Asianet Suvarna News Asianet Suvarna News

ತಾಯಿಯನ್ನು ನಿಂದಿಸಿದನೆಂದು ಅಜ್ಜನನ್ನೇ ಕೊಂದ ಮೊಮ್ಮಗ!

  ಹೆತ್ತ ತಾಯಿಯನ್ನೇ ನಿಂದಿಸಿದನೆಂದು ಮೊಮ್ಮಗನೊಬ್ಬ ತನ್ನ ಅಜ್ಜನನ್ನೇ ಕೊಲೆಗೈದ ಭೀಕರ ಘಟನೆ ಕಲಬುರಗಿ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ಸಂಭವಿಸಿದೆ. ಈ ಘಟನೆ ತುಸು ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಮೊಮ್ಮಗನನ್ನು ಆಕಾಶ್‌ (22) ಎಂದು ಗುರುತಿಸಲಾಗಿದೆ. ಕೊಲೆಯಾದ ನತದೃಷ್ಟ ಅಜ್ಜನನ್ನು ಸಿದ್ರಾಮಪ್ಪ (74) ಎಂದು ಗುರುತಿಸಲಾಗಿದೆ.

Mother abusing issue  grandson killed his grandfather at kalaburagi rav
Author
First Published Dec 3, 2023, 7:11 AM IST

ಕಲಬುರಗಿ (ಡಿ.3) :  ಹೆತ್ತ ತಾಯಿಯನ್ನೇ ನಿಂದಿಸಿದನೆಂದು ಮೊಮ್ಮಗನೊಬ್ಬ ತನ್ನ ಅಜ್ಜನನ್ನೇ ಕೊಲೆಗೈದ ಭೀಕರ ಘಟನೆ ಕಲಬುರಗಿ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ಸಂಭವಿಸಿದೆ. ಈ ಘಟನೆ ತುಸು ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಮೊಮ್ಮಗನನ್ನು ಆಕಾಶ್‌ (22) ಎಂದು ಗುರುತಿಸಲಾಗಿದೆ. ಕೊಲೆಯಾದ ನತದೃಷ್ಟ ಅಜ್ಜನನ್ನು ಸಿದ್ರಾಮಪ್ಪ (74) ಎಂದು ಗುರುತಿಸಲಾಗಿದೆ.

ಆಕಾಶನ ತಾಯಿ ಸರೋಜಮ್ಮಳಿಗೆ ಅಜ್ಜ ಸಿದ್ರಾಮಪ್ಪ ನಿಂದಿಸಿರೋದೆ ಕೊಲೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಸೋಮವಾರ ಸಿದ್ರಾಮಪ್ಪನ ಸಹೋದರಿ ಮೃತಪಟ್ಟ ಹಿನ್ನೆಲೆಯಲ್ಲಿ ಸಹೋದರರೆಲ್ಲರೂ ಸೇರಿ ಕುಮಸಿ ಗ್ರಾಮಕ್ಕೆ ತೆರಳಿದ್ದರು. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮರಳಿ ಊರಿಗೆ ಬರುವಾಗ ದಾರಿಯಲ್ಲಿ ಸರೋಜಮ್ಮ ಸಿದ್ರಾಮಪ್ಪನಿಗೆ ಕ್ರೂಸರ್‌ ವಾಹನದ ಟಾಪ್‌ ಮೇಲೆ ಕೂರುವಂತೆ ಸೂಚಿಸಿದ್ದರು. ತನಗೆ ವಯಸ್ಸಾಗಿದೆ. ಗಾಡಿ ಮೇಲೆ ಕೂರುವಂತೆ ಹೇಳುತ್ತಿಯಾ ಎಂದು ಸಿದ್ರಾಮಪ್ಪ ಸರೋಜಮ್ಮಳಿಗೆ ಅವಾಚ್ಯವಾಗಿ ನಿಂದಿಸಿದ್ದರು.

ಪ್ರೀತಿಸಿದವಳನ್ನು ಕೊಲೆ ಮಾಡಿ, ಅದರ ವಿಡಿಯೋ ವಾಟ್ಸ್‌ಅಪ್‌ ಸ್ಟೇಟಸ್‌ಗೆ ಹಾಕಿದ ಪಾಪಿ!

ಈ ಸಂಗತಿ ಸರೋಜಮ್ಮ ತನ್ನ ಮಗನಿಗೆ ಹೇಳಿದ್ದರು. ಇದೇ ಕಾರಣದಿಂದ ರೊಚ್ಚಿಗೆದ್ದ ಮಗ ಆಕಾಶ್‌ ಅಜ್ಜನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತಂತೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಕಾಶ್‌ನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

ಬಸ್‌-ಬೈಕ್‌ ನಡುವೆ ಡಿಕ್ಕಿ: ಸ್ನೇಹಿತರಿಬ್ಬರ ಸಾವು

ಕಲಬುರಗಿ: ಬಸ್ ಹಾಗೂ ಬೈಕ್‌ ಮಧ್ಯೆ ಸಂಭವಿಸಿರುವ ಡಿಕ್ಕಿಯಲ್ಲಿ ಇಬ್ಬರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಜೇವರ್ಗಿ ಹೆದ್ದಾರಿಯಲ್ಲಿ ಬರುವ ಕಟ್ಟಿ ಸಂಗಾವಿ ಗ್ರಾಮದ ಬಳಿ ಸಂಭವಿಸಿದೆ.

 

ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!

ದುರಂತದಲ್ಲಿ ಮಡಿದವರನ್ನು ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ನಿವಾಸಿಗಳಾದ ಪ್ರಜ್ವಲ್‌ (22), ಶಶಿಕುಮಾರ್‌ (21) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಒಂದೇ ಬೈಕ್‌ ಮೇಲೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು ಹೊರಟಿದ್ದಾಗ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಡಿಕ್ಕಿ ರಭಸಕ್ಕೆ ಬೈಕ್‌ ನುಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಬೈಕ್‌ ಸವಾರರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೇವರ್ಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios