Asianet Suvarna News Asianet Suvarna News

ಪ್ರೀತಿಸಿದವಳನ್ನು ಕೊಲೆ ಮಾಡಿ, ಅದರ ವಿಡಿಯೋ ವಾಟ್ಸ್‌ಅಪ್‌ ಸ್ಟೇಟಸ್‌ಗೆ ಹಾಕಿದ ಪಾಪಿ!

ಪ್ರೀತಿಸಿದವಳನ್ನು ಕೊಲೆ ಮಾಡಿದಲ್ಲದೆ, ಅದರ ವಿಡಿಯೋ ಮಾಡಿ ವಾಟ್ಸ್‌ಆಪ್‌ ಸ್ಟೇಟಸ್‌ನಲ್ಲಿ ಹಾಕಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Malayali nursing student to death in Chennai Boyfriend uploads Murder photo as WhatsApp status san
Author
First Published Dec 2, 2023, 8:05 PM IST

ನವದೆಹಲಿ (ಡಿ.2): ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರಿಯಕರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಹುಡುಗ ತನ್ನ ಮೊಬೈಲ್ ಫೋನ್‌ನಲ್ಲಿ ಆಕೆಯನ್ನು ಕೊಲೆ ಮಾಡಿದ ದೃಶ್ಯಗಳನ್ನು ರೆಕಾರ್ಡ್ ಮಾಡಿ ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಅಪ್‌ಲೋಡ್ ಮಾಡಿದ್ದಾನೆ. ಮೃತರನ್ನು ಕೊಲ್ಲಂ ಮೂಲದ ಫೌಸಿಯಾ (20) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಆಕೆಯ ಗೆಳೆಯ ಎಂ ಆಶಿಕ್ (20)ನನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಕ್ ಕೂಡ ಕೊಲ್ಲಂ ಮೂಲದವರೇ ಆಗಿದ್ದಾನೆ. ಫೌಸಿಯಾ ಚೆನ್ನೈನ ಕ್ರೋಂಪೇಟ್‌ನಲ್ಲಿರುವ ಬಾಲಾಜಿ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಳು.

ಪೊಲೀಸರ ಪ್ರಕಾರ, ಆಶಿಕ್ ಮತ್ತು ಫೌಸಿಯಾ ಶುಕ್ರವಾರ ಕ್ರೋಂಪೇಟೆಯಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ದರು. ಜಗಳದ ನಂತರ, ಆಶಿಕ್ ತನ್ನ ಟೀ ಶರ್ಟ್ ಬಳಸಿ ಫೌಸಿಯಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ತನ್ನ ಮೊಬೈಲ್ ಫೋನ್ ಬಳಿಸಿ ಈ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಆಶಿಕ್‌ ಈ ವೀಡಿಯೊವನ್ನು ತಮ್ಮ ವಾಟ್ಸಾಪ್ ಸ್ಟೇಟಸ್ ಆಗಿ ಅಪ್ಲೋಡ್ ಮಾಡಿದ್ದಾನೆ. ಇದನ್ನು ನೋಡಿದ ಫೌಸಿಯಾ ಅವರ ಕೆಲವು ಸ್ನೇಹಿತರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಶಿಕ್‌ನನ್ನು ಬಂಧಿಸಿದ್ದಾರೆ. ಫೌಸಿಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕ್ರೋಂಪೇಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಹುಬ್ಬಳ್ಳಿ: ಮಹಜರು ಮಾಡುವ ವೇಳೆ ರೌಡಿ ಹಲ್ಲೆ, ಕೂದಲೆಳೆಯ ಅಂತರದಲ್ಲಿ ಪಾರಾದ ಸಬ್ಇನ್ಸಪೆಕ್ಟರ್‌

ಆಶಿಕ್ ಮತ್ತು ಫೌಸಿಯಾ ಅವರು ಅಪ್ರಾಪ್ತರಾಗಿದ್ದಾಗಲೇ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮಗುವನ್ನು ಮೈಸೂರಿನ ಆಶ್ರಮದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ. ಆಶಿಕ್ ಅಪ್ರಾಪ್ತನಾಗಿದ್ದಾಗ ಫೌಸಿಯಾಳನ್ನು ಮದುವೆಯಾಗಿದ್ದ ಕಾರಣಕ್ಕೆ ಪೋಕ್ಸೊ ಕಾಯ್ದೆಯಡಿ ಈ ಹಿಂದೆ ಜೈಲು ಪಾಲಾಗಿದ್ದರು. ಜೈಲಿನಿಂದ ಹೊರಬಂದ ನಂತರ, ಆಶಿಕ್ ಫೌಸಿಯಾಳೊಂದಿಗೆ ಸಂಪರ್ಕವನ್ನು ಉಳಿಸಿಕೊಳ್ಳಲು ಚೆನ್ನೈನಲ್ಲಿ ಉಳಿಯಲು ಪ್ರಾರಂಭ ಮಾಡಿದ್ದ, ಇತರ ಮಹಿಳೆಯರೊಂದಿಗೆ ಆಶಿಕ್ ಸಂಬಂಧದ ಬಗ್ಗೆ ದಂಪತಿಗಳ ನಡುವೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರು: ದಂಡ ತಪ್ಪಿಸಲು ಬೈಕ್‌ ನಂಬರ್‌ ಪ್ಲೇಟ್‌ಗೆ ಸ್ಟಿಕ್ಕರ್‌ ಅಂಟಿಸಿದ ಭೂಪನ ವಿರುದ್ಧ ಕೇಸ್‌

Follow Us:
Download App:
  • android
  • ios