ಸೊಳ್ಳೆ ಕಾಯಿಲ್ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ 6 ಮಂದಿ ಸಾವು
ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಕಾಯಿಲ್ ಹಚ್ಚಿ ಮಲಗಿದ್ದ ಆರು ಮಂದಿ ಇದರ ವಿಷಕಾರಿ ಹೊಗೆಯ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವಿಷಕಾರಿ ಹೊಗೆಯು ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು, ಬಳಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನವದೆಹಲಿ: ದೆಹಲಿಯ ಶಾಸ್ತ್ರಿ ಪಾರ್ಕ್ ನಿವಾಸದಲ್ಲಿ ಸೊಳ್ಳೆ ಕಾಯಿಲ್‌ನಿಂದ ಬಿಡುಗಡೆಯಾದ ವಿಷಕಾರಿ ಹೊಗೆಯಿಂದ ಒಂದೇ ಕುಟುಂಬದ ಆರು ಜನರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಸುಟ್ಟ ಗಾಯಗಳು ಮತ್ತು ಉಸಿರುಗಟ್ಟಿ ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉರಿಯುತ್ತಿದ್ದ ಸೊಳ್ಳೆ ಕಾಯಿಲ್ ರಾತ್ರಿಯ ಸಮಯದಲ್ಲಿ ಹಾಸಿಗೆಯ ಮೇಲೆ ಬಿದ್ದಿದೆ. ಇದರ ವಿಷಕಾರಿ ಹೊಗೆಯ ಪರಿಣಾಮವಾಗಿ ಕುಟುಂಬದ ಸದಸ್ಯರು ಪ್ರಜ್ಞೆ ಕಳೆದುಕೊಂಡರು ಮತ್ತು ಸಾವನ್ನಪ್ಪಿದರು ಎಂದು ತಿಳಿದುಬಂದಿದೆ. ರಾತ್ರಿಯಲ್ಲಿ ಹಾಸಿಗೆಯ ಮೇಲೆ ಬಿದ್ದಿದ್ದ ಸುಡುವ ಸೊಳ್ಳೆ ಸುರುಳಿಯಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ಅನ್ನು ಉಸಿರಾಡಿದ ನಂತರ ಎಲ್ಲರಿಗೂ ಉಸಿರಾಡಲು ಕಷ್ಟವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಕುಟುಂಬ ಸದಸ್ಯರು ಇಡೀ ರಾತ್ರಿ ಸೊಳ್ಳೆ ಕಾಯಿಲ್ (Mosquito Coil) ಹಚ್ಚಿಕೊಂಡಿದ್ದರು ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಸೊಳ್ಳೆ ಕಾಯಿಲ್ ಮನೆಯೊಳಗಿನ ಹಾಸಿಗೆಯ (Bed) ಮೇಲೆ ಬಿದ್ದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಷಕಾರಿ ಹೊಗೆಯು ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು, ಬಳಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ (Deatj).
Home Remedies : ಸೊಳ್ಳೆ ಮನೆ ಹತ್ರನೂ ಬರಬಾರದು ಅಂದ್ರೆ ಈ ಸ್ಪ್ರೇ ಬಳಸಿ
ಘಟನೆಯಲ್ಲಿ ಮಹಿಳೆ ಹಾಗೂ ಒಂದೂವರೆ ವರ್ಷದ ಮಗು (Baby) ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ, 15 ವರ್ಷದ ಬಾಲಕಿ ಸೇರಿದಂತೆ ಇತರ ಇಬ್ಬರನ್ನು ಆಸ್ಪತ್ರೆಗೆ (Hospital) ಕರೆದೊಯ್ಯಲಾಗಿದ್ದು, ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ನೀಡಲಾಗುತ್ತಿದೆ. 22 ವರ್ಷ ವಯಸ್ಸಿನ ಇನ್ನೊಬ್ಬ ವ್ಯಕ್ತಿಯನ್ನು ಪ್ರಥಮ ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ.
ಮಸ್ಕಿಟೋ ಕಾಯಿಲ್ ಮನುಷ್ಯನ ಜೀವ ತೆಗಿಯೋಕೆ ಕಾರಣವಾಗೋದು ಹೇಗೆ?
ಮಾರುಕಟ್ಟೆಯಲ್ಲಿ ಸೊಳ್ಳೆಗಳನ್ನು ಓಡಿಸಲೆಂದೇ ಹಲವು ರೀತಿಯ ಮಾಸ್ಕಿಟೋ ಕಾಯಿಲ್‌ಗಳು ಲಭ್ಯವಿದೆ. ಇವು ಸೊಳ್ಳೆಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದು ಮಾತ್ರ ಖಂಡಿತ. ಹೀಗಾಗಿಯೇ ಈ ಸೊಳ್ಳೆ ಕಾಯಿಲ್‌ಗಳನ್ನು ಬಳಸುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು. ಕಾಯಿಲ್ ಹಚ್ಚಿಡೋದ್ರಿಂದ, ಅಥವಾ ಸೊಳ್ಳೆಬತ್ತಿಗಳಿಂದ ಹೊರಹೊಮ್ಮುವ ಹೊಗೆಯಿಂದ ಏನೆಲ್ಲಾ ತೊಂದ್ರೆಯಿದೆ ತಿಳಿದುಕೊಳ್ಳೋಣ.
ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ: ಒಂದು ಅಧ್ಯಯನವು ಒಂದು ಸೊಳ್ಳೆ ಸುರುಳಿಯನ್ನು ಸುಡುವುದರಿಂದ ಉತ್ಪತ್ತಿಯಾಗುವ ಕಣಗಳು 75-137 ಸಿಗರೇಟ್‌ಗಳನ್ನು ಸುಡುವುದಕ್ಕೆ ಸಮನಾಗಿರುತ್ತದೆ ಎಂದು ಅಂದಾಜಿಸಿದೆ. ಸೊಳ್ಳೆ ಕಾಯಿಲ್ ಹೊಗೆಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ (Lungs) ಕ್ಯಾನ್ಸರ್‌ನಂತಹ ಹೆಚ್ಚು ಗಂಭೀರವಾದ ಆರೋಗ್ಯ ಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
ಈ ಊರಲ್ಲಿ… ಸೊಳ್ಳೆ ಹುಡುಕಿ ಕೊಟ್ರೆ ನೀವಾಗಬಹುದು ಕೊಟ್ಯಧಿಪತಿ
ಉಸಿರಾಟ ಸಂಬಂಧಿ ಸಮಸ್ಯೆ: ಸೊಳ್ಳೆ ಬತ್ತಿ ಹಚ್ಚಿಡುವುದರಿಂದ ಇದರ ರಾಸಾಯನಿಕಯುಕ್ತ ಹೊಗೆಗೆ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಅಸ್ತಮಾ, ಒಣಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆ ಇರುವವರು ದೀರ್ಘಕಾಲ ಮೊಸ್ಕಿಟೋ ಕಾಯಿಲ್‌ಗೆ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಮಾರಕವೆಂದು ಪರಿಗಣಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕ ಯಂತ್ರಗಳು ಕೂಡಾ ನಮ್ಮ ಆರೋಗ್ಯಕ್ಕೂ ಹಾನಿಕಾರಕ. ಎಲ್ಲೋ ಒಂದು ಕಡೆ ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ, ಮುಚ್ಚಿದ ಕೋಣೆಯಲ್ಲಿ ಯಂತ್ರದಿಂದ ಹೊರಬರುವ ವಾಸನೆಯನ್ನೂ ನಾವು ಉಸಿರಾಡುತ್ತೇವೆ.
ಅಲರ್ಜಿಯನ್ನುಂಟು ಮಾಡುವ ಸಾಧ್ಯತೆಯಿದೆ: ಈ ಉತ್ಪನ್ನಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು ಅಥವಾ ಉಲ್ಬಣಗೊಳಿಸಬಹುದು. ಅವರು ಕಣ್ಣುಗಳನ್ನು ಕೆರಳಿಸಬಹುದು ಅಥವಾ ಅಲರ್ಜಿಯನ್ನು ಉಂಟುಮಾಡಬಹುದು. ಸೊಳ್ಳೆ ಸುರುಳಿಗಳ ಹೊಗೆಗೆ ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದ ಅಡ್ಡಪರಿಣಾಮಗಳೆಂದರೆ ತಲೆನೋವು, ಕೆಮ್ಮು, ಗಂಟಲು ನೋವು, ವಾಕರಿಕೆ ಮತ್ತು ತಲೆತಿರುಗುವಿಕೆಯನ್ನು ಒಳಗೊಂಡಿರಬಹುದು. ಇದು ಆಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD), ಮತ್ತು ತಲೆನೋವುಗಳಂತಹ ಉಸಿರಾಟದ ಪರಿಸ್ಥಿತಿಗಳನ್ನು ಸಹ ಪ್ರಚೋದಿಸಬಹುದು.