ಫಸ್ಟ್ ನೈಟ್‌ಗೆ ಹೊರಟ ಜಿಮ್ ರವಿಗೆ ಬಾಗಿಲು ತೆರೆದಿದ್ದು ಪರಪ್ಪನ ಅಗ್ರಹಾರ!
* ಅಮಾಯಕ ಹೆಣ್ಣು ಮಗಳನ್ನು ನಂಬಿಸಿ ಮದುವೆಯಾಗಿದ್ದ ಕಿರಾತಕ
* ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಜಿಮ್ ರವಿ
* ಡಾಕ್ಟರ್ ಶರತ್ ಕೊಲೆ ಪ್ರಕರಣ
* ಮದುವೆಯಾಗಿ ಮರುದಿನವೇ ಜೈಲು ಸೇರಿದ ರೌಡಿ ಶೀಟರ್
ಬೆಂಗಳೂರು (ಮಾ. 18) ಅಮಾಯಕ ಹೆಣ್ಣು ಮಗಳ ನಂಬಿಸಿ ಮದುವೆಯಾದ (Marriage) ರೌಡಿಶೀಟರ್ -ಮದುವೆ ದಿನವೇ ಸಿಸಿಬಿಯಿಂದ (CCB) ಈತ ಅರೆಸ್ಟ್ ಆಗಿದ್ದಾನೆ. ಕೊಲೆ (Murder) ಪ್ರಕರಣದಲ್ಲಿ ಜೈಲು ಸೇರಿದ್ದ ಜಿಮ್ ರವಿ ಫೆರೋಲ್ ಮೇಲೆ ಹೊರಗಡೆ ಬಂದಿದ್ದ..ಈ ವೇಳೆ ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಅನ್ನೋ ಹಾಗೇ ಒಂದು ಸುಳ್ಳು ಹೇಳಿ ಅಮಾಯಕ ಯುವತಿಯನ್ನು ನಂಬಿಸಿ ಮದುವೆಯಾಗಿದ್ದಾನೆ..ದುರಂತ ಅಂದ್ರೆ ಮದುವೆ ದಿನವೇ ಫಸ್ಟ್ ನೈಟ್ ಕೂಡ ಏರ್ಪಾಡಾಗಿತ್ತು.ಆದರೆ ಈ ವೇಳೆಗೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ..
ಪ್ರಕರಣದ ಹಿನ್ನಲೆ. 2010 ರಲ್ಲಿ ಬೆಂಗಳೂರಿನ ಸಂಜಯ್ ನಗರದಲ್ಲಿ ಡಾಕ್ಟರ್ (Doctor) ಕೊಲೆಯಾಗಿತ್ತು. ಫೇಮಸ್ ಡಾಕ್ಟರ್ ಶರತ್ ಕಿಡ್ನಾಪ್ (Kidnap)ಮಾಡಿ ಕೊಲೆ ಮಾಡಿದ್ದ ಜೀಮ್ ರವಿ ಅಂಡ್ ಟೀಮ್ ಮನೆಯಿಂದ ಹಣ ಹಾಗೂ ಪಕ್ಕದ ಅಂಗಡಿಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಜ್ಯುವೆಲರಿ ತರಿಸಿಕೊಂಡಿದ್ದ .ಕಾರ್ ನಲ್ಲಿ ಸುತ್ತಾಡಿಸುವಾಗ ವೈದ್ಯ ಶರತ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಶುಗರ್ ಲೋ ಆಗಿ ಡಾಕ್ಟರ್ ಶರತ್ ಪ್ರಜ್ಞೆ ತಪ್ಪಿದ್ದರು.. ಆಗ ರೌಡಿ ಜೀಮ್ ರವಿ ಆತನ ಸಹಚರರು ವೈದ್ಯ ಶರತ್ ರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು.
ಬಳಿಕ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈದ್ಯ ಶರತ್ ಅಂದಿನ ದಿನಗಳಲ್ಲಿ ಮಂಡ್ಯದ 5 ಡಾಕ್ಟರ್ ಅಷ್ಟೇ ಫೇಮಸ್ ಆಗಿದ್ರು..ಹೀಗಾಗಿ ಅಂದು ಇಡೀ ಸಂಜಯ್ ನಗರ ನಿವಾಸಿಗಳು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ರು..ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ರು.ಅಂದಿನ ಗೃಹ ಸಚಿವ ಆರ್.ಅಶೋಕ್ ಕೂಡ ಆಶ್ವಾಸನೆ ನೀಡಿದ್ರು. ನಂತ್ರ ಬೆಂಗಳೂರು ಸಿಟಿ ಪೊಲೀಸರು ಆರೋಪಿ ಜೀಮ್ ರವಿ ಆತನ ಸಹಚರರನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. ಅಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಸಂಜಯ್ ನಗರ ಪೊಲೀಸರು ಆರೋಪಿಗಳ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ರು. ಬಳಿಕ ಸುಧೀರ್ಘ ವಿಚಾರಣೆ ನಡೆದು 2018 ರಲ್ಲಿ ಜೀಮ್ ರವಿ ಹಾಗೂ ಇತರರಿಗೆ ನ್ಯಾಯಾಲಯ ಜೀವಾವದಿ ಶಿಕ್ಷೆ ನೀಡಿತ್ತು. ಪರಪ್ಪನ ಅಗ್ರಹಾರ ಜೈಲು ಸೇರಿದನ್ನು ಮತ್ತೆ ಹೊರಗಡೆ ಬರೋದಕ್ಕೆ ಆಗಲಿಲ್ಲ. ಬೇಲ್ ಸಿಗದೇ ಹಲವು ವರ್ಷ ಜೈಲಿನಲ್ಲೇ ಶಿಕ್ಷೆ ಕಳೆದಿದ್ದ. ಈ ವೇಳೆ ಜೈಲಿನಲ್ಲಿ ನಟೋರಿಯಸ್ ರೌಡಿಶೀಟರ್ ಪರಿಚಯವಾಗಿತ್ತು. ಜೈಲಿನಲ್ಲೇ ಕುಳಿತು ಕೋಟ್ಯಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ. ಸಹಚರರ ಮೂಲಕ ಹೊರಗಡೆ ಹಫ್ತಾ ವಸೂಲಿ ಮಾಡಿಸುತ್ತಿದ್ದ.
ಫೆರೋಲ್ ಗಾಗಿ ಹೈ ಕೋರ್ಟ್ ಮೊರೆ..: ಕಳೆದ 2021 ರ ನವೆಂಬರ್ ನಲ್ಲಿ ಹೈ ಕೋರ್ಟ್ ಗೆ ಮದುವೆಯಾಗುತ್ತಿರುವುದಾಗಿ ತಿಳಿಸಿ ಫೆರೋಲ್ ಕೊಡುವಂತೆ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ್ದ ಹೈ ಕೋರ್ಟ್ ರೌಡಿ ಜೀಮ್ ರವಿಗೆ ಫೆರೋಲ್ ನೀಡಿತ್ತು. ಫೆರೋಲ್ 2 ತಿಂಗಳಿಗೆ ಮಾತ್ರ ನೀಡಲಾಗಿತ್ತು. ಫೆರೋಲ್ ಪಡೆದು ಹೊರ ಹೋದವನ್ನು ಮತ್ತೆ ಜೈಲಿಗೆ ಹೋಗಿರಲಿಲ್ಲ.
ಕೋರ್ಟ್ ಗೆ ಜನವರಿಯಲ್ಲಿ ಶರಣಾಗತಿಯಾಗದೇ ತಲೆ ಮರೆಸಿಕೊಂಡು ಓಡಾಡುತ್ತಿದ್ದ.
ಕೋರ್ಟ್ ಆರೋಪಿ ರೌಡಿಶೀಟರ್ ಜೀಮ್ ರವಿಗೆ ಬಂಧನದ ವಾರೆಂಟ್ ಜಾರಿ ಮಾಡಿ ಸಿಸಿಬಿ ಪೊಲೀಸರಿಗೆ ಬಂಧಿಸಿ ಕರೆತರುವಂತೆ ಸೂಚಿಸಿತ್ತು.. ಚಿಕ್ಕಮಗಳೂರಿನಲ್ಲಿ ವಿವಾಹ ವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೂಡಲೇ ಚಿಕ್ಕಮಗಳೂರಿನಲ್ಲಿ ಜೀಮ್ ರವಿ ಬಂಧಿಸಿದ್ದರು. ವಿಶೇಷ ಅಂದ್ರೆ ಜೀಮ್ ರವಿ ಮದುವೆ ದಿನವೇ ಮತ್ತೆ ಅರೆಸ್ಟ್ ಆಗಿದ್ದ.
ಸಂಜೆ ರಿಸೆಪಕ್ಷನ್ ,ಫಸ್ಟ್ ನೈಟ್ ಕೂಡ ಏರ್ಪಾಡಾಗಿತ್ತು. ಆದರೆ ಸಿಸಿಬಿ ಪೊಲೀಸರು ಎತ್ತಿಕೊಂಡು ಬಂದಿದ್ದರು.
ಅಮಾಯಕ ಹುಡುಗಿಗೆ ಜೀವಾವದಿ ಶಿಕ್ಷೆಯಾಗಿರೋಂದ್ರ ಬಗ್ಗೆ ಸುಳ್ಖು ಹೇಳಿ ವಂಚಿಸಿ ಆರೋಪಿ ರವಿ ವಿವಾಹವಾಗಿದ್ದ..ಯಾವುದೇ ವಿವಾಹವಾಗುವ ಮುನ್ನ ಪೂರ್ವಾಪರ ವಿಚಾರಿಸಿ ಮದುವೆ ಮಾಡಬೇಕು.ಆದರೆ ಆ ಯುವತಿ ಮನೆಯವರು ನಿರ್ಧಾರ ಇಂದು ಹಸಮಣೆ ಏರಿದ ಯುವತಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ..ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಕಂಬಿ ಎಣಿಸುತ್ತಿದ್ದಾನೆ.