Belagavi: ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ನಾಪತ್ತೆಯಾಗಿದ್ದ 7 ವರ್ಷ ಬಾಲಕನ ಮೃತದೇಹ ಪತ್ತೆ!‌

*ಹಿಂಡಲಗಾ ಗಣಪತಿ ದೇಗುಲ ಬಳಿ ಕೆರೆಯಲ್ಲಿ ತಾಯಿ, ಮಗು ಶವಪತ್ತೆ ಪ್ರಕರಣ
*ನಾಪತ್ತೆಯಾಗಿದ್ದ ಮತ್ತೋರ್ವ ಮಗು ವೀರೇನ್(7) ಮೃತದೇಹ ಪತ್ತೆ
*ಶಾಲಾ ಸಮವಸ್ತ್ರದಲ್ಲೇ ಕೆರೆಯಲ್ಲಿ ಮಗುವಿನ ಮೃತದೇಹ ಪತ್ತೆ
*7 ವರ್ಷದ ವೀರೇನ್ ಮೃತದೇಹ ಹೊರತಗೆದ ಎಸ್‌ಡಿಆರ್‌ಎಫ್ ಸಿಬ್ಬಂದಿ

mother Commits Suicide with two children in Belagavi Hindalga Missing 7 year old child dead body found  mnj

ಬೆಳಗಾವಿ (ಫೆ. 12):  ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಾಯೊಯೋರ್ವಳು(Mother) ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹಿಂಡಲಗಾ ರಸ್ತೆಯಲ್ಲಿ ಶುಕ್ರವಾರ  ನಡೆದಿತ್ತು. ನಗರದ ಹಿಂಡಲಗಾ ರಸ್ತೆಯಲ್ಲಿರುವ ಕೆರೆಯಲ್ಲಿ ಶುಕ್ರವಾರ ಶವಗಳು ಕಂಡು ಬಂದಿದ್ದವು.  ಈ ವೇಳೆ ಕೃಷಾ ಹಾಗೂ ಭಾವೀರ ಎಂಬುವರ ಮೃತದೇಹವನ್ನ ಹೊರತೆಗೆಯಲಾಗಿತ್ತು.ಈಗ ನಾಪತ್ತೆಯಾಗಿದ್ದ ಮತ್ತೋರ್ವ ಬಾಲಕ ವೀರೇನ್(7) ಮೃತದೇಹ ಕೂಡ ಪತ್ತೆಯಾಗಿದೆ.  ಎಸ್‌ಡಿಆರ್‌ಎಫ್  ಸಿಬ್ಬಂದಿ 7 ವರ್ಷದ ವೀರೇನ್ ಮೃತದೇಹ ಹೊರತಗೆದಿದ್ದಾರೆ.   

ಮೃತದೇಹ  ಕುರಿತು ಮಾಹಿತಿ ಪಡೆದ ಕ್ಯಾಂಪ್‌ ಠಾಣೆಯ ಪೊಲೀಸ್‌(Police) ಇನ್ಸ್‌ಪೆಕ್ಟರ್‌ ಪ್ರಭಾಕರ ಧರ್ಮಟಿ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ  ಶುಕ್ರವಾರ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಆದರೆ  ಕೃಷಾ ಹಾಗೂ ಭಾವೀರ ಎಂಬುವರ ಮೃತ ದೇಹ ಮಾತ್ರ ಪತ್ತೆಯಾಗಿತ್ತು. ಈಗ ಶಾಲಾ ಸಮವಸ್ತ್ರದಲ್ಲೇ ಕೆರೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ಮೃತದೇಹ ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶವಾಗಾರ ಬಳಿ ಕುಟುಂಬಸ್ಥರ ಆಕ್ರಂದನ  ಮುಗಿಲು ಮುಟ್ಟಿದೆ. 

mother Commits Suicide with two children in Belagavi Hindalga Missing 7 year old child dead body found  mnj

ಇದನ್ನೂ ಓದಿ: Suvarna FIR : ಬೆಳಗಾವಿ ಗಂಡನ ಕತೆ ಮುಗಿಸಲು ಪತ್ನಿಯೇ ಪ್ರಿಯಕರನಿಗೆ ಕರೆ ಮಾಡಿ  ಹೇಳಿದ್ದಳು!

ನಗರದ ಸಹ್ಯಾದ್ರಿ ನಗರದ ಕೃಷಾ ಮನಿಷ್‌ ಕೇಶ್ವಾನಿ(36), ಪುತ್ರರಾದ ಭಾವೀರ(4), ವೀರೇನ್‌(17) ಆತ್ಮಹತ್ಯೆ ಮಾಡಿಕೊಂಡವರು. ನಗರದ ಹಿಂಡಲಗಾ ಗಣಪತಿ ದೇಗುಲ ಬಳಿಯ ಕೆರೆಯಲ್ಲಿ ತಾಯಿ, ಮಕ್ಕಳ ಶವ(Deadbody) ಪತ್ತೆಯಾಗಿದೆ. ಈ ಕುರಿತು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಮಿರಜ್‌ ಮೂಲದ ಕೃಷಾ ಅವರನ್ನು ಬೆಳಗಾವಿ(Belagavi) ಸಹ್ಯಾದ್ರಿ ನಗರದಲ್ಲಿರುವ ಮನಿಷ್‌ ಎಂಬುವರೊಂದಿಗೆ 8 ವರ್ಷಗಳ ಹಿಂದೆ ಮದುವೆ(Marriage) ಮಾಡಿಕೊಡಲಾಗಿತ್ತು. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮನಿಷ್‌ ಕೇಶ್ವಾನಿ ಅತ್ಯಂತ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ನಂತರದ ದಿನಗಳಲ್ಲಿ ದಂಪತಿ ಮಧ್ಯೆ ಮೇಲಿಂದ ಮೇಲೆ ಮನಸ್ತಾಪ ಹಾಗೂ ಜಗಳ ನಡೆಯುತ್ತಿರುವುದರಿಂದ ಎರಡೂ ಕುಟುಂಬದ ಹಿರಿಯರು ತಿಳಿ ಹೇಳಿ ಎಂದಿನಂತೆ ಜೀವನ ಸಾಗಿಸುವಂತೆ ಮಾಡಿದ್ದರು.  

ಕಳ್ಳತನ ಆರೋಪ: ಮನನೊಂದು ಮನೆ ಕೆಲಸದಾಕೆ ಆತ್ಮಹತ್ಯೆ:: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನದ(Theft) ಸುಳ್ಳು ಆರೋಪ ಮಾಡಿದರು ಎಂದು ಆರೋಪಿಸಿ ಮಹಿಳೆಯೊಬ್ಬರು(Woman) ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಂಗಳೂರಿನ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರ ನಿವಾಸಿ ಉಮಾ(40) ಮೃತ ಮಹಿಳೆ. ಇವರು ಕಳೆದ ಮೂರು ತಿಂಗಳಿಂದ ಭಟ್ಟರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್‌ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ರೋಹಿತ್‌ ಮನೆಯಲ್ಲಿ 12 ಲಕ್ಷ ರು. ಮೌಲ್ಯದ ಒಡವೆ ಕಳವಾಗಿದ್ದರಿಂದ ರೋಹಿತ್‌, ಮನೆ ಕೆಲಸದಾಕೆ ಉಮಾ ಮತ್ತು ಅಂಜಿನಮ್ಮ ಎಂಬುವರ ಮೇಲೆ ಅನುಮಾನಗೊಂಡು ದೂರು(Complaint) ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು(Police) ಫೆ.10ರಂದು ಎಫ್‌ಐಆರ್‌(FIR) ದಾಖಲಿಸಿ ಮನೆಗೆಲಸ ಮಾಡುವವರನ್ನು ಕರೆದು ವಿಚಾರಣೆ ಮಾಡಿದ್ದರು.

Suicide Cases: ತೊಕ್ಕೊಟ್ಟಿನ ಪ್ರಸಿದ್ಧ ಆರ್ಕಿಟೆಕ್ಟ್ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಈ ಮೊದಲು ಆತ್ಮಹತ್ಯೆಗೆ ಯತ್ನ:ಇದರಿಂದ ಮಾನಸಿಕವಾಗಿ ನೊಂದಿದ್ದ ಉಮಾ ವಿಷ(Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ಬಳಿಕವೂ ಪೊಲೀಸರು ಗುರುವಾರ ಮತ್ತೊಮ್ಮೆ ಠಾಣೆಗೆ ಕರೆಸಿ ಉಮಾ ಅವರನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದರು. ಇದರಿಂದ ಉಮಾ ಮತ್ತಷ್ಟು ಬೇಸರಗೊಂಡಿದ್ದರು. ಮನೆ ಮಾಲೀಕ ರೋಹಿತ್‌ ಮತ್ತು ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ(Allegation) ಮಾಡಿದರೂ ಎಂದು ಶುಕ್ರವಾರ ವಿಡಿಯೋ ಮಾಡಿ ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios