Asianet Suvarna News Asianet Suvarna News

Crime News: ಬುದ್ಧಿವಾದ ಹೇಳಿದಕ್ಕೆ ಕೊಲೆ; ರಾಜಗೋಪಾಲನಗರ ಪೊಲೀಸರಿಂದ ಆರೋಪಿಗಳ ಬಂಧನ 

ಸಣ್ಣ ಪುಟ್ಟ ಕಾರಣಕ್ಕೆ ಕೊಲೆ ಮಾಡುವಂಥ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇವೆ. ಚಿಲ್ಲರೆ ಹಣಕ್ಕೆ, ಸೈಡ್ ಬಿಡಲಿಲ್ಲ ಎಂಬ ಕಾರಣಕ್ಕೆ, ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆಗಳು ನಡೆದ ಬಗ್ಗೆ ವರದಿಯಾಗುತ್ತಲೇ ಇವೆ. ಇಲ್ಲೊಬ್ಬ ಬುದ್ಧಿವಾದ ಹೇಳಿದನೆಂದು ಕೊಲೆ ಮಾಡಿದ್ದಾನೆ!

Murder for wisely said  Arrest of accused by Rajagopalnagar police banglore rav
Author
Bangalore, First Published Aug 24, 2022, 4:03 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು (ಆ.24):  ಅಜೀಮುಲ್ಲಾ ಖಾನ್ ಕೊಲೆ ಪ್ರಕರಣ ಭೇದಿಸಿರುವ ರಾಜಗೋಪಾಲನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ..ಈ ಮೂವರೇ ಅಜೀಮುಲ್ಲಾ ಖಾನ್ ಕೊಲೆ‌ಮಾಡಿ ಜೈಲು ಪಾಲಾಗಿರೊ ಕ್ರಿಮಿನಲ್ಸ್ ಗಳು. ಅಜೀಮುಲ್ಲಾ ಖಾನ್(Azimullah Khan) ಮತ್ತು ಈ ಮೂವರು ಆರೋಪಿಗಳು ಕೂಡ ರಾಜಗೋಪಾಲನಗರ ಪೊಲೀಸ್ ಠಾಣೆ(Rajgopal Nagar Police Statiion)ವ್ಯಾಪ್ತಿಯ ಹೆಗ್ಗನಹಳ್ಳಿ(Hegganahalli)ನಿವಾಸಿಗಳು.

Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ

ಜೀವನದ ಬಂಡಿ ಸಾಗಿಸಲು ಸ್ಕ್ರಾಪ್ ಬ್ಯುಸಿನೆಸ್(scrap business) ಮಾಡಿಕೊಂಡಿದ್ರು.ಇಷ್ಟಾಗಿದ್ರು ಇವತ್ತು ಕಂಬಿ ಹಿಂದೆ ಹೋಗಿ ಸ್ಥಿತಿ ಬರ್ತಾ ಇರ್ಲಿಲ್ಲ.ಆದ್ರೆ ಏರಿಯಾದಲ್ಲಿ ನನ್ನದೇ ಮಾತು ನಡೆಯಬೇಕು ಅನ್ನೋ ಪ್ರತಿಷ್ಟೆಗೆ ಬಿದ್ದು ಓರ್ವ ಶವವಾಗಿ ಹೋದ್ರೆ ಮತ್ತೆ ಮೂವರು ಜೈಲುಪಾಲಾಗಿದ್ದಾರೆ‌. ಹೌದು ಅಜೀಮುಲ್ಲಾ ಖಾನ್ ಹಿರಿಯನಾಗಿದ್ರಿಂದ ನನ್ನ ಮಾತನ್ನು  ಏರಿಯಾದಲ್ಲಿ ಜನ ಕೇಳಬೇಕು ಅನ್ನೋ ಮನಸ್ಥಿತಿ ಹೊಂದಿದ್ದ.ಆದ್ರೆ ಈ ಹರೆಯದ ಹುಡುಗನಿಗೆ ಅದು ಅತೀಯಾಗಿ ಕಾಣತೊಡಗಿತ್ತು.ಸಣ್ಣ ಪುಟ್ಟ ವಿಚಾರಕ್ಕೂ ಇಬ್ಬರ ಮಧ್ಯೆ ಗಲಾಟೆ ನಡಿತಾ ಇತ್ತು.ಹೀಗೆ ಒಂದಿನ ಅನೀಜ್ಹ್ ತಲೆ ಮೇಲೆ ಅಜೀಮುಲ್ಲಾ ಹೊಡೆದು.ಈ ದೊಡ್ಡ ಮಾತೆಲ್ಲ ಯಾಕೊ ನಿನಗೆ ನೆಟ್ಟಗೆ ಬದುಕು ಹೋಗು ಅಂದಿದ್ನಂತೆ .ಅದೇ ಜಿದ್ದು ಇಟ್ಟುಕೊಂಡಿದ್ದ ಆಸಾಮಿ ಆತನ ಉಸಿರೆ ನಿಲ್ಲಿಸಿಬಿಟ್ಟಿದ್ದಾನೆ.

 ಅಷ್ಟಕ್ಕೂ ಆಗಿದ್ದೇನಂದ್ರೆ ಆವತ್ರು ಆಗಸ್ಟ್ 17 ರ ರಾತ್ರಿ.ಮತ್ತೆ ಅಜೀಮುಲ್ಲಾ ಮತ್ತು ಅನೀಜ್ಹ್(Aneejh) ಮಧ್ಯೆ ಗಲಾಟೆ ಶುರುವಾಗಿದೆ.ಈ ವೇಳೆ ಅಜೀಮುಲ್ಲಾ ನಿನ್ನ ತಂದೆಯನ್ನ ಕರೆದುಕೊಂಡು ಬಾ ಮಾತಾಡಬೇಕು ಅಂತಾ ಹೇಳಿಕಳಿಸಿದ್ದ.ಅದ್ರಂತೆ ಅನೀಜ್ಹ್ ತನ್ನ ತಂದೆ ಸೈಯದ್ ಅಕ್ಮಲ್(Syed Akmal) ನನ್ನ ಕರೆದುಕೊಂಡು ಬಂದಿದ್ದ.ಹೀಗೆ ಬಂದವನು ಮನೆಯಿಂದಲೇ ಒಂದು ಗತಿ ಕಾಣಿಸಬೇಕು ಅಂತಾ ನಿರ್ಧಾರ ಮಾಡಿಕೊಂಡು ಚಾಕು ತಂದಿದ್ದ.ಅತ್ತ ತಂದೆ ಮಾತನಾಡ್ತಿದ್ದಂತೆ ಮತ್ತೊಬ್ಬ ಸ್ನೇಹಿತ ಆರೋಪಿ ಸಲ್ಮಾನ್ ಜೊತೆಗೆ ಬಂದು ಚಾಕುವಿನಿಂದ ಚುಚ್ಚಿ ಹತ್ಯೆಗೈದಿದ್ದಾರೆ .

Social Media Upload| ಸಾಲ ವಾಪಸ್ ಕೊಡದ್ದಕ್ಕೆ ಬೆತ್ತಲಾಗಿಸಿ ಡ್ಯಾನ್ಸ್ ಮಾಡಿಸಿದ ಜ್ಯೋತಿಷಿ!

ಹೀಗೆ ಕೊಲೆ ಮಾಡಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ರು.ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ದೂರು ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Follow Us:
Download App:
  • android
  • ios