ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಯುವತಿಯನ್ನು ಎಳೆದೊಯ್ದ ಕಾರು: ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ..!

ಕಾರು ಪತ್ತೆಯಾಗಿದ್ದು, ತನಿಖೆಯ ವೇಳೆ ಸುಲ್ತಾನಪುರಿ ಪೊಲೀಸ್ ಠಾಣೆ ಬಳಿ ಕಾರು ಅಪಘಾತಕ್ಕೀಡಾಗಿದೆ ಎಂದು ವಾಹನದಲ್ಲಿದ್ದವರು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

new year shocker girl dragged in outer delhi area after dress get stuck in car wheel ash

ಹೊಸ ವರ್ಷದ (New Year) ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (National Capital Delhi) ಆಘಾತಕಾರಿ ಘಟನೆಯೊಂದು ನಡೆದಿದೆ. ಯುವತಿಯೊಬ್ಬರ ಸ್ಕೂಟರ್ (Scooter) ಅಪಘಾತಕ್ಕೀಡಾಗಿದ್ದು, ಕಾರಿನ ಚಕ್ರಕ್ಕೆ (Car Wheel) ಬಟ್ಟೆ ಸಿಕ್ಕಿಹಾಕಿಕೊಂಡ ನಂತರ ಆಕೆ ನೋವಿನಿಂದ ಮೃತಪಟ್ಟ ಘಟನೆ ದೆಹಲಿಯ ಹೊರ ಪ್ರದೇಶದಲ್ಲಿ ಜನವರಿ 1 ರಂದು ನಸುಕಿನ ಜಾವ ನಡೆದಿದೆ. ಕೆಲವು ಕಿಲೋಮೀಟರ್‌ಗಳವರೆಗೆ ಯುವತಿಯನ್ನು ಕಾರು (Car) ಎಳೆದಿದ್ದು, ಈ ಅಪಘಾತದಲ್ಲಿ (Accident) ಆಕೆಯ ಬಟ್ಟೆ ಹರಿದು ಹೋಗಿದ್ದು, ಯುವತಿಯ ಬೆತ್ತಲೆ ದೇಹವನ್ನು (Naked Body) ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಆಕೆಯ ಮೇಲೆ ಅತ್ಯಾಚಾರ (Rape) ಎಸಗಿ ನಂತರ ಎಳೆದೊಯ್ಯುವ ಮುನ್ನ ಕೊಂದು (Murder) ಹಾಕಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಆಕೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಮತ್ತು ಆಕೆಯ ದೇಹವು ಕಾರಿಗೆ ಸಿಕ್ಕಿಹಾಕಿಕೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಹೌದು, ದೆಹಲಿಯ ಸುಲ್ತಾನ್‌ಪುರಿ ಪ್ರದೇಶದಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಭಾನುವಾರ ಮುಂಜಾನೆ ಮಹಿಳೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ ಮತ್ತು ಮಹಿಳೆಯನ್ನು ಕಾರಿನ ಕೆಳಗೆ ಹಲವಾರು ಕಿಲೋಮೀಟರ್ ಎಳೆದೊಯ್ಯಲಾಯಿತು. ಇನ್ನು, ಈ ಘಟನೆಗೆ ಸಂಬಂಧಪಟ್ಟಂತೆ ಕಾರಿನಲ್ಲಿದ್ದ ಐವರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಎಎನ್‌ಐ ವರದಿ ಮಾಡಿದೆ. 

ಇದನ್ನು ಓದಿ: ರಾಜಸ್ಥಾನದಲ್ಲಿ ಟ್ರಕ್‌ - ಕಾರು ಮುಖಾಮುಖಿ ಡಿಕ್ಕಿ: ಐವರು ಬಲಿ; ಟ್ರಕ್‌ ಚಾಲಕ ನಾಪತ್ತೆ..!

ಇನ್ನು, ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. "ದೆಹಲಿಯ ಕಂಝಾವಾಲಾದಲ್ಲಿ ಯುವತಿಯ ಬೆತ್ತಲೆ ಶವ ಪತ್ತೆಯಾಗಿದೆ. ಅಮಲಿನ ಸ್ಥಿತಿಯಲ್ಲಿದ್ದ ಕೆಲವು ಹುಡುಗರು ಕಾರು ಚಲಿಸುತ್ತಿರುವಾಗ ಆಕೆಯ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದೆ. ಈ ಹಿನ್ನೆಲೆ ನಾನು ದೆಹಲಿ ಪೊಲೀಸರಿಗೆ ಹಾಜರಾಗುವಂತೆ ಸಮನ್ಸ್ ನೀಡುತ್ತಿದ್ದೇನೆ. ಸಂಪೂರ್ಣ ಸತ್ಯ ಹೊರಬರಬೇಕು" ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್‌ ಅಧಿಕಾರಿ, ಬೆಳಗಿನ ಜಾವ 3:24ರ ಸುಮಾರಿಗೆ ತಮಗೆ ಈ ವಿಚಾರವಾಗಿ ಕರೆ ಬಂದಿತ್ತು ಎಂದು ತಿಳಿಸಿದ್ದಾರೆ. "ಮಹಿಳೆಯ ಶವವನ್ನು ಬಲೆನೋ ಕಾರಿಗೆ ಕಟ್ಟಿ ಎಳೆದೊಯ್ಯಲಾಗುತ್ತಿದೆ ಎಂದು ಕರೆ ಮಾಡಿದವರು ತಿಳಿಸಿದ್ದರು. ಕಂಝಾವಾಲಾ ಪೊಲೀಸ್ ಠಾಣೆ ತಂಡವು ಕರೆ ಮಾಡಿದವರನ್ನು ಅವರ ಮೊಬೈಲ್ ಸಂಖ್ಯೆ ಮೂಲಕ ಪದೇ ಪದೇ ಸಂಪರ್ಕಿಸಿತು. ಕರೆ ಮಾಡಿದವರು ನಂತರ ವಾಹನವನ್ನು ಬೂದು ಬಣ್ಣದ ಬಲೆನೋ ಕಾರು ಎಂದು ಗುರುತಿಸಿದರು" ಎಂದೂ ಹೇಳಿದ್ದಾರೆ.
ಪಿಸಿಆರ್ ಕರೆ ಸ್ವೀಕರಿಸಿದ ನಂತರ, ಪೊಲೀಸ್ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಇತರೆ ಸಿಬ್ಬಂದಿಗೆ ಸೂಚಿಸಲಾಯಿತು. ಹಾಗೂ, ವಾಹನವನ್ನು ಹುಡುಕುವ ಸಂದೇಶದ ಬಗ್ಗೆಯೂ ಎಚ್ಚರಿಕೆ ನೀಡಲಾಯಿತು. ನಂತರ, ಮುಂಜಾನೆ 4:11 ರ ಸುಮಾರಿಗೆ, ಕಂಝಾವಾಲಾ ಪ್ರದೇಶದಲ್ಲಿ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಎರಡನೇ ಪಿಸಿಆರ್ ಕರೆ ಬಂದಿತು ಎಂದೂ ಪೊಲೀಸ್‌ ಅಧಿಕಾರಿ ಹೇಳಿದರು.

ಇದನ್ನೂ ಓದಿ: Accident: ಹೊಸ ವರ್ಷಕ್ಕೆ ಗೋವಾಕ್ಕೆ ಹೋದವರ ಕಾರು ಡಿಕ್ಕಿ: ತಮಿಳುನಾಡಿನ ನಾಲ್ವರು ಸಾವು

ಹಾಗೆ, ಸ್ಥಳಕ್ಕೆ ಆಗಮಿಸಿದ ನಂತರ ರೋಹಿಣಿ ಜಿಲ್ಲೆಯ ಅಪರಾಧ ತಂಡವನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು. ಅಪರಾಧ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ, ವಿವಿಧ ಕೋನಗಳಿಂದ ಫೋಟೋಗಳನ್ನು ತೆಗೆದುಕೊಂಡಿದೆ ಮತ್ತು ಅಪರಾಧದ ಸ್ಥಳದಿಂದ ಎಕ್ಸಿಬಿಟ್‌ಗಳನ್ನು ತೆಗೆದುಹಾಕಿತು. ಅದರ ನಂತರ, ಮೃತದೇಹವನ್ನು ಮಂಗೋಲ್ಪುರಿಯಲ್ಲಿರುವ ಎಸ್‌ಜಿಎಂ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಬಳಿಕ ಕಾರು ಪತ್ತೆಯಾಗಿದ್ದು, ತನಿಖೆಯ ವೇಳೆ ಸುಲ್ತಾನಪುರಿ ಪೊಲೀಸ್ ಠಾಣೆ ಬಳಿ ಕಾರು ಅಪಘಾತಕ್ಕೀಡಾಗಿದೆ ಎಂದು ವಾಹನದಲ್ಲಿದ್ದವರು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಕೇರಳದಲ್ಲಿ ಪ್ರವಾಸಿ ಬಸ್ ಅಪಘಾತ: ಓರ್ವ ವಿದ್ಯಾರ್ಥಿ ಸಾವು

Latest Videos
Follow Us:
Download App:
  • android
  • ios