ಬಾಡೂಟಕ್ಕೆ ಕರೆದು ಮರ್ಡರ್, ಆರೋಪಿಗಳು ಅಂದರ್, ಪ್ರಕಣದ ಹಿಂದೆ ಹೆಣ್ಣಿನ ಪಿಕ್ಚರ್
* ಬಾಡೂಟಕ್ಕೆ ಕರೆದು ಮರ್ಡರ್, ಆರೋಪಿಗಳ ಅಂದರ್
* ಮಾರ್ಚ್ 12 ರಂದು ನಡೆದಿದ್ದ ಕೊಲೆ
* ಪ್ರಕಣದ ಹಿಂದೆ ಇದೆ ಹೆಣ್ಣಿನ ಪಿಕ್ಚರ್
ವರದಿ: ಗಿರೀಶ್ ಕುಮಾರ್
ಗದಗ, (ಏ.4): ಗದಗ ಜಿಲ್ಲೆ (Gadag District) ನರಗುಂದ ತಾಲೂಕಿನ ಲಖಮಾಪುರ ಗ್ರಾಮದಲ್ಲಿ ಮಾರ್ಚ್ 12 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದ ಪೂರ್ಣಾನಂದ, ಮಲ್ಲಪ್ಪ ಬಂಧಿತ ಆರೋಪಿಗಳು. ಗ್ರಾಮದ ಶರಣಪ್ಪ ಅನ್ನೋ ವ್ಯಕ್ತಿಯ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಮಾರ್ಚ್ 12 ರಂದು ಶರಣಪ್ಪ ಶವ ಗ್ರಾಮದ ದುರ್ಗಾ ದೇವಿ ಮಂದಿರದ ಕಟ್ಟೆ ಮೇಲೆ ಪತ್ತೆಯಾಗಿತ್ತು. ಚಿಕನ್ ತಿಂದು ಬರ್ತೀನಿ ಅಂತಾ ಹೇಳಿ ರಾತ್ರಿ ಮನೆಯಿಂದ ಹೋಗಿದ್ದ ಶರಣಪ್ಪ, ಬೆಳಗ್ಗೆ ಮಂದಿರದ ಕಟ್ಟೆ ಮೇಲೆ ಶವವಾಗಿ ಬಿದ್ದಿದ್ದ.
Gadag: ಲವ್ ಮ್ಯಾರೇಜ್, ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ..!
ಕಬ್ಬು ಕಟಾವು ಪೂರ್ಣವಾಗಿದ್ದ ನಂತರ ಮೂರ್ನಾಲ್ಕು ಜನ ಸೇರಿಕೊಂಡು ಮಾಂಸದ ಊಟದ ವ್ಯವಸ್ಥೆ ಮಾಡಿದ್ರು. ಬಾಡೂಟದ ಔತಣಕ್ಕೆ ಹೋಗಿ ಬರ್ತೀನಿ ಅಂತಾ ರಾತ್ರಿ ಬೈಕ್ ತೆಗೆದುಕೊಂಡು ಮನೆಯಿಂದ ಹೋಗಿದ್ದ ಶರಣಪ್ಪ ಬೆಳಗ್ಗೆ ಹೆಣವಾಗಿದ್ದ, ಅನುಮಾನಾಸ್ಪದ ಸಾವು ಅಂತಾ ಪ್ರಕರಣ ದಾಖಲಿಸಿಕೊಂಡಿದ್ದ ನರಗುಂದ ಪೊಲೀಸರು, ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ..
ತಲೆಗೆ ಡೊಣ್ಣೆ ಏಟು.. ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ
ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದ ಪೂರ್ಣಾನಂದ ಶರಣಪ್ಪ ಅವರನ್ನ ಊರ ಹೊರಗಿರೋ ನಿರ್ಮಾಣ ಹಂತದ ಮನೆಯ ಕಟ್ಟಡಕ್ಕೆ ಕರೆತಂದಿದ್ರು. ಅಲ್ಲೇ ಭರ್ಜರಿ ಬಾಡೂಟದ ಪಾರ್ಟಿ ಮಾಡಿದ್ದಾರೆ.. ಪಾರ್ಟಿ ಮಧ್ಯೆ ಶರಣಪ್ಪನಿಗೆ ಫೋನ್ ಕರೆ ಬಂದ ತಕ್ಷಣ ಎದ್ದು ಹೊರಗಡೆ ಬರ್ತಾನೆ. ಆ ಸಮಯದಲ್ಲಿ ಪೂರ್ಣಾನಂದ ಡೊಣ್ಣೆಯಿಂದ ತಲೆ ಹೊಡೆಯುತ್ತಾನೆ. ನಂತರ ಶರಣಪ್ಪನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ಆರೋಪಿಗಳು ಅಲ್ಲಿಂದ ಶರಣಪ್ಪನ ಮೃತ ದೇಹವನ್ನ ಗ್ರಾಮದ ದುರ್ಗಾ ದೇವಿ ಮಂದಿರದ ಕಟ್ಟೆ ಮೇಲೆ ಇಟ್ಟು ಇಬ್ಬರು ಪರಾರಿಯಾಗಿದ್ದರು.
ಆದ್ರೆ ಮಧ್ಯೆ ರಾತ್ರಿ ಊರಿನಲ್ಲಿ ಒಬ್ಬ ಯುವಕನ ಕೊಲೆ ನಡೆದ್ರು ಊರಿನವರಿಗೆ ಗೊತ್ತೇ ಆಗಿಲ್ಲ. ಅಂದು ಊರಿಗೆ ಊರೇ ಜಾತ್ರೆಯ ತಯಾರಿಯಲ್ಲಿತ್ತು. ಹೀಗಾಗಿ ಊರ ಹೊರಗಡೆ ನಡೆದ ಕೊಲೆ ಬಗ್ಗೆ ಅನುಮಾನ ಇರಲಿಲ್ಲ. ಇದನ್ನ ಬಂಡವಾಳ ಮಾಡಿಕೊಂಡಿದ್ದ ಪೂರ್ಣಾನಂದ ಹಾಗೂ ಮಲ್ಲಪ್ಪ ಶವವನ್ನ ಊರು ಆಚೆ ಇರುವ ಗುಡಿ ಕಟ್ಟೆ ಮೇಲೆ ಇರಿಸಿ ಹೋಗಿದ್ರು.. ಕೊಲೆ ನಡೆದ ನಂತರ ಪೂರ್ಣಾನಂದ ಊರಿನಲ್ಲೇ ಓಡಾಡ್ಕೊಂಡಿದ್ದ ಮಲ್ಲಪ್ಪ ತಲೆ ಮರೆಸಿಕೊಂಡಿದ್ದ.. ಪೂರ್ಣಾನಂದನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಚಿತ್ರಣ ಬೆಳಕಿಗೆ ಬಂದಿದೆ...
ಹೆಣ್ಣಿನ ಕಾರಣಕ್ಕೆ ನಡೀತು ಹತ್ಯೆ..
ಆರೋಪಿ ಪೂರ್ಣಾನಂದ ಕುಟುಂಬದ ಹೆಣ್ಣುಮಗಳೊಂದಿಗೆ ಶರಣಪ್ಪ ಸಲುಗೆಯಿಂದ ಇದ್ದ ಅನ್ನೋದೇ ಕೊಲೆಗೆ ಕಾರಣ ಅಂತಾ ತಿಳಿದುಬಂದಿದೆ. ಪೂರ್ಣಾನಂದನ ಸಂಬಂಧಿ ಹೆಣ್ಣುಮಗಳೊಂದಿಗೆ ಶರಣಪ್ಪ ಸುತ್ತಾಟ ನಡೆಸುತ್ತಿದ್ದ. ಅಲ್ಲದೇ ಯುವತಿ ಜೊತೆಗಿದ್ದ ಫೋಟೋವನ್ನ ಊರ ಜನರಿಗೆ ತೋರಿಸಿದ್ನಂತೆ. ಇದ್ರಿಂದ ಕೆರಳಿ ಕೆಂಡವಾಗಿದ್ದ ಪೂರ್ಣಾನಂದ ಶರಣಪ್ಪನ ಹತ್ಯೆ ಮಾಡಿದ್ದಾನೆ ಅನ್ನೋದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಸ್ನೇಹಿತ ಮಲ್ಲಪ್ಪ ಸಹಾಯದಿಂದ ಪೂರ್ಣಾನಂದ ಕೊಲೆಗೆ ಸಂಚು ರೂಪಿಸಿದ್ದ. ಮಲ್ಲಪ್ಪ ಹಾಗೂ ಶರಣಪ್ಪ ಸಣ್ಣಪುಟ್ಟ ವಿಷಯಕ್ಕೆ ಕಿರಿಕ್ ಮಾಡಿಕೊಂಡಿದ್ರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಮಲ್ಲಪ್ಪ. ಶರಣಪ್ಪನ ಕೊಲೆ ಮಾಡೋದಕ್ಕೆ ಸಹಾಯ ಮಾಡಿದ್ದ ಅಂತಾ ಪೋಲಿಸರು ತಿಳಿಸಿದ್ದಾರೆ..