Asianet Suvarna News Asianet Suvarna News

ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಂಗಳೂರಿನ ಕೆಂಗೇರಿ ಕೊಡಿಗೆಪಾಳ್ಯದಲ್ಲಿ ನಡೆದಿದೆ. ರಾಕೇಶ್ ಆತ್ಮಹತ್ಯೆಗೆ ಮಾಡಿಕೊಂಡ ದುರ್ದೈವಿ

A young man commits suicide due to rejection of love in kengeri at benglauru rav
Author
First Published Dec 7, 2023, 12:13 PM IST

ಬೆಂಗಳೂರು (ಡಿ.7): ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಂಗಳೂರಿನ ಕೆಂಗೇರಿ ಕೊಡಿಗೆಪಾಳ್ಯದಲ್ಲಿ ನಡೆದಿದೆ.

ರಾಕೇಶ್ ಆತ್ಮಹತ್ಯೆಗೆ ಮಾಡಿಕೊಂಡ ದುರ್ದೈವಿ. ನಿನ್ನೆ ಮಧ್ಯಾಹ್ನದ ಸುಮಾರಿಗೆ ನಡೆದಿರುವ ಘಟನೆ. ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ಯುವಕ ರಾಕೇಶ್ ಐದಾರು ವರ್ಷದಿಂದ‌ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆ ಆಗುವ ಇಚ್ಛೆ ಹೊಂದಿದ್ದ ಯುವಕ ಆದರೆ ಯುವತಿ ಬೇರೆ ಯುವಕನೊಂದಿಗೆ ಮದುವೆ ಸಿದ್ಧವಾಗಿದ್ದಳು. ಹೀಗಾಗಿ ರಾಕೇಶನನ್ನು ಅವಾಯ್ಡ್ ಮಾಡಿದ್ದ ಯುವತಿ. ಆದರೆ ಐದು ವರ್ಷದಿಂದ ಪರಸ್ಪರ ಪ್ರೀತಿಯಲ್ಲಿದ್ದೂ ಈಗ ಬೇರೆ ಯುವಕನೊಂದಿಗೆ ಮದುವೆ ಸಿದ್ದವಾಗಿದ್ದಕ್ಕೆ ಯುವತಿಯನ್ನು ಪ್ರಶ್ನಿಸಿದ್ದ ರಾಕೇಶ್.  ಈ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ಜೊತೆ ಗಲಾಟೆ ಆಗಿತ್ತು. ಇದರಿಂದ ಮನನೊಂದಿದ್ದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಂಗಳೂರು: ಮನೆ ಬಿಟ್ಟು ಓಡಿ ಬಂದು ಮದುವೆಯಾಗಿದ್ದ ಯುವತಿ ಆತ್ಮಹತ್ಯೆ, ಕಾರಣ ನಿಗೂಢ?

ಬೆಂಕಿ ಹಚ್ಚಿಕೊಂಡು ದೇಹದ ಭಾಗವೆಲ್ಲ ಸುಟ್ಟುಹೋಗಿದ್ದ ಯುವಕ ರಾಕೇಶನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು. ಆದರೆ ಬಹುತೇಕ ಭಾಗ ಸುಟ್ಟುಹೋಗಿದ್ರಿಂದ ಚಿಕಿತ್ಸೆ ಫಲಕಾರಿಯಾಗದೆ ತೀವ್ರ ನೋವಿನಿಂದ ಬಳಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಇದು ಆತ್ಮಹತ್ಯೆ ಅಲ್ಲ, ಕೊಲೆ: ರಾಕೇಶ್ ಕುಟುಂಬಸ್ಥರ ಆರೋಪ

ರಾಕೇಶ್‌ನದು ಆತ್ಮಹತ್ಯೆಯಲ್ಲ, ಕೊಲೆ ಎಂದು ರಾಕೇಶ್ ಕುಟುಂಬಸ್ಥರು ಯುವತಿ ವಿರುದ್ಧ ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. ಅವರಿಬ್ಬರು ಐದು ವರ್ಷದಿಂದ ಪ್ರೀತಿಸಿದ್ದಾರೆ ಮದುವೆಗೆ ಯುವತಿ ಕುಟುಂಬದವರು ವಿರೋಧಿಸಿದ್ದಾರೆ.

 

'ನಿನ್ನ ಅಮೂಲ್ಯ ವಸ್ತು ಕಿತ್ಕೊಂಡಿದ್ದೇನೆ..' ಬಾಯ್‌ಫ್ರೆಂಡ್‌ನ ಮಗನನ್ನು ಕೊಂದ ಬಳಿಕ ಈ ಮಾತು ಹೇಳಿದ್ದ ಪ್ರೇಯಸಿ

ನಿನ್ನೆ ಯುವಕ ರಾಕೇಶನನ್ನ ಆಕೆಯ ಕುಟುಂಬಸ್ಥರು ಕರೆಸಿಕೊಂಡಿದ್ದಾರೆ. ಈ ವೇಳೆ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು. ಇದಕ್ಕೂ ಮುನ್ನ 15 ದಿನಗಳ ಹಿಂದೆ ರಾಕೇಶ್ ಪೊಷಕರಿಂದ ಮದುವೆ ಬಗ್ಗೆ ಯುವತಿ ಕುಟುಂಬಸ್ಥರೊಂದಿಗೆ ಪ್ರಸ್ತಾಪಿಸಿದ್ದರು. ಆದರೆ ಯುವತಿಯ ಮನೆಯವರು ತಿರಸ್ಕರಿಸಿದ್ದರು. ಇದಾದ ಬಳಿಕ ನಿನ್ನೆ ಈ ಘಟನೆ ನಡೆದಿದೆ. ಇದು ಸಾವಲ್ಲ, ಕೊಲೆ ಅಂತಿರೋ ಯುವಕನ ಕುಟುಂಬಸ್ಥರು. 

Follow Us:
Download App:
  • android
  • ios