುತ್ತಾರೆ.  ಲೈಂಗಿಕ ದೌರ್ಜನ್ಯ ನಡೆದಿರುವುದು ಪಕ್ಕಾ ಆಗುತ್ತದೆ. ಬಾಲಕಿಯ ಶವವವನ್ನು ಅಡಗಿಸಲು ಬೇರೆ ಬೇರೆ ರೀತಿ ಯತ್ನಿಸಿರುವುದು ಬೆಳಕಿಗೆ ಬರುತ್ತದೆ. 

25 ರಂದು ಮಹಿಳೆ ತನ್ನ ಮೊಮ್ಮಗಳು ಡಿಸೆಂಬರ್ 24 ರಂದು ಕಾಣೆಯಾಗಿದ್ದಾಳೆ ಎಂದು ಸ್ಥಳೀಯ ಹಂತ 2 ಪೊಲೀಸ್ ಠಾಣೆಗೆ  ದೂರು ನೀಡಿದ್ದದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಕಾಣೆಯಾಗಿದೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಅಜ್ಜಿಯನ್ನೇ ವಿಚಾರಣೆಗೆ ಒಳಪಡಿಸಿದಾಗ ತನ್ನ ತಪ್ಪೊ ಒಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು. ದೌರ್ಜನ್ಯ ಎಸಗಿದ ವ್ಯಕ್ತಿ  ಬುಲಂದ್‌ಶಹರ್ ಜಿಲ್ಲೆಯವನಾಗಿದ್ದು ನೋಯ್ಡಾದ ಸೆಕ್ಟರ್ 88 ರ ಬಳಿ ಬಹಳ ಸಮಯದಿಂದ ನೆಲೆಸಿದ್ದ. 

ಕೆಲಸಕ್ಕಿದ್ದ ವೃದ್ಧನ ಕೊಲೆ::   ಅಪ್ರಾಪ್ತ ಮಗಳಿಗೆ (Girl) ಕಿರುಕುಳ (Sexual harassment) ನೀಡುತ್ತಿದ್ದ ಎಂಬ ಶಂಕೆ ಮೇಲೆ ದಂಪತಿ (Couple)ಮನೆ ಕೆಲಸಕ್ಕೆ ಇದ್ದ  70 ವರ್ಷದ  ವ್ಯಕ್ತಿಯನ್ನು ಹತ್ಯೆ (Murder)ಮಾಡಿದದ್ದಾರೆ. ಬರ್ಬರವಾಗಿ ಕೊಂದು ಹಾಕಿದ್ದರು.
 
ಹತ್ಯೆ ಮಾಡಿ ಶವವವನ್ನು ಮಂಖುರ್ದ್‌ ರೈಲ್ವೆ (Indian Railways) ನಿಲ್ದಾಣದ ಬಳಿ ಹಾಕಿದ್ದಾರೆ.  ಕೊಲೆಯಾಗುವುದಕ್ಕೆ ಎಂಟು ದಿನಗಳ ಮುಂಚೆ ವೃದ್ಧ ಮನೆಕೆಲಸಕ್ಕೆ ಇವರ ಬಳಿ ಸೇರಿಕೊಂಡಿದ್ದ. ಪೊಲೀಸರು ಹೇಳುವಂತೆ ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪ ಹೊತ್ತಿರುವ ದಂಪತಿ  ಬಿಹಾರ ಮೂಲದವರಾಗಿದ್ದು, ಪರಸ್ಪರ ಮೊದಲಿನಿಂದ ಪರಿಚಯಸ್ಥರು.

ಏನಾಯಿತು?  ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗಳು ಮಲಗಿದ್ದಳು. ಕೆಲಸಕ್ಕೆ ಸೇರಿಕೊಂಡಿದ್ದ ವೃದ್ಧ ಆಕೆಯನ್ನು   ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂಬ ಕಾರಣವೇ ಕೊಲೆಗೆ ಮೂಲ.  ಮಗಳು ಕೂಗಿಕೊಂಡಾಗ ಅಲ್ಲಿಗೆ ಬಂದ ದಂಪತಿ  ಏಕಾಏಕಿ ಬೆಲ್ಟ ಮತ್ತು ಬಿದಿರಿನ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ದಂಪತಿಯ ಏಟಿಗೆ ವೃದ್ಧ ಸಾವನ್ನಪ್ಪಿದ್ದಾನೆ.

ಸತ್ತವನ ಗುರುತು ಪತ್ತೆಯಾಗಿದ ನಂತರ  ತನಿಖೆ ಆರೋಪಿಗಳ ಪತ್ತೆಗೆ ಬಲೆ  ಬೀಸಲಾಗಿದೆ.  ಕೊಲೆಗಾರರು ಪಾಟ್ನಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಅಲರ್ಟ್ ಆಗಿದ್ದು  ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.

ಬಾಲಕಿಯರ ಮೇಲೆ ದೌರ್ಜನ್ಯ: ಪ್ರವಾಸಕ್ಕೆಂದು ಬಂದಿದ್ದ ಬಾಲಕಿಯರ ಮೇಲೆ ದೌರ್ಜ್ಯನ್ಯ ಎಸಗಿದ ನಕಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿತ್ತು. ಆರೋಪಿ  ರಾಂಬಾಬು ಮತ್ತೆ ಮತ್ತೆ ಇಂಥದ್ದೇ ಪ್ರಕರಣದಲ್ಲಿ  ಭಾಗಿಯಾಗುತ್ತಿದ್ದ.   ಸರ್ಕಾರಿ ವಸತಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕ್ರೌರ್ಯ ಮೆರೆದಿದ್ದ.

ಪೊಲೀಸರು ಹೇಳುವಂತೆ ಇಬ್ಬರು ಬಾಲಕಿಯರು ತಮ್ಮ ಗೆಳೆಯರೊಂದಿಗೆ ಸಮಯ ಕಳೆಯಲು ಹತ್ತಿರದ ಹಳ್ಳಿಗೆ ಹೋಗಿದ್ದರು. ರವಡಾ ಗ್ರಾಮದ ನದಿ ಪ್ರದೇಶಕ್ಕೆ ತೆರಳಿದ್ದರು. ಇದನ್ನು ಆರೋಪಿ ರಾಂಬಾಬು ಗಮನಿಸಿದ್ದಾನೆ.   ಅಲ್ಲಿಗೆ ತೆರಳಿ ಹುಡುಗ ಮತ್ತು ಹುಡುಗಿಯರ ಪೋಟೋ ತೆಗೆದುಕೊಂಡಿದ್ದು ಅವರನ್ನು ಬೆದರಿಸಲು ಆರಂಭಿಸಿದ್ದಾನೆ. ಈ ಪೋಟೋಗಳನ್ನು ನಿಮ್ಮ ಶಿಕ್ಷಕರು ಮತ್ತು ಪಾಲಕರಿಗೆ ತೋರಿಸುತ್ತೇನೆ ಎಂದು ಬೆದರಿಸಿದ್ದ. 

Follow Us:
Download App:
  • android
  • ios