Asianet Suvarna News Asianet Suvarna News

ಮಾದಕ ದ್ರವ್ಯ ಕಾರ್ಯಾಚರಣೆ ಬಗ್ಗೆ ಬೆಂಗಳೂರು ಪೊಲೀಸ್ ಟ್ವಿಟ್ ವೈರಲ್

ನಗರ ಪೊಲೀಸರು ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯಗಳ ವಿರುದ್ಧ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಒಟ್ಟು 19 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, 7.06ಕೋಟಿ ಮೌಲ್ಯ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

New Tenants came to Bangalore Jail Bengaluru Polices Tweet Goes Viral akb
Author
First Published May 12, 2023, 11:51 AM IST

ಬೆಂಗಳೂರು: ನಗರ ಪೊಲೀಸರು ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯಗಳ ವಿರುದ್ಧ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಒಟ್ಟು 19 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, 7.06ಕೋಟಿ ಮೌಲ್ಯ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ನಗರ ಪೊಲೀಸರು ಟ್ವಿಟ್ ಮಾಡಿ ಈ ವಿಚಾರ ಖಚಿತಪಡಿಸಿದ್ದಾರೆ. ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ವಿರೋಧಿ ವಿಭಾಗ ಈ ಕಾರ್ಯಾಚರಣೆ ನಡೆಸಿದೆ ಎಂದು ಟ್ವಿಟ್ ತಿಳಿಸಿದೆ.  ಈ ಕಾರ್ಯಾಚರಣೆ ವೇಳೆ 51 ಕೆಜಿ ಗಾಂಜಾ ಮತ್ತು 5 ಕೆಜಿ ಹ್ಯಾಶಿಶ್ ಆಯಿಲ್, 236 ಎಕ್ಸ್‌ಟಾಸಿ ಮಾತ್ರೆಗಳು, 34 ಎಲ್‌ಎಸ್‌ಡಿ ಸ್ಟ್ರಿಪ್‌ಗಳು, 23 ಗ್ರಾಂ ಕೊಕೇನ್, 14 ಒಜಿ ಎಂಡಿಎಂಎ, 17 ಫೋನ್‌ಗಳು, 1 ಬೈಕ್ ಮತ್ತು ಒಂದು ಕಾರನ್ನು ಜಪ್ತಿ ಮಾಡಲಾಗಿದ್ದು,  ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಆದರೆ ಈ ಬಗ್ಗೆ ಬೆಂಗಳೂರು ಪೊಲೀಸರು ಮಾಡಿದ ಟ್ವಿಟ್ ಸ್ವಾರಸ್ಯಕರವಾಗಿದ್ದು, ಈಗ ವೈರಲ್ ಆಗಿದೆ. ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಹೊಸ ಬಾಡಿಗೆದಾರರು ಬಂದಿದ್ದಾರೆ.  ಸಮಯದ ಬಾಡಿಗೆ (Rent) ಪಾವತಿಸಲಾಗುತ್ತದೆ. ನಮ್ಮ ಅತಿಥ್ಯ ಅದ್ಭುತವಾಗಿದೆ ಎಂದು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದು ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.  ಅನೇಕರು ಆರೋಪಿಗಳ ಬಂಧನ ಮಾಡಿದ್ದಕ್ಕೆ ಪೊಲೀಸರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಸ್ಮಾರ್ಟ್ ವಾಚ್ ನಲ್ಲೂ ಡ್ರಗ್ಸ್, ಮಣಿಪಾಲ ಮಾಹೆ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ

ನಿಮ್ಮ ಕೆಲಸದ ಜೊತೆ ನಿಮ್ಮ ಹಾಸ್ಯ (satire) ಪ್ರಜ್ಞೆಯೂ ಕೂಡ ಚೆನ್ನಾಗಿದೆ.  ಒಳ್ಳೆಯ ಕೆಲಸ ಮುಂದುವರೆಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ವೈಜಾಗ್‌ನಿಂದ (Vizag) ನಗರಕ್ಕೆ ಗಾಂಜಾ ಸಾಗಿಸುತ್ತಿದ್ದ ಕೇರಳದ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ನಗರದ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರಿನಲ್ಲಿ ಸಾಗಿಸುತ್ತಿದ್ದ 44 ಕೆಜಿ ಗಾಂಜಾ ಹಾಗೂ 23 ಎಂಡಿಎಂಎ ಮಾತ್ರೆಗಳು, 1 ಕೆಜಿ ಹ್ಯಾಶಿಶ್ ಆಯಿಲ್ (hashish oil) ಮತ್ತು 1.56 ಕೋಟಿ ಮೌಲ್ಯದ ಅಕ್ರಮ ಮಾದಕ ದ್ರವ್ಯಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Bengaluru: ಡ್ರಗ್ಸ್‌ ಸ್ಮಗ್ಲಿಂಗ್‌: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

Follow Us:
Download App:
  • android
  • ios