ಮುಂಬೈ(ಆ.  09) ಮುಂಬೈ ಲೋಕಲ್ ಟ್ರೇನ್ ನಲ್ಲಿ 14  ವರ್ಷದ ಹಿಂದೆ ಕಳೆದುಕೊಂಡಿದ್ದ ಪರ್ಸ್ ಪತ್ತೆಯಾಗಿದೆ.  2006  ರಲ್ಲಿ 900  ರೂ. ಇದ್ದ ಪರ್ಸ್ ಕಳ್ಳತನವಾಗಿತ್ತು.

ಹೇಮಂತ್ ಪಡಲ್ಕರ್ ಎಂಬುವರು ಪರ್ಸ್ ಕಳೆದುಕೊಂಡು ವರ್ಷಗಳೆ ಉರುಳಿ ಹೋಗಿದ್ದವು.  ಹದಿನಾಲ್ಕು ವರ್ಷದ ನಂತರ ಪೊಲೀಸರು ಕರೆ ಮಾಡಿ ನಿಮ್ಮ ಪರ್ಸ್ ಸಿಕ್ಕಿದೆ ಎಂದಿದ್ದಾರೆ.

ಶಿವಾಜಿ ಟರ್ಮಿನಲ್ ನಿಂದ  ಪನೆವಲ್ ಲೋಕಲ್ ಟ್ರೇನ್ ನಲ್ಲಿ ಹೇಮಂತ್ ಪ್ರಯಾಣ ಮಾಡುತ್ತಿದ್ದರು.  ಪರ್ಸ್ ಕಳೆದುಕೊಂಡ ಮೇಲೆ ಹೇಮಂತ್ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ಬ್ಯಾನ್ ಆಗುತ್ತಾ ಎರಡು ಸಾವಿರದ ನೋಟು? ಏನಿದು ಅಂತೆ-ಕಂತೆ

ಈ ವರ್ಷದ ಏಪ್ರಿಲ್ ನಲ್ಲಿ ಹೇಮಂತ್ ಗೆ ಪೊಲೀಸರಿಂದ ಕರೆ ಬಂದಿದ್ದು ನಿಮ್ಮ ಪರ್ಸ್ ಸಿಕ್ಕಿದೆ ಎಂದಿದ್ದಾರೆ. ಕೊರೋನಾ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಪರ್ಸ್ ಕಲೆಕ್ಟ್ ಮಾಡಿಕೊಳ್ಳಲು ಹೇಮಂತ್ ಗೆ ಸಾಧ್ಯವಾಗಿರಲಿಲ್ಲ.

ನನಗೆ ಹಣ ಹಿಂದುರಿಗಿ ಸಿಕ್ಕಿದ್ದು  ತುಂಬಾ ಸಂತಸ ತಂದಿದೆ ಎಂದಿದ್ದಾರೆ.  ಆರೋಪಿಯೊಬ್ಬನಿಂದ ಈ ಪರ್ಸ್ ವಶಕ್ಕೆ ಪಡೆಯಲಾಗಿದ್ದು 500 ರೂಪಾಯಿ ನೋಟು ರದ್ದಾಗಿದೆ. ಇದೆ ವಿಷಯಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.