* ಮೂಢನಂಬಿಕೆಯಿಂದ ಗುಂಡುಗಳ ಬಿಸಾಡಿದಾಕೆಗೆ ಸಂಕಷ್ಟ* ಮಗನ ಸಂಕಷ್ಟ ನಿವಾರಣೆಯಾಗಲೆಂದು ನಿವೃತ್ತ ವಾಯು ಸೇನಾಧಿಕಾರಿ ಪತ್ನಿಯಿಂದ ಮೌಢ್ಯಾಚರಣೆ* ಹೋಟೆಲ್‌ನಲ್ಲಿ ಜೀವಂತ ಗುಂಡುಗಳ ಬಿಸಾಡಿದ್ದ ಮಹಿಳೆ
ಬೆಂಗಳೂರು(ಡಿ.23): ಮನೆಯಲ್ಲಿದ್ದ ಹಳೆ ವಸ್ತುಗಳನ್ನು ಬಿಸಾಡಿದರೆ ಮಗನ ಕೌಟುಂಬಿಕ ಬದುಕಿನ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಮೂಢನಂಬಿಕೆಯಿಂದ(Superstition) ನಿವೃತ್ತ ವಾಯುಸೇನಾಧಿಕಾರಿಯೊಬ್ಬರ ಪತ್ನಿ, ತಮ್ಮ ಹಳೆ ರೈಫಲ್‌ನ(Rifle) ಎರಡು ಜೀವಂತ ಗುಂಡುಗಳನ್ನು ತಂದು ಹೋಟೆಲ್‌ನ ವಾಹನ ನಿಲುಗಡೆ ಪ್ರದೇಶದಲ್ಲಿ ಬಿಸಾಡಿ ಆತಂಕ ಸೃಷ್ಟಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಹಕಾರ ನಗರದಲ್ಲಿ ನೆಲೆಸಿರುವ 65 ವರ್ಷದ ಮಹಿಳೆ ಈ ಕೃತ್ಯ ಎಸಗಿದ್ದು, ಇತ್ತೀಚಿಗೆ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ ಹತ್ತಿರದ ಹೋಟೆಲ್‌ಗೆ ಕುಟುಂಬದ ಜತೆ ಊಟಕ್ಕೆ ತೆರಳಿದ್ದಾಗ ವಾಹನ ನಿಲುಗಡೆ ಪ್ರದೇಶದಲ್ಲಿ ಗುಂಡುಗಳನ್ನು(Bullet) ಬಿಸಾಡಿ ತೆರಳಿದ್ದರು. ಮರುದಿನ ವಾಹನ ನಿಲುಗಡೆ ಪ್ರದೇಶವನ್ನು ಸ್ವಚ್ಛಗೊಳಿಸುವಾಗ ಗುಂಡನ್ನು ಕಂಡು ಹೋಟೆಲ್ ಸಿಬ್ಬಂದಿ ಭಯಗೊಂಡಿದ್ದಾರೆ. ಮಾಹಿತಿ ಪಡೆದು ಬಾಂಬ್ ನಿಷ್ಕ್ರೀಯ ದಳ ಹಾಗೂ ಪೊಲೀಸರು(Police), ಹೋಟೆಲ್‌ಗೆ ತೆರಳಿ ಪರಿಶೀಲಿಸಿದಾಗ ಆತಂಕ ನಿವಾರಣೆಯಾಗಿದೆ.
ಕೊರೊನಾ ಹೋಗಲಾಡಿಸಲು ಹೋಮ-ಹವನ: ಇವೆಲ್ಲಾ ಮೂಢನಂಬಿಕೆ ಅಂತಾರೆ ವಿಜ್ಞಾನ ಲೇಖಕ ನಾಗೇಶ್ ಹೆಗಡೆ
ಹಳೇ ವಸ್ತುಗಳ ಬಿಸಾಡುವ ಚಾಳಿ
ವಾಯುಸೇನೆಯಲ್ಲಿ(Air Force) ಗ್ರೂಪ್ ಕ್ಯಾಪ್ಟನ್ ಆಗಿ ಮಹಿಳೆಯ ಪತಿ ನಿವೃತ್ತರಾಗಿದ್ದು, ನಿವೃತ್ತಿ ಬಳಿಕ ತಮ್ಮ ಕುಟುಂಬದ ಜತೆ ಸಹಕಾರ ನಗರದಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಅವರ ಪುತ್ರನ ಕೌಟುಂಬಿಕ ಜೀವನ ಸಮಸ್ಯೆಗೆ ತುತ್ತಾಗಿತ್ತು. ಆಗ ಮನೆಯಲ್ಲಿರುವ ಹಳೇ ವಸ್ತುಗಳನ್ನು ಹೊರಗೆ ಬಿಸಾಡಿದರೆ ಒಳಿತಾಗುವುದು ಎಂಬ ನಂಬಿಕೆಯಿಂದ, ಇತ್ತೀಚಿಗೆ ಮನೆಯಲ್ಲಿರುವ ಹಳೇ ವಸ್ತುಗಳನ್ನು ಹೊರಗೆ ಬಿಸಾಡುವ ಚಾಳಿ ಮಹಿಳೆಗೆ ಶುರುವಾಗಿತ್ತು.
ಹಲವು ವರ್ಷಗಳ ಹಿಂದೆಯೇ ಪತಿ ಮಾರಾಟ ಮಾಡಿದ್ದ ರೈಫಲ್‌ನ ಎರಡು ಗುಂಡುಗಳು ಮನೆಯಲ್ಲಿದ್ದನ್ನು ಕಂಡ ಆಕೆ ಅವುಗಳನ್ನು ಬಿಸಾಡಲು ನಿರ್ಧರಿಸಿದ್ದರು. ಡಿ.17ರಂದು ಜಿಕೆವಿಕೆ ಸಮೀಪದ ಹೋಟೆಲ್‌ಗೆ ಅವರ ಕುಟುಂಬ ಊಟಕ್ಕೆ ಬಂದಿತ್ತು. ಆಗ ಎರಡು ಗುಂಡುಗಳ ಪೈಕಿ ಒಂದನ್ನು ವಾಹನ ನಿಲುಗಡೆ ಪ್ರದೇಶದಲ್ಲಿ, ಮತ್ತೊಂದನ್ನು ಹೂ ಕುಂಡದಲ್ಲಿ ಬಿಸಾಡಿ ಆಕೆ ಹೋಗಿದ್ದರು. ವಾಹನ ನಿಲುಗಡೆ ಪ್ರದೇಶವನ್ನು ಸ್ವಚ್ಛಗೊಳಿಸುವಾಗ ಹೋಟೆಲ್ ಸಿಬ್ಬಂದಿಗೆ ಒಂದು ಗುಂಡು ಪತ್ತೆಯಾಗಿದೆ. ಇದರಿಂದ ಕೆಲ ಕಾಲ ಹೋಟೆಲ್‌ನಲ್ಲಿ(Hotel) ಆತಂಕದ ವಾತಾವರಣ ನೆಲೆಸಿತ್ತು.
ಈ ಬಗ್ಗೆ ಮಾಹಿತಿ ಪಡೆದ ಯಲಹಂಕ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ(Bomb Disposal Squad) ಕರೆಸಿ ಆ ಹೋಟೆಲ್‌ನಲ್ಲಿ ತಪಾಸಣೆ ನಡೆಸಿದಾಗ ಹೂ ಕುಂಡದಲ್ಲಿ ಮತ್ತೊಂದು ಗುಂಡು ಸಿಕ್ಕಿದೆ. ಕೊನೆಗೆ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮಹಿಳೆಯೊಬ್ಬರ ಅನುಮಾನಾಸ್ಪದ ನಡವಳಿಕೆ ದೃಶ್ಯ ಸಿಕ್ಕಿದೆ. ಈ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಮಹಿಳೆಯ ಗುರುತು ಪತ್ತೆಯಾಗಿದೆ. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಗುಂಡಿನ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಡ್ಲಿಗಿ: ಕೊರೋನಾಗೆ ಬೈಯ್ಯುವ ಮೌಢ್ಯಾಚರಣೆ
ಚಿತ್ರದುರ್ಗ: ಕೊರೋನಾಗೆ ಅಂಜಿ ಗ್ರಾಮದಲ್ಲಿ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಸ್ಥಳೀಯರು..!
ಕೊರೋನಾಗೆ ಹೆದರಿ ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿಯನ್ನ ಗ್ರಾಮಸ್ಥರು ಕಟ್ಟಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಮೇ.31ರಂದು ನಡೆದಿತ್ತು. ನಾವು ಇಂದಿಗೂ ಮೂಢನಂಬಿಕೆ ಆಚರಣೆಯನ್ನ ಕೈಬಿಟ್ಟಿಲ್ಲ ಎಂದು ಗ್ರಾಮಸ್ಥರು ಸಾಭೀತುಪಡಿಸಿದ್ದಾರೆ. ಈ ಮೂಲಕ ಸಚಿವ ಬಿ. ಶ್ರೀರಾಮುಲು ಕ್ಷೇತ್ರದ ಗ್ರಾಮದಲ್ಲೇ ಮೂಢನಂಬಿಕೆ ತಾಂಡವವಾಡುತ್ತಿದೆ.
ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮ ಮನ್ನೆಕೋಟೆಯಲ್ಲಿ ಕೇವಲ ಒಂದು ತಿಂಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. 450ಕ್ಕೂ ಹೆಚ್ಚು ಗ್ರಾಮದ ಜನರಿಗೆ ಶೀತ, ಕೆಮ್ಮು, ನಗಡಿ, ಜ್ವರ ಕಾಣಿಸಿಕೊಂಡಿದೆ. 5 ಮಂದಿ ಕೋವಿಡ್‌ಗೆ ಬಲಿಯಾದರೆ ಉಳಿದ 10 ಮಂದಿ ಇನ್ನಿತರ ರೋಗಗಳಿಗೆ ಮೃತಪಟ್ಟಿದ್ದರು.
