ಕೇರಳದಲ್ಲಿ ವ್ಯವಸ್ಥಿತವಾಗಿ ಬಿಹಾರ ಕಾರ್ಮಿಕನ ಹತ್ಯೆಗೈದ ಘಟನೆ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಸಿಸಿಟಿವಿ ಆಫ್ ಮಾಡಿ ಕಾರ್ಮಿಕನ ಹತ್ಯೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಮಲಪ್ಪುರಂ(ಮೇ.21): ಬಿಹಾರದಿಂದ ಕೇರಳಕ್ಕೆ ಕೆಲಸಕ್ಕಾಗಿ ಬಂದ ಕೂಲಿ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕೇರಳ ಮಲ್ಲಪುರಂನ ಕಿಝಿಶೇರಿಯಲ್ಲಿ ನಡೆದಿದೆ. ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಾಗಿ ಬಂದ ಬುಡಕಟ್ಟು ಸಮುದಾಯದ ರಾಜೇಶ್ ಮಂಚಿ ಕೊಲಯಾದ ದುರ್ದೈವಿ. ಘಟನೆ ಸಂಬಂಧ 9 ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕಳ್ಳತನಕ್ಕೆ ಯತ್ನಿಸಿದ ರಾಜೇಶ್ ಮಂಚಿಯನ್ನು ಹೊಡೆದು ಒಡಿಸುವ ಸಂದರ್ಭದಲ್ಲಅಚಾನಕ್ಕಾಗಿ ಕೊಲೆಯಾಗಿದೆ ಎಂದು ಹಂತಕರು ಪೊಲೀಸರ ಮುಂದೆ ಹೇಳಿದ್ದರು. ಆದರೆ ರಾಜೇಶ್ ಮಂಚಿಯನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆ. ಇಷ್ಟೇ ಅಲ್ಲ ಈತನ ಯಾವುದೇ ಕಳ್ಳತನಕ್ಕೆ ಯತ್ನಿಸಿಲ್ಲ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. 2017ರಲ್ಲಿ ಕೇರಳದಲ್ಲಿ ನಡೆದ ಮಧು ಕೊಲೆ ಪ್ರಕರಣಕ್ಕೂ ಈ ಹತ್ಯೆಗೆ ಭಾರಿ ಸಾಮಿಪ್ಯ ಕಾಣಿಸುತ್ತಿದೆ.
ಈ ಪ್ರಕರಣ ಸಂಬಂಧ ಕಿಝಿಶೇರಿಯ ಮುಹಮ್ಮದ್ ಅಫ್ಸಲ್, ಫಾಜಿಲ್, ಶರಾಫುದ್ದೀನ್, ಮೆಹಬೂಬ್, ಅಬ್ದುಸಮಾದ್, ನಾಸರ್, ಹಬೀಬ್, ಆಯೂಬ್, ಝೈನುಲ್ ಅಬೀದ್ ಸೇರಿದಂತೆ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಆರಂಭದಲ್ಲಿ ಆರೋಪಿಗಳ ಮಾತಿನಿಂದ ಕಳ್ಳನ ಒಡಿಸುವ ಪ್ರಯತ್ನದಲ್ಲಿ ಅಚಾನಕ್ಕಾಗಿ ಕೊಲೆಯಾಗಿದೆ ಎಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಉದ್ದೇಶಪೂರ್ವಕವಾಗಿ ನಡೆಸಿದ ಕೊಲೆ ಅನ್ನೋದು ಬಯಲಾಗಿದೆ.
ಬಳ್ಳಾರಿ ಮೂಲದ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಭೀಕರ ಹತ್ಯೆ!
ಮೇ.12ಕ್ಕೆ ಈ ಘಟನೆ ನಡೆದಿದೆ. ಕಿತ್ತು ತಿನ್ನುವ ಬಡತನ, ಊಟಕ್ಕೂ ಪರದಾಡುವ ಪರಿಸ್ಥಿತಿಯಿಂದ ಕುಟುಂವನ್ನು ಪಾರುಮಾಡಲು ರಾಜೇಶ್ ಮಂಚಿ ಕಿಝಿಶೇರಿಯ ಕೋಳಿ ಫಾರ್ಮ್‌ಗೆ ಕೆಲಸಕ್ಕೆಂದು ಆಗಮಿಸಿದ್ದಾನೆ. ಮೇ.10 ರಂದು ಬಿಹಾರದಿಂದ ಆಗಮಿಸಿದ ರಾಜೇಶ್, ತನ್ನ ಕೆಲಸದಲ್ಲಿ ಮಘ್ನನಾಗಿದ್ದ. ಮೇ.12 ರಂದು ರಾತ್ರಿ ವೇಳೆ ಆಗಮಿಸಿದ 9ಕ್ಕೂ ಹೆಚ್ಚು ಆರೋಪಿಗಳು ರಾಜೇಶ್ ಮಂಚಿ ಕೋಳಿ ಫಾರ್ಮ್‌ನಿಂದ ಹಿಡಿದ ಹೊರಗೆಳೆದಿದ್ದಾರೆ. ಬಳಿಕ ಆತನ ಕೈ ಕಟ್ಟಿ ಹಲ್ಲೆ ನಡೆಸಿದ್ದಾರೆ. ಕೋಳಿ ಫಾರ್ಮ್‌ನಿಂದ ಕೆಲ ದೂರಗಳವರೆಗೆ ಧರಧರನೆ ಎಳೆದುಕೊಂಡು ಹೋದ ಆರೋಪಿಗಳು ಪ್ಲಾಸ್ಟಿಕ್ ಪೈಪ್, ಕಬ್ಬಿಣಡ ರಾಡ್, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ಮಧ್ಯ ರಾತ್ರಿ 12.30ರಿಂದ ಮುಂಜಾನೆ 2.30ರ ವರೆಗೆ ರಾಜೇಶ್ ಮಂಚಿಗೆ ಥಳಿಸಲಾಗಿದೆ. ತೀವ್ರ ಹಲ್ಲೆಯಿಂದ ರಾಜೇಶ್ ಮಂಚಿ ಪ್ರಜ್ಞಾಹೀನನಾಗಿದ್ದಾನೆ. ಇತ್ತ ಆರೋಪಿಗಳು ಹತ್ತಿದರ ಜಂಕ್ಷನ್ ಬಳಿ ಎಸೆದು ಪರಾರಿಯಾಗಿದ್ದಾರೆ. ಈ ಮಾಹಿತಿ ತಿಳಿದ ರಾತ್ರಿ ಪ್ಯಾಟ್ರೋಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ರಾಜೇಶ್ ಮಂಚಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ರಾಜೇಶ್ ಮಂಚಿ ಮೃತಪಟ್ಟಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇತ್ತ ಪ್ರಕರ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಆರೋಪಿಗಳ ಹೇಳಿಕೆ ತಾಳೆಯಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ರಾಜೇಶ್ ಮಂಚಿ ಮೇಲಿನ ದಾಳಿ ವಿವರಗಳು, ಆರೋಪಿಗಳ ಹೇಳಿಕೆಗೂ ವ್ಯತ್ಯಾಸ ಕಂಡಿದೆ. ಆರೋಪಿಗಳು ಕೋಳಿ ಫಾರ್ಮ್ ಪಕ್ಕದಲ್ಲೇ ಅಳವಡಿಸಿದ್ದ ಸಿಟಿಸಿವಿ, ಮದರಸಾದಲ್ಲಿರುವ ಸಿಸಿಟಿವಿಗಳನ್ನು ಆಫ್ ಮಾಡಿ ಹಲ್ಲೆ ನಡೆಸಿದ್ದಾರೆ. ಆದರೆ ಆರೋಪಿಗಳು ಬಂದು ರಾಜೇಶ್ ಕೈಕಟ್ಟಿ ಆತನ ಎಳೆದುಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿದೆ. ಇನ್ನುಳಿದ ಹಲ್ಲೆ ದೃಶ್ಯಗಳು ದಾಖಲಾಗಿಲ್ಲ. ಇಷ್ಟೇ ಅಲ್ಲ ಹಲ್ಲೆ ಮಾಡುವುದನ್ನು ಆರೋಪಿಗಳು ವಿಡಿಯೋ ಮಾಡಿದ್ದಾರೆ. ಬಳಿಕ ಡಿಲೀಟ್ ಮಾಡಿರುವುದು ಪತ್ತೆಯಾಗಿದೆ.
ಸಾಧುಗಳ ಹತ್ಯೆ ಪ್ರಕರಣ; ಕೊನೆಗೂ ಮಹಾರಾಷ್ಟ್ರ ಪೊಲೀಸರ ಕ್ರಮ
ಹೊರ ರಾಜ್ಯದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೊರ ರಾಜ್ಯದ ಕಾರ್ಮಿಕ ರಾಜೇಶ್ ಮಂಚಿಯನ್ನು ಸುಲಿಗೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಮಣಪ್ಪುರಂ ಎಸ್‌ಪಿ ಸುಜಿತ್ ದಾಸ್ ಹೇಳಿದ್ದಾರೆ. 9 ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೀಗ ಕೇರಳ ಪೊಲೀಸರ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ. ದಲಿತ ಕೂಲಿ ಕಾರ್ಮಿಕ ಹತ್ಯೆಯಾಗಿದ್ದಾನೆ. ಆದರೆ ಪ್ರಕರಣದಲ್ಲಿ ಪೊಲೀಸರು SCST ಕಾಯ್ದೆ ಅನ್ವಯಿಸಿಲ್ಲ. ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿದೆ.
ಈ ಪ್ರಕರಣ ಸಂಬಂಧ ಪೊಲೀಸರು 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಇದು ಬರ್ಬರ ಹತ್ಯೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ರಾಜೇಶ್ ಮಂಚಿಯನ್ನು ಕೈಕಟ್ಟಿ ಥಳಿಸಲಾಗಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳ ನಡೆಸಿರುವ ಕೃತ್ಯಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಕೇರಳ ಪೊಲೀಸರು ಹೇಳಿದ್ದಾರೆ.
