ಬೆಳಗಾವಿ(ಸೆ.17): ತಾಯಿ, ಮಗ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ.

ತಾಯಿ ಭಾರತಿ ಗರಾಣಿ(36), ಮಗ ಪ್ರಜ್ವಲ್(15) ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಭಾರತಿ ಗರಾಣಿ ಅವರು ಹಲಗಾ ಗ್ರಾಮದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. 

ಬಿಬಿಎಂಪಿ ಕ್ಯಾಂಟೀನ್‌ನಲ್ಲಿ ತೀವ್ರ ನಷ್ಟ: ಮಾಲೀಕ ಆತ್ಮಹತ್ಯೆ

ತಾಯಿ, ಮಗನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತನಿಖೆಯಿಂದಷ್ಟೇ ಇವರ ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.