ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬಸ್ಥರು ನಟ ಸುಶಾಂತ್‌ಗೆ ಓವರ್‌ಡೋಸ್ ಔಷಧ ಕೊಟ್ಟಿದ್ದರು ಎಂದು ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ದಿನಕಳೆದಂತೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸಂಬಂಧ ಮಹತ್ವದ ವಿಚಾರ ಬಯಲಿಗೆ ಬಂದಿದೆ.

ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬಸ್ಥರು ನಟ ಸುಶಾಂತ್‌ಗೆ ಓವರ್‌ಡೋಸ್ ಔಷಧ ಕೊಟ್ಟಿದ್ದರು ಎಂದು ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

ಸುಶಾಂತ್ ತಂದೆ ಕೆಕೆ ಸಿಂಗ್ ಪಟ್ನಾ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿಗೆ ಸಂಬಂಧಿಸಿ ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ಗ ಅರ್ಜಿ ಸಲ್ಲಿಸಿ ಈ ವಿಚಾರವನ್ನು ಹೇಳಿದ್ದಾರೆ.

ಸುಶಾಂತ್ ಆಸ್ತಿ ಕಬಳಿಸುವುದಕ್ಕಾಗಿ ರಿಯಾ ಹಾಗೂ ಆಕೆಯ ಕುಟುಂಬಸ್ಥರು ಓವರ್‌ಡೋಸ್ ಔಷಧಿ ಕೊಟ್ಟಿದ್ದರು ಎಂದು ಸುಶಾಂತ್ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಯನ್ನು ವಾಪಸ್ ಕಳಿಸಿದ ಬಿಎಂಸಿ

ಈ ಸಂಬಂಧ ಅರ್ಜಿ ಸಲ್ಲಿಸಿದ ಬಿಹಾರ ಪೊಲೀಸ್ ಅಧಿಕಾರಿ, ರಿಯಾ ಸುಶಾಂತ್ ಆಸ್ತಿ ಕಬಳಿಸುವುಕ್ಕಾಗಿಯೇ ಸಂಬಂಧ ಬೆಳೆಸಿ ನಂತರ ಸನಾರೋಗ್ಯ ಇತ್ತು ಎಂದು ಬಿಂಬಿಸಿದ್ದಾರೆ ಎಂದಿದ್ದಾರೆ. ರಿಯಾ ವಿರುದ್ಧ ಹಣ ವಂಚನೆ ಸಂಬಂಧ ಪ್ರಕರಣ ದಾಖಲಾಗಿದ್ದು. ಜಾರಿ ನಿರ್ದೇಶನಾಲಯ ಶುಕ್ರವಾರ ನಟಿಯ ವಿಚಾರಣೆ ನಡೆಸಿದೆ.