Asianet Suvarna News Asianet Suvarna News

300 ಕೋಟಿ ಆಸ್ತಿಗಾಗಿ ಮಾವನ ಕೊಲೆ, ಚಿನ್ನದ ಮೊಟ್ಟೆ ಬಯಸಿ ಕಬ್ಬಿಣದ ಕಂಬಿ ಎಣಿಸುತ್ತಿರುವ ಸೊಸೆ!

ಐಷಾರಾಮಿ ಜೀವನ, ಗಂಡನ ಮನೆಯಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದರೆ ಸೊಸೆಗೆ ಚಿನ್ನದ ಮೊಟ್ಟೆಯ ಆಸೆಯಾಗಿದೆ. ಮಾವನ ಬಳಿ ಇರುವ 300 ಕೋಟಿ ಆಸ್ತಿ ಲಪಾಟಾಯಿಸಲು ಸುಪಾರಿ ಕಿಲ್ಲರ್ಸ್‌ಗೆ 1 ಕೋಟಿ ರೂಪಾಯಿ ನೀಡಿ ಹತ್ಯೆ ಮಾಡಿಸಿದ್ದಾಳೆ. ಆದರೆ ಇದೀಗ ಜೈಲು ಸೇರಿದ್ದಾಳೆ.

Nagpur Woman Arrest after plot murder of Father in law for His rs 300 crore property ckm
Author
First Published Jun 12, 2024, 6:51 PM IST

ನಾಗ್ಪುರ(ಜೂ.12) ಆಸ್ತಿಗಾಗಿ ಕೊಲೆ ಪ್ರಕರಣಗಳು ಹೊಸದಲ್ಲ. ಇತ್ತೀಚೆಗೆ ಸಂಬಂಧಗಳ ನಡುವೆ, ಆಪ್ತರ ನಡುವೆ ಈ ಕೊಲೆಗಳು ನಡೆಯತ್ತಿದೆ.  ಇದೀಗ ಈ ಸಾಲಿಗೆ ಮತ್ತೊಂದು ರೋಚಕ ಸ್ಟೋರಿ ಸೇರಿಕೊಂಡಿದೆ. ಮದುವೆಯಾಗಿ ಗಂಡನ ಮನೆಗೆ ಬಂದ ಅರ್ಚನಾಗೆ ಐಷರಾಮಿ ಜೀವನ ಸಿಕ್ಕಿತ್ತು. ಯಾವುದೇ ಕೊರತೆ ಇರಲಿಲ್ಲ. ಇಷ್ಟರಲ್ಲೇ ಗಂಡನ ತಂದೆ ಬಳಿ ಕೋಟಿ ಕೋಟಿ ಆಸ್ತಿ ಇದೆ ಅನ್ನೋದು ಈಕೆಗೆ ಗೊತ್ತಾಗಿದೆ. ಅದೇ ಕ್ಷಣದಿಂದ ಮಾವನ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ. ಕಾರು ಹತ್ತಿಸಿ ಮಾವನ ಕೊಂದು ಅಪಘಾತ ಕತೆ ಸೃಷ್ಟಿಸಿದ್ದರು. ಆದರೆ ಪ್ರಕರಣ ತನಿಖೆ ನಡೆಸಿದ ಪೊಲೀಸರು ಇದೀಗ ಸೊಸೆ ಅರ್ಚನಾ ಹಾಗೂ ಸುಪಾರಿ ಹಂತಕರನ್ನು ಬಂಧಿಸಿದ ಘಟನೆ ನಾಗ್ಪುರದಲ್ಲಿ ನಡೆದಿದೆ.

ಬಾಲಾಜಿ ನಗರದ ನಿವಾಸಿ 82 ವರ್ಷದ ಪುರುಷೊತ್ತಮ ಪುಟ್ಟೆವಾರ್ ಅತ್ಯಂತ ಶ್ರೀಮಂತ ವ್ಯಕ್ತಿ. ದುಡಿದು ಸಂಪಾದನೆ ಮಾಡಿ ಆಸ್ತಿ ಮಾಡಿಟ್ಟಿದ್ದಾರೆ. ಮಕ್ಕಳಿಗೆ, ಕುಟುಂಬಸ್ಥರಿಗೆ ಎಲ್ಲರಿಗೂ ಸಾಹಯ ಮಾಡಿದ್ದಾರೆ. ಪುರುಷೋತ್ತಮ್ ಪುಟ್ಟೆವಾರ್ ಮಗನನ್ನು ಮದುವೆಯಾದ ಅರ್ಚನಾ ಆರ್ಥಿಕವಾಗಿ ಮಧ್ಯಮ ವರ್ಗದ ಕುಟುಂಬದವಳು. 

ಮುಂದುವರಿದ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ಅಪಘಾತ; ಸಿನಿಮಾ ಸ್ಟೈಲ್‌ನಲ್ಲಿ ಕೆರೆಗೆ ಹಾರಿದ ಕಾರು!

ಮಾವನ ಆಸ್ತಿ ನೋಡಿ ಅರ್ಚನಾ ದಂಗಾಗಿದ್ದಾಳೆ. ಕಾರಣ ಮಾವನ ಒಟ್ಟು ಆಸ್ತಿ ಬರೋಬ್ಬರಿ 300 ಕೋಟಿ ರೂಪಾಯಿ. ಮಾವನ ಹತ್ಯೆ ಮಾಡಿ 300 ಕೋಟಿ ರೂಪಾಯಿ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಅರ್ಚನಾ ಪ್ಲಾನ್ ಮಾಡಿದ್ದಾಳೆ. ಇದಕ್ಕಾಗಿ ಸುಪಾರಿ ಕಿಲ್ಲರ್ಸ್ ಸಂಪರ್ಕಿಸಿ ಟಾಸ್ಕ್ ನೀಡಿದ್ದಾಳೆ. ಒಟ್ಟು ಮಾವನ ಯಾವುದೇ ಅನುಮಾನ ಬರದಂತೆ ಮುಗಿಸಿದರೆ ಬರೋಬ್ಬರಿ 1 ಕೋಟಿ ರೂಪಾಯಿ ಆಫರ್ ನೀಡಿದ್ದಾಳೆ.

ಇದರರಂತೆ ಸುಪಾರಿ ಕಿಲ್ಲರ್ಸ್ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದಾರೆ. ನಡೆದುಕೊಂಡು ಹೋಗುತ್ತಿದ್ದ ಪುರುಷೋತ್ತಮ್ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ. ಹಿಟ್ ಅಂಡ್ ರನ್ ಕೇಸ್ ರೀತಿಯಲ್ಲಿ ಈ ಕೊಲೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಈ ಅಪಘಾತ ದೃಶ್ಯ ದಾಖಲಾಗಿತ್ತು. ಪೊಲೀಸರು ಚಾಲಕನ ಬಂಧಿಸಿ ವಿಚಾರಣೆ ನಡೆಸಿದ್ದರು. ಅಚಾನಕ್ಕಾಗಿ ನಡೆದ ಅಪಘಾತವಾಗಿದ್ದ ಕಾರಣ ಆರೋಪಿ ಬೇಲ್ ಮೇಲೆ ಹೊರಬಂದಿದ್ದ.

ಅನುಮಾನಗೊಂಡ ಪೊಲೀಸರು ಚಾಲಕನ ಹೇಳಿಕೆ ತಾಳವಾಗದ ಕಾರಣ ಸೊಸೆ ಅರ್ಚನಾ ಸೇರಿ ಮತ್ತಿಬ್ಬರು ಸುಪಾರಿ ಹಂತಕರನ್ನೂ ಬಂಧಿಸಿದ್ದರು. ಆದರೆ ಬಲವಾದ ಸಾಕ್ಷ್ಯಗಳು ಇಲ್ಲದ ಕಾರಣ ಅರ್ಚನಾ ಪೊಲೀಸ್ ಕಸ್ಟಡಿ 3ದಿನಕ್ಕಿಂತ ಹೆಚ್ಚು ಸಿಗಲಿಲ್ಲ. ಮುಂದುವರಿಸಲು ಸಾಧ್ಯವಾಗಲಿಲ್ಲ. ಆಧರೆ ಪೊಲೀಸರಿಗೆ ಈ ಪ್ರಕರಣದಲ್ಲಿ ಅನುಮಾನ ಹೆಚ್ಚಾಗಿದೆ. ಮತ್ತೆ ಸಿಸಿಟಿವಿ ದೃಶ್ಯ ಪರೀಶಿಲಿಸಿದ್ದಾರೆ. ಕಾರಿನ ನಂಬರ್ ತೆಗೆದು ನೋಡಿದ್ದಾರೆ. ಪಾಳು ಬಿದ್ದಿದ್ದ ಕಾರನ್ನು ಸರಿ ಮಾಡಿಸಿ ತಂದು ಅಪಘಾತ ಮಾಡಲಾಗಿತ್ತು. ಹೀಗಾಗಿ ಪ್ರಕರಣದ ಮರು ತನಿಖೆ ಆರಂಭಗೊಂಡಿದೆ. 

ಎಲ್ಲರ ಬ್ಯಾಂಕ್ ಖಾತೆಗಳ ಪರೀಶೀಲನೆ ಆರಂಭಗೊಡಿತ್ತು. ಈ ವೇಳೆ ಲಕ್ಷ ಲಕ್ಷ ರೂಪಾಯಿ ವರ್ಗಾವಣೆಯಾಗಿರುವುದು, ಕಾರು ಖರೀದಿಸಿದ ಮಾಹಿತಿಗಳು ಲಭ್ಯವಾಗಿದೆ. ಮತ್ತೆ ಎಲ್ಲರನ್ನೂ ಬಂಧಿಸಿದ ಪೊಲೀಸರು ತಮ್ಮದೇ ಭಾಷೆಯಲ್ಲಿ ಕೇಳಿದ್ದರೆ. ಈ ವೇಳೆ ನಡೆದ ಘಟನೆ ಹೊರಬಂದಿದೆ. ಇದೀಗ ಅರ್ಚನಾ ಕಂಬಿ ಹಿಂದೆ ಸೇರಿದ್ದಾರೆ.

Bengaluru: ಕಿಟಕಿಯ ಗ್ರಿಲ್‌ ಕತ್ತರಿಸಿ ಮನೆ ಕಳ್ಳತನ ಮಾಡುತ್ತಿದ್ದವರ ಬಂಧನ!
 

Latest Videos
Follow Us:
Download App:
  • android
  • ios