Asianet Suvarna News Asianet Suvarna News

ಮಲೆನಾಡಲ್ಲಿ 30 ಮಂಗಗಳ ಮಾರಣ ಹೋಮ; ತಲೆಗೆ ಹೊಡೆದು ಕೊಂದಿರುವ ನರರಾಕ್ಷಸರು!

ಜ್ಞೆ ತಪ್ಪುವ ಔಷಧವಿಟ್ಟು 30 ಮಂಗಗಳ ಮಾರಣಹೋಮ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಮಂಗಗಳ ಪೈಕಿ 16 ಗಂಡು, 14 ಹೆಣ್ಣು, 4 ಮರಿ ಮಂಗಗಳು ಸೇರಿವೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.

More than 30 monies killed by miscreants at NR pura chikkamagaluru district rav
Author
First Published Jun 7, 2024, 4:52 PM IST

ಚಿಕ್ಕಮಗಳೂರು (ಜೂ.7): ಪ್ರಜ್ಞೆ ತಪ್ಪುವ ಔಷಧವಿಟ್ಟು 30 ಮಂಗಗಳ ಮಾರಣಹೋಮ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ಮಂಗಗಳ ಪೈಕಿ 16 ಗಂಡು, 14 ಹೆಣ್ಣು, 4 ಮರಿ ಮಂಗಗಳು ಸೇರಿವೆ. ಮೊದಲಿಗೆ ತೋಟದ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿರುವ ಪಾಪಿಗಳು. ಬಾಳೆಹಣ್ಣು ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದ ಮಂಗಗಳ ತಲೆಗೆ ಬಲವಾಗಿ ಹೊಡೆದು ಕೊಂದಿರುವ ನರರಾಕ್ಷಸರು ನಂತರ ರಸ್ತೆಗೆ ಎಸೆದು ಹೋಗಿದ್ದಾರೆ.

ಚಿಕ್ಕಮಗಳೂರು: ಸಂಪೂರ್ಣ ಗುಂಡಿಮಯವಾದ ರಾಜ್ಯ ಹೆದ್ದಾರಿ, ಸರ್ಕಾರಕ್ಕೆ ವಾಹನ ಸವಾರರ ಹಿಡಿಶಾಪ..!

30 ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯ, ರಕ್ತ ಸುರಿದು ಮೃತಪಟ್ಟಿವೆ. ಮೂವತ್ತು ಮಂಗಗಳಿಗೆ ತಲೆಗೆ ಒಡೆದೆ ಕೊಂದಿರುವ ರಾಕ್ಷಸರು. ಮಂಗಗಳ ಕೊಲೆ ಕಾರಣ ತಿಳಿದುಬಂದಿಲ್ಲ. ತೋಟದ ಬೆಳೆ ನಾಶ ಮಾಡುತ್ತವೆಂದು ಕೊಂದಿರಬಹುದಾ? ಅಥವಾ ಬೇರೆ ಏನಾದರೂ ಕಾರಣ ಇದ್ದಿರಬಹುದಾ? ಒಟ್ಟಿನಲ್ಲಿ ಮೂಕ ಪ್ರಾಣಿಗಳನ್ನ ರೀತಿ ಮನುಷ್ಯತ್ವಹೀನರಂತೆ ಹೊಡೆದುಕೊಂದಿರುವುದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲೆನಾಡಿಗೆ ಮಳೆ ಬಂದ್ರೆ ಕರೆಂಟೂ ಇರಲ್ಲ, ಮೊಬೈಲ್ ನೆಟ್‌ವರ್ಕೂ ಸಿಗಲ್ಲ

ಘಟನೆ ಬಳಿಕ ಸ್ಥಳಕ್ಕೆ ಡಿಎಫ್‌ಓ, ಆರ್‌ಎಫ್‌ಓ, ಪಿಎಸ್‌ಐ, ಪಶುಸಂಗೋಪನೆ, ಪಶುವೈದ್ಯರು, ಪಂಚಾಯ್ತಿ, ಆಶಾ ಕಾರ್ಯಕರ್ತೆಯರು ಸೇರಿ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್‌ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios