*  ಜಯಂತಿ ಹಾಗೂ ಆಕೆಯ ಪುತ್ರಿ ಸೋನಿಯಾ ಬಂಧಿತ ಆರೋಪಿಗಳು*  16 ಲಕ್ಷ ಬೆಲೆ ಬಾಳುವ 272 ಗ್ರಾಂ ಚಿನ್ನಾಭರಣ, 997 ಗ್ರಾಂ ಬೆಳ್ಳಿ ಹಾಗೂ 1.72 ಲಕ್ಷ ನಗದು ಕಳ್ಳತನ*  ಗುಜರಾತ್‌ ಮೂಲದ ಕಲ್ಲಿದ್ದಲು ಉದ್ಯಮಿ ವಿಶಾಲ್‌ ಮನೆಯಲ್ಲಿ ಕಳವು ಮಾಡಿದ್ದ ಆರೋಪಿಗಳು 

ಬೆಂಗಳೂರು(ಜು.08): ಇತ್ತೀಚೆಗೆ ಕಲ್ಲಿದ್ದಲು ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿದ್ದ ಅವರ ಕೆಲಸದಾಳು ತಾಯಿ-ಮಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಯಿತ್ರಿ ನಗರದ ನಿವಾಸಿ ಜಯಂತಿ ಹಾಗೂ ಆಕೆಯ ಪುತ್ರಿ ಸೋನಿಯಾ ಬಂಧಿತರಾಗಿದ್ದು, ಆರೋಪಿಗಳು .16 ಲಕ್ಷ ಬೆಲೆ ಬಾಳುವ 272 ಗ್ರಾಂ ಚಿನ್ನಾಭರಣ, 997 ಗ್ರಾಂ ಬೆಳ್ಳಿ ಹಾಗೂ .1.72 ಲಕ್ಷ ನಗದು ದೋಚಿದ್ದರು. ಮಾಗಡಿ ರಸ್ತೆಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಗುಜರಾತ್‌ ಮೂಲದ ಕಲ್ಲಿದ್ದಲು ಉದ್ಯಮಿ ವಿಶಾಲ್‌ ಮನೆಯಲ್ಲಿ ಆರೋಪಿಗಳು ಕಳವ ಮಾಡಿದ್ದರು.

ಬೆಂಗಳೂರು: ಅಂಗಡಿ ಮಾಲೀಕನ ಮೇಲೆ ಸಿಟ್ಟಿಗೆ 110 ಲ್ಯಾಪ್‌ಟಾಪ್‌ಗಳನ್ನೇ ಕದ್ದರು..!

ಮನೆಯಲ್ಲಿ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ತಮ್ಮ ಆಭರಣಗಳನ್ನು ಅಡಮಾನವಿಟ್ಟು .5 ಲಕ್ಷ ಸಾಲವನ್ನು ತಾಯಿ-ಮಗಳು ಪಡೆದಿದ್ದರು. ಸಾಲ ತೀರಿಸುವ ಸಲುವಾಗಿ ವಿಶಾಲ್‌ ಮನೆಯಲ್ಲಿ ಅವರ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.