Bengaluru Crime: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ: ಮಕ್ಕಳಿಂದಲೇ ಜೈಲು ಸೇರಿದ ತಾಯಿ
ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದ ಕಿರಾತಕಿ ಪತ್ನಿ
ತಂದೆ ಕೊಲೆಯನ್ನ ಕಣ್ಣಾರೆ ಕಂಡಿದ್ದ ಮಕ್ಕಳು
6 ತಿಂಗಳ ಬಳಿಕ ನಂದಿನಿ ಲೇಔಟ್ ಪೊಲೀಸರಿಂದ ಆರೋಪಿಗಳ ಬಂಧನ
ವರದಿ- ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜ.07): ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ದರು. 18 ವರ್ಷದ ಜೀವನ ಬದುಕಿಗೆ ಇಬ್ಬರು ಮಕ್ಕಳು ಸಹ ಇದ್ದರು. ಗಂಡ ಹೆಂಡತಿ ಸಂಸಾರ ಮಧ್ಯೆ ಎಂಟ್ರಿಕೊಟ್ಟವನ್ನೇ ಈ ವಿಲನ್. ತಂದೆಯ ಕೊಲೆಯನ್ನ ಕಣ್ಣಾರೇ ಕಂಡು ಆರು ತಿಂಗಳ ಬಳಿಕ ಕೊಲೆ ರಹಸ್ಯ ಬಾಯಿಬಿಟ್ಟ ಮಕ್ಕಳು. ಪ್ರಿಯಕರನ ಜೊತೆಗೂಡಿ ಪತಿಗೆ ಮೂಹರ್ತ ಇಟ್ಟು ಅಂದರ್ ಆಗಿದ್ದಾರೆ ಪ್ರಣಯ ಪ್ರೇಮಿಗಳು.
ಕಳೆದ 18 ವರ್ಷಗಳ ಹಿಂದೆ ಅಂಜಿನೇಯ ಮತ್ತು ಅನಿತಾ ಮದುವೆಯಾಗಿ ನಂದಿನಿ ಲೇಔಟ್ ನಲ್ಲಿ ಇಬ್ಬರ ಮಕ್ಕಳ ಜತೆ ವಾಸವಾಗಿದ್ದರು. ಅನಿತಾ ತನ್ನ ಅಕ್ಕನ ಮನೆಗೆ ಹೋಗಿ ಬರುತ್ತಿದ್ದಳು. ಅಕ್ಕನ ಮನೆಯ ಪಕ್ಕದಲ್ಲೇ ಈ ರಾಕೇಶ್ ವಾಸ ಮಾಡಿಕೊಂಡಿದ್ದನು. ಅನಿತಳನ್ನು ನೋಡಿ ಆಕೆಯ ಸೌಂದರ್ಯಕ್ಕೆ ಫಿದಾ ಆಗಿದ್ದನು. ಹೀಗಾಗಿ, ಅಕೆ ಪರಿಚಯ ಮಾಡಿಕೊಂಡು ನಂಬರ್ ಎಕ್ಸ್ಜೇಂಜ್ ಕೂಡ ಮಾಡಿಕೊಂಡಿದ್ದನು. ಕಳೆದ ಎರಡು- ಮೂರು ವರ್ಷಗಳಿಂದ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಲೀಲಾಜಾಲವಾಗಿ ಯಾರ ಅಡ್ಡಿ ಆತಂಕವೂ ಇಲ್ಲದೇ ನಡೆಯುತ್ತಿತ್ತು.
ಉಸಿರುಗಟ್ಟಿಸಿ ಕೊಲೆ: ಆದರೆ, ಇದನ್ನ ಮುಂದುವರೆಸಲು ಪತಿ ಆಂಜಿನೇಯ ಅಡ್ಡಿಯಾಗುತ್ತಾನೆ ಎಂದು ತಿಳಿದು ಪತಿಯನ್ನೇ ಮುಗಿಸಲು ಇಬ್ಬರೂ ಸೇರಿ ಪ್ಲಾನ್ ಮಾಡಿದ್ದರು. ಪತಿ ಆಂಜನೇಯನನ್ನು ಮುಗಿಸಿದರೆ ತಮ್ಮ ಅನೈತಿಕ ಸಂಬಂಧವನ್ನು ಕೇಳಲು ಯಾರೂ ಇರುವುದಿಲ್ಲ ಎಂದು ಯೋಚನೆ ಮಾಡಿದ್ದರು. ಹೀಗಾಗಿ, ಕಳೆದ ಜೂ.18 ರಂದು ಮನೆಯಲ್ಲಿ ಗಂಡ ಮಲಗಿರುವಾಗ ಕಿರಾತಕಿ ಪತ್ನಿ ತನ್ನ ಗಂಡ ಆಂಜನೃಯನ ತಲೆಯ ಮೇಲೆ ದಿಂಬಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆಗೆ ಟ್ವಿಸ್ಟ್: ಆರೋಪಿ ಕಾಲೇಜಿನೊಳಗೆ ಬರಲು ಐಡಿ ಕಾರ್ಡ್ ಕೊಟ್ಟಿದ್ಯಾರು?
ಹೃದಯಾಘಾತದ ಸಾವು ಎಂದು ಕಥೆ: ಪತಿ ಆಂಜನೇಯನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಅನಿತಾ ಮರುದಿನ ಬೆಳಗ್ಗೆ ಎಲ್ಲ ಸಂಬಂಧಿಕರಿಗೆ ಕರೆ ಮಾಡಿದ ಅನಿತಾ ಅಂಜಿನೇಯಗೆ ಹೃದಯಘಾತ ಆಗಿ ಮೃತಪಟ್ಟಿದ್ದಾನೆ ಎಂದು ನಂಬಿಸಿದ್ದಳು. ವೃತ್ತಿಯಲ್ಲಿ ಪೇಟಿಂಗ್ ಹಾಗೂ ಟೆಲ್ಸ್ ಕೆಲಸ ಮಾಡಿಕೊಂಡಿದ್ದ ಆಂಜಿನೇಯ ಕುಡಿತ ಚಟಕ್ಕೆ ಬಿದ್ದು ಮದ್ಯದ ದಾಸನಾಗಿದ್ದನು. ಇದನ್ನೇ ಬಂಡವಾಳ ಮಾಡಿಕೊಂಡು ಗಂಡ ಕುಡಿಯುತ್ತಾನೆ. ಹಾಗಾಗಿ, ಹುಷಾರಿಯಲ್ಲದೆ ಹೃದಯಘಾತ ಅಂತ ಸಂಬಂಧಿಕರಿಗೆ ಮತ್ತು ಸ್ಥಳೀಯರಿಗೂ ಹೇಳಿದ್ದಳು. ಎಲ್ಲರೆದುರು ತನಗೆ ಮತ್ತು ತನ್ನ ಮಕ್ಕಳಿಗೆ ಮುಂದಿನ ಜೀವನಕ್ಕೆ ಗತಿ ಯಾರು ಎಂದು ಅತ್ತು-ಕರೆದು ಭಾರಿ ನಾಟಕ ಮಾಡಿದ್ದಳು.
ಕೊಲೆಯನ್ನು ಕಣ್ಣಾರೆ ಕಂಡ ಮಕ್ಕಳು: ತಾಯಿ ಪ್ರೀಯಕರ ಕೊಲೆ ಮಾಡಿದ್ದು ಕಣ್ಣಾರೆ ಕಂಡ ಮಕ್ಕಳು ಭಯಕ್ಕೆ ಹೆದರಿ ಈ ವಿಷಯವನ್ನ ಯಾರಿಗೂ ಹೇಳಿರಲಿಲ್ಲ. ಇನ್ನು ಅನೈತಿಕ ಸಂಬಂಧಕ್ಕೆ ಯಾರೊಬ್ಬರೂ ಅಡ್ಡಿಯಾಗಿರದ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ತನ್ನ ಪ್ರಿಯಕರ ರಾಕೇಶ್ ಜತೆ ಅನಿತಾ ಪರಾರಿಯಾಗಿದ್ದಳು. ಯಾವಾಗ ಮಕ್ಕಳನ್ನು ಬಿಟ್ಟು ಅನಿತಾ ಓಡಿ ಹೋದ ನಂತರ ಮೃತ ದುರ್ದೈವಿ ಆಂಜನೇಯನ ತಂದೆ-ತಾಯಿಗೆ ಸಾವಿನ ಬಗ್ಗೆ ಅನುಮಾನ ಬಂದಿದೆ. ಜೊತೆಗೆ, ಅನಿತಾಳ ಮಕ್ಕಳು ಕೂಡ ತಮ್ಮ ತಂದೆ ಆಂಜನೇಯನನ್ನು ತಾಯಿ ಅನಿತಾಳೇ ಕೊಲೆ ಮಾಡಿದ್ದಾರೆ ಎಂಬ ವಿಚಾರ ಬಾಯಿಬಿಟ್ಟು ಹೇಳಿದ್ದಾರೆ.
ಮನೇಲಿ ಚೆಂದದ ಹೆಂಡತಿಯಿದ್ರೂ ಪುರುಷರು ಮತ್ತೊಬ್ಬಳ ಪ್ರೀತೀಲಿ ಬೀಳೋದ್ಯಾಕೆ ?
ಪ್ರಿಯಕರನನ್ನೇ ತಮ್ಮನೆಂದಳು: ಕೊಡಲೇ ಆಂಜಿನೇಯ ಕುಟುಂಬಸ್ಥರು ಮಕ್ಕಳೊಂದಿಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ನಡೆದ ಘಟನೆ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಇಬ್ಬರ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳಾದ ಅನಿತಾ ಮತ್ತು ರಾಕೇಶ್ ಅವರನ್ನು ರಾಕೇಶ್ ತನ್ನ ತಮ್ಮನೆಂದು ಪೊಲೀಸರಿಗೆ ಯಾಮಾರಿಸಲು ಹೊರಟ್ಟಿದ್ದಳು. ಆದರೆ, ಪೊಲೀಸರು ಇಬ್ಬರನ್ನೂ ಪ್ರತ್ಯೇಕವಾಗಿರಿಸಿ ಪೊಲೀಸರ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ.
ಸದ್ಯ ರಾಕೇಶ್ ಮತ್ತು ಅನಿತಾ ರನ್ನ ಬಂಧಿಸಿರುವ ನಂದಿನಿ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಗಂಡನ ಜತೆ ಬಾಳಿ ಬದುಕಬೇಕಾದವಳು ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಹೋಗಿ ಗಂಡನನ್ನು ಕೊಂದು ಜೈಲು ಸೇರಿ ಕಂಬಿ ಎಣಿಸುತ್ತಿದ್ದಾಳೆ.