Asianet Suvarna News Asianet Suvarna News

ಪೋಕ್ಸೋ ಕೇಸಲ್ಲಿ ಜೈಲು: ಮುರುಘಾ ಶರಣರೇ ಮೊದಲಿಗರಲ್ಲ: ಕಟಕಟೆಯಲ್ಲಿ ಆರೋಪಿಗಳಾದ ಸ್ವಾಮಿಗಳೆಷ್ಟು ಗೊತ್ತಾ?

Swamijis Arrested in POCSO Case: ಪೋಕ್ಸೋ ಕೇಸಲ್ಲಿ ಜೈಲು ಪಾಲಾದವರಲ್ಲಿ ಮುರುಘಾ ಶರಣರೇ  ಮೊದಲಿಗರಲ್ಲ! ನಿತ್ಯಾನಂದ, ಆಸಾರಾಮ್​​​,  ರಾಮ್​​​ ರಹೀಮ್​​​​, ಇನ್ಯಾರೆಲ್ಲ ಇದ್ದಾರೆ ಲಿಸ್ಟ್​ನಲ್ಲಿ? ಇದೆಲ್ಲದರ ರಿಪೋರ್ಟ್‌ ಇಲ್ಲಿದೆ

Murugha Mutt Row all you need to know about Swamijis Pontiffs seers arrested in POCSO Case mnj
Author
First Published Sep 3, 2022, 4:00 PM IST

ಬೆಂಗಳೂರು (ಸೆ. 03): ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಶರಣರನ್ನು  (Murugha Shree) ಚಿತ್ರದುರ್ಗ ಪೊಲೀಸರು ಅರೆಸ್ಟ್​​​ ಮಾಡಿದ್ದಾರೆ. ಪೋಕ್ಸೋ ಪ್ರಕರಣ (POCSO Case) ದಾಖಲಾಗಿ ಏಳು ದಿನಗಳ ಬಳಿಕ, ಗುರುವಾರ ತಡರಾತ್ರಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು (Chitradurga Police) ಬಂಧಿಸಿದ್ದಾರೆ.  ಪೋಕ್ಸೋ ಕೇಸ್​​​​​​ನಲ್ಲಿ ಮುರುಘಾ ಶರಣರನ್ನು 4 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪೋಕ್ಸೋ ಕೇಸ್​​​​​ನಲ್ಲಿ ಜೈಲಿಗೆ ಹೋಗಿರುವವರಲ್ಲಿ ಮುರುಘಾ ಶ್ರೀಗಳೇ ಮೊದಲಿಗರಲ್ಲ. ಇದಕ್ಕೂ ಮೊದಲು ಅನೇಕರು ಪೋಕ್ಸೋ ಕೇಸ್​​​​​​ನಲ್ಲಿ ಜೈಲಿಗೆ ಹೋಗಿದ್ದಾರೆ. 

ಏಳು ದಿನಗಳ ಹಿಂದೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ, ಚಿತ್ರದುರ್ಗದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ ಐದಾರು ದಿನಗಳಾದ್ರು ಶ್ರೀಗಳನ್ನು ದುರ್ಗ ಪೊಲೀಸರು ಅರೆಸ್ಟ್​​ ಮಾಡಿರಲಿಲ್ಲ. ಹೀಗಾಗಿ ಈ ಪ್ರಕರಣ ಯಾವ ದಿಕ್ಕಿಗೆ ಸಾಗುತ್ತೆ ಅನ್ನೋ ಗೊಂದಲ ಜನರಲ್ಲಿತ್ತು. 

ನಿಜ, ಚಿತ್ರದುರ್ಗ ಪೊಲೀಸರಿಗೆ ಸಾಮಾನ್ಯನೊಂದಿಗೆ ನಡೆದುಕೊಂಡಂತೆ, ಶ್ರೀಗಳೊಂದಿಗೆ ನಡೆದುಕೊಳ್ಳುವುದು ಕಷ್ಟವಾಗಿತ್ತು. ಸಾಮಾನ್ಯನನ್ನು ಸರಳವಾಗಿ ಅರೆಸ್ಟ್​ ಮಾಡಿದಂತೆ ಶ್ರೀಗಳನ್ನು ಅರೆಸ್ಟ್​ ಮಾಡುವುದು ಕಷ್ಟವಾಗಿತ್ತು. ಅವರು ಶ್ರೀಗಳು, ತಮ್ಮ ಹಿಂದೆ ಬೆಂಬಲವಾಗಿ ದೊಡ್ಡ ಭಕ್ತಗಣವನ್ನೇ ಹೊಂದಿದವರು. ಹೀಗಾಗಿ ಪೊಲೀಸರಿಗೆ ಶ್ರೀಗಳ ಅರೆಸ್ಟ್​ ಅಷ್ಟು ಸುಲಭವಾಗಿರ್ಲಿಲ್ಲ. 

ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ, ವರದಿಯಲ್ಲಿ ಗಂಡಸ್ತನ ಸಾಬೀತು

ಇದೆಲ್ಲ ಕಾರಣಕ್ಕೆ ಶ್ರೀಗಳ ಮೇಲಿನ ಪೋಕ್ಸೋ ಪ್ರಕರಣದ ಏನಾಗುತ್ತೆ ಅನ್ನೋ ಪ್ರಶ್ನೆ ಪ್ರತಿಯೊಬ್ಬರದ್ದು ಆಗಿತ್ತು. ಕೇಸ್ ದಾಖಲಿಸಿದವರಿಗೆ ನ್ಯಾಯ ಸಿಗುತ್ತಾ ಅನ್ನೋ ಪ್ರಶ್ನೆ ಕಾಡಲಾರಂಭಿಸಿತ್ತು. ಆದ್ರೆ ಪೋಕ್ಸೋ ಪ್ರಕರಣ ದಾಖಲಾಗಿ 7 ದಿನಗಳ ಬಳಿಕ,  ಮುರುಘಾ ಶರಣರನ್ನು ದುರ್ಗ ಪೊಲೀಸರು ಬಂಧಿಸಿದ್ದರು. ಇವರ ಬಂಧನದ ನಂತರದ ಕ್ಷಣದಿಂದ, ಇಂದು ಸಂಜೆವರೆಗೆ ಅನೇಕ ಟ್ವಿಸ್ಟ್​​ಗಳು, ಕುತೂಹಲಕಾರಿ ಬೆಳವಣೆಗೆಗಳು ಮತ್ತು ಚಿತ್ರದುರ್ಗ ಪೊಲೀಸರು ಊಹಿಸದೇ ಇರುವಂತ ಕೆಲವೊಂದು ಕ್ಷಣಗಳು ನಡೆದಿವೆ. ಇನ್ನು ಪೋಕ್ಸೋ ಕೇಸಲ್ಲಿ ಜೈಲು ಪಾಲಾದವರಲ್ಲಿ ಮುರುಘಾ ಶರಣರೇ  ಮೊದಲಿಗರಲ್ಲ! ಕಟಕಟೆಯಲ್ಲಿ ಆರೋಪಿಗಳಾದ  ಸ್ವಾಮಿಗಳೆಷ್ಟು ಜನ ಗೊತ್ತಾ? ನಿತ್ಯಾನಂದ, ಆಸಾರಾಮ್​​​,  ರಾಮ್​​​ ರಹೀಮ್​​​​, ಇನ್ಯಾರೆಲ್ಲ ಇದ್ದಾರೆ ಲಿಸ್ಟ್​ನಲ್ಲಿ? ಇದೆಲ್ಲವನ್ನು ನೋಡೋಣ 

ಬೆಂಗಳೂರಿಗೆ ಕರೆದೊಯ್ಯುವ ಯತ್ನ: ಇನ್ನು ಬಂಧನದ ನಂತರ ರಾತ್ರಿಯಿಡೀ ಜೈಲಲ್ಲಿ ಕಳೆದಿದ್ದ ಶಿವಮೂರ್ತಿ ಶರಣರಿಗೆ ಬೆಳಗ್ಗೆ 7 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡು, ಅವರನ್ನು ಜಿಲ್ಲಾ ಆಸ್ಪತ್ರೆಯ ಐಸಿಯು ವಾರ್ಡ್‌ಗೆ ದಾಖಲಿಸಲಾಗಿತ್ತು. ಆಗ ಪರೀಕ್ಷೆ ನಡೆಸಿದ ವೈದ್ಯರು, ಶ್ರೀಗಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದರು.

 ದಾವಣಗೆರೆಯಿಂದ ಇಬ್ಬರು ಹೃದಯ ರೋಗ ತಜ್ಞರು ಆಗಮಿಸಿ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆಯೆಂಬ ಶಿಫಾರಸು ಕೂಡ ಮಾಡಿದ್ದರು. ಆದರೆ ನ್ಯಾಯಾಧೀಶೆ ಬಿ.ಕೆ.ಕೋಮಲ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆದೊಯ್ಯುವ ವಿಚಾರ ಕೈಬಿಡಲಾಯಿತು.

ಜೈಲುವಾಸ ತಪ್ಪಿಸಲು ಎದೆನೋವು ನಾಟಕ ಆಡಿದರಾ ಮುರುಘಾ ಶ್ರೀ, ಇಲ್ಲಿದೆ ಪೋಕ್ಸೋ ಕೇಸ್ ಸಂಪೂರ್ಣ ವಿವರ!

ವ್ಹೀಲ್‌ಚೇರ್‌ನಲ್ಲಿ ಹೋಗಿ ನಡೆದು ಬಂದರು: ನ್ಯಾಯಾಲಯಕ್ಕೆ ಹೋಗುವಾಗ ವ್ಹೀಲ್‌ಚೇರ್‌ನಲ್ಲಿದ್ದ ಶ್ರೀಗಳು ವಾಪಸಾಗುವಾಗ ನಡೆದುಕೊಂಡೇ ಬಂದರು. ನ್ಯಾಯಾಲಯ ಪೊಲೀಸ್‌ ವಶಕ್ಕೆ ನೀಡಿದ ತರುವಾಯ ಮತ್ತೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಆರೋಗ್ಯ ತಪಾಸಣೆ ನಡೆಸಿ ವಿಚಾರಣೆಗೆ ಕರೆದೊಯ್ದರು. ಶಿವಮೂರ್ತಿ ಮುರುಘಾಶರಣರನ್ನು ನ್ಯಾಯಾಲಯಕ್ಕೆ ಕರೆ ತಂದ ಹಿನ್ನೆಲೆಯಲ್ಲಿ ಅವರನ್ನು ನೋಡಲು ನ್ಯಾಯಾಲಯದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿ​ದ್ದ​ರು.

Follow Us:
Download App:
  • android
  • ios