ಮಲೆನಾಡಿಗೆ ಮಳೆ ಬಂದ್ರೆ ಕರೆಂಟೂ ಇರಲ್ಲ, ಮೊಬೈಲ್ ನೆಟ್‌ವರ್ಕೂ ಸಿಗಲ್ಲ
ರಾಜ್ಯದ ಮಲೆನಾಡಿನ ಬಹುಭಾಗ ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ಮಳೆಗಾಲದಲ್ಲಿ ಪ್ರವಾಸಿಗರ ಸ್ವರ್ಗವಾಗಿತ್ತದೆ. ಆದರೆ, ಮಳೆ ಬಂದರೆ ಇಲ್ಲಿನ ಜನರಿಗೆ ಕರೆಂಟೂ ಇರೊಲ್ಲ, ಮೊಬೈಲ್ ನೆಟ್ವರ್ಕೂ ಸಿಗೊಲ್ಲ.
ವರದಿ - ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.05): ರಾಜ್ಯದಲ್ಲೇ ಅತೀ ಹೆಚ್ಚು ಬಿಎಸ್ಎನ್ಎಲ್ ಗ್ರಾಹಕರನ್ನು ಹೊಂದಿರೋ ಜಿಲ್ಲೆ ಕಾಫಿನಾಡು ಚಿಕ್ಕಮಗಳೂರು . ಇಲ್ಲಿ ಹೇಳಿ ಕೇಳಿ ಮಲೆನಾಡ ಬೆಟ್ಟಗುಡ್ಡ, ಗಿರಿ ಕಂಧಕಗಳನ್ನ ಹೊದ್ದು ನಿಂತಿರೋ ಗ್ರಾಮಗಳಲ್ಲಿ ಉತ್ತಮ ನೆಟ್ವರ್ಕ್ಗಾಗಿ ಬಹುತೇಕ ಜನರು ಬಿಎಸ್ಎನ್ಎಲ್ ನೆಟ್ವರ್ಕ್ಅನ್ನೇ ಅವಲಂಭಿಸಿದ್ದಾರೆ. ಮಲೆನಾಡಿನಲ್ಲಿ ಮಳೆಯಿಂದ ಪವರ್ ಕಟ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಸಮಸ್ಯೆಯಿಂದ ಮೊಬೈಲ್ ನೆಟ್ ವರ್ಕ್ ಬಂದ್ ಆಗುವುದರಿಂದ ಮಲೆನಾಡಿನ ಕುಗ್ರಾಮದ ಜನರ ಪರದಾಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೇಳಿ ಕೇಳಿ ಮಲೆನಾಡು ಇಲ್ಲಿನ ಬಹುತೇಕ ಜನರು ಮೊದಲಿನಿಂದ್ಲು ಉತ್ತಮ ನೆಟ್ವರ್ಕ್ಗಾಗಿ ಹಲವು ವರ್ಷಗಳಿಂದ ಬಿಎಸ್ಎನ್ಎಲ್ ಸಂಪರ್ಕ ಸೇವೆಯನ್ನೇ ಅವಲಂಬಿಸಿದ್ದಾರೆ. ತಮ್ಮ ವ್ಯಾಪಾರ ವ್ಯಹಹಾರ, ಸ್ನೇಹಿತರು, ನೆಂಟರೊಂದಿಗೆ ಮಾತನಾಡೋಕೆ ಬಿಎಸ್ ಎನ್ಎಲ್ ನೆಟ್ವರ್ಕ್ ಬಿಟ್ಟರೆ ಬೇರ್ಯಾವ ನೆಟ್ವರ್ಕ್ಗಳು ಇಲ್ಲಿ ಅಷ್ಟಾಗಿ ಸಿಗೋದಿಲ್ಲ.. ಬಿಎಸ್ಎನ್ಎನ್ಎಲ್ಗೆ ಜಿಲ್ಲೆಯಲ್ಲೆ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರೋದು ಮಲೆನಾಡಲ್ಲೆ ಅಲ್ಲದೆ ಇಲಾಖೆಗೆ ಹೆಚ್ಚು ಆದಾಯ ತಂದು ಕೊಟ್ರು ಇಲ್ಲಿನ ಮಲೆನಾಡಿನ ಬಹುತೇಕ ಜನ ನಾಟ್ ರೀಚಬಲ್ ಆಗಿದ್ದಾರೆ.ಮಲೆನಾಡಿನಲ್ಲಿ ಇದೀ ಮಳೆ ಶುರುವಾಗಿದೆ. ಇದರೊಂದಿಗೆ ಪವರ್ ಕಟ್ ಕೂಡ ಆರಂಭವಾಗಿದ್ದು ಪವರ್ ಹೋಗ್ತಿದ್ದಂತೆ ಮೊಬೈಲ್ ನೆಟ್ ವರ್ಕ್ ಬಂದ್ ಅಗ್ತಿವೆ..ಬಿಎಸ್ ಎನ್ ಎಲ್ ನಿರ್ಲಕ್ಷ್ಯದಿಂದ ಕುಗ್ರಾಮದ ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಗೆದ್ದಿದ್ದಕ್ಕೆ ಮಲೆ ಮಾದಪ್ಪನಿಗೆ ಹರಕೆ ತೀರಿಸಿದ ಮುಸ್ಲಿಂ ವ್ಯಕ್ತಿ!
ಹೌದು ಕಾಫಿನಾಡು ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ದ ಅಂಚಿನಲ್ಲಿರೋ ಸಂಸೆ. ಮೊದಲೇ ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರೋದು ಕುಗ್ರಾಮಗಳೆ..ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರೋ ಪ್ರದೇಶದಲ್ಲಿರೋ ಊರುಗಳು.ಮೊದ್ಲಿನಿಂದಲೂ ಒಂದಲ್ಲ ಒಂದು ಸಮಸ್ಯೆ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡ್ತಿದ್ದವರಿಗೆ ಈಗ ನೆಟ್ ವರ್ಕ್ ಸಮಸ್ಯೆ ಅತೀ ದೊಡ್ಡ ತಲೆನೋವಾಗಿದೆ.ಯಾವಾಗ ಬಿಎಸ್ ಎನ್ ಎಲ್ ನೆಟ್ ವರ್ಕ್ ಬಂದ್ ಅಗುತ್ತೇ ಅನ್ನೋದೆ ಗೊತ್ತಾಗಲ್ಲ.ಈಗೀದ್ರೆ ಇನ್ನೂ ಐದೇ ನಿಮಿಷಕ್ಕೆ ನಾಟ್ ರಿಚೇಬಲ್ ಅಂತಾಗುತ್ತದೆ.ಇದಕ್ಕೆ ನೇರವಾಗಿ ಬಿಎಸ್ ಎನ್ ಎಲ್ ಅಧಿಕಾರಿಗಳ ನಿರ್ಲಕ್ಷ್ಯ ಅಂತಿದ್ದಾರೆ ಸ್ಥಳೀಯರು.
ನೆಟ್ ವರ್ಕ್ ಪ್ರಾಬ್ಲಂ,,ಅನಾರೋಗ್ಯ ಪೀಡಿತರ ಸಂಕಷ್ಟ !
ಇನ್ನೂ ಸಂಸೆಯ ಸುತ್ತಮುತ್ತ ಇರೋ ನೇತ್ರಾವತಿ,ಎಳನೀರು, ಬಾಲ್ಗರ್, ಗುತ್ಯಡ್ಕ, ಪಾತಿಗುಡ್ಡ, ಎಸ್ ಕೆ ಮೇಗಲ್, ಕುದುರೆಮುಖದ ಕಾರ್ಲೆ.ಕಳಕೋಡು ಭಾಗದಲ್ಲಂತೂ ಜನ್ರು ನೆಟ್ ವರ್ಕ್ ಇಲ್ಲದೆ ಪರದಾಡ್ತಿದ್ದಾರೆ. ಬಿಎಸ್ ಎನ್ ಎಲ್ ನೆಟ್ ವರ್ಕ್ ಕೈಕೊಟ್ಟಾಗ ಏನಾದರೂ ಕಾಯಿಲೆ ಬಿದ್ರೆ ಎಮರ್ಜೆನ್ಸಿ ಅದ್ರೆ ಬೇರೆ ಬೇರೆ ಮನೆಗಳಿಗೆ ಹೋಗುವಂತಾಗಿದೆ..ಖಾಸಗಿ ಕಂಪೆನಿಗಳ ಪೋನ್ ಇದ್ರೆ ಅಂಬುಲೈನ್ಸ್ ಕರೆಸಬಹುದು ಇಲ್ಲಾದ್ರೆ ಸಂಕಷ್ಟ ಪಿಕ್ಸ್ ಅಂತಿದ್ದಾರೆ.. ಈ ರೀತಿಯ ಸಮಸ್ಯೆಯಂತೂ ನಿರಂತರವಾಗಿ ಅಗ್ತಾನೇ ಇದೆ..ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣ ಅನ್ನೋ ಅರೋಪಿಸ್ತಾ ಇದ್ದಾರೆ.ಕಾಡಂಚಿನ ಗ್ರಾಮದಲ್ಲಿ ಈಗ ನೆಟ್ ವರ್ಕ್ ಪ್ರಾಬ್ಲಂ..ಕರೆಂಟ್ ಕೈಕೊಡ್ತಿದ್ದಂತೆ ಸ್ಥಬ್ದವಾಗ್ತಿದೆ. ಕರೆಂಟ್ ಕೈ ಕೊಟ್ಟ ಸಮಯದಲ್ಲಿ ಪರ್ಯಾಯವಾಗಿ ಡೀಸೆಲ್ , ಯುಪಿಎಸ್ ಅಳವಡಿಸಿ ಬಿಎಸ್ ಎನ್ ಎಲ್ ನೆಟ್ ವರ್ಕ್ ಬರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು.
ಉಡುಪಿಯಲ್ಲಿ ಶುರುವಾಯ್ತು 'ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್' ಅಭಿಯಾನ
ಒಟ್ಟಾರೆ ಅಧಿಕಾರಗಳ ನಿರ್ಲಕ್ಷಕ್ಕೆ ಇಲ್ಲಿ ಮೊಬೈಲ್ ಸಂಪರ್ಕ ವ್ಯವಸ್ಥಯೇ ಅಧ್ವಾನದ ಹಂತ ತಲುಪಿದೆ ಇನ್ನಾದ್ರು ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಿ ಅನ್ನೋದು ಮಲೆನಾಡಿನ ಜನರ ಆಗ್ರಹವಾಗಿದೆ.