Asianet Suvarna News Asianet Suvarna News

ಚಿತ್ರದುರ್ಗ: ಇಬ್ಬರು ಮಕ್ಕಳನ್ನು ತೊಟ್ಟಿಯಲ್ಲಿ ಮುಳುಗಿಸಿ ಕೊಂದು ತಾಯಿಯೂ ಆತ್ಮಹತ್ಯೆ

ತಿಪ್ಪೇಸ್ವಾಮಿ ಎಂಬುವವರ ಪತ್ನಿ ಲತಾ, ತನ್ನ ಮಕ್ಕಳಾದ ಪ್ರಣೀತಾ, ಒಂದೂವರೆ ವರ್ಷ ಹಸುಗೂಸು ಜ್ಞಾನೇಶ್ವರನನ್ನು ಮನೆಯ ಬಚ್ಚಲಿನಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದು, ನಂತರ ತಾನು ನೇಣುಹಾಕಿಕೊಂಡು ಮೃತಪಟ್ಟಿದ್ದಾಳೆ. 

Mother Committed Suicide After Killed Two Children at Challakere in Chitradurga grg
Author
First Published Dec 9, 2023, 3:54 PM IST

ಚಳ್ಳಕೆರೆ(ಡಿ.09):  ಗೃಹಿಣಿಯೋರ್ವಳು ತನ್ನ ಎರಡು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ, ನಂತರ ತಾನೂ ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟೆಯಲ್ಲಿ ನಡೆದಿದೆ.

ತಿಪ್ಪೇಸ್ವಾಮಿ ಎಂಬುವವರ ಪತ್ನಿ ಲತಾ (೨೫), ತನ್ನ ಮಕ್ಕಳಾದ ಪ್ರಣೀತಾ (೫), ಒಂದೂವರೆ ವರ್ಷ ಹಸುಗೂಸು ಜ್ಞಾನೇಶ್ವರನನ್ನು ಮನೆಯ ಬಚ್ಚಲಿನಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದು, ನಂತರ ತಾನು ನೇಣುಹಾಕಿಕೊಂಡು ಮೃತಪಟ್ಟಿದ್ದಾಳೆ. 

ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಈ ಸಂದರ್ಭದಲ್ಲಿ ಗಂಡ ತಿಪ್ಪೇಸ್ವಾಮಿ ತೋಟಕ್ಕೆ ಹೋಗಿದ್ದರು. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಲತಾ ಹಾಗೂ ಮಕ್ಕಳ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Follow Us:
Download App:
  • android
  • ios