Asianet Suvarna News Asianet Suvarna News

ಕಾಳಮ್ಮ ದೇವಾಲಯದಲ್ಲಿ ಕಳ್ಳತನ, 2.5 ಕೋಟಿ ಮೌಲ್ಯದ ದೇವರ ಆಭರಣ ಕಳವು

ಇತಿಹಾಸ ಪ್ರಸಿದ್ಧ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಿದ ಕಳ್ಳರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ದೇವರ  ಚಿನ್ನಾಭರಣ ದೋಚಿದ ಘಟನೆ ತುಮಕೂರಿನ ಕೆಂಕೆರೆಯ ಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ.

more than 2.5 Crore worth of  God's jewellery stolen from Kalamma Temple at tumakuru gow
Author
First Published Feb 4, 2023, 9:19 PM IST

ತುಮಕೂರು (ಫೆ.4): ಇತಿಹಾಸ ಪ್ರಸಿದ್ಧ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಿದ ಕಳ್ಳರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ದೇವರ  ಚಿನ್ನಾಭರಣ ದೋಚಿದ ಘಟನೆ ಕೆಂಕೆರೆಯ ಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಬಳಿಯ ಕೆಂಕೆರೆ ಗ್ರಾಮದಲ್ಲಿರುವ ಕಾಳಮ್ಮ ದೇವಾಲಯದಲ್ಲಿ ದೇವರನ್ನ ಕೂರಿಸಿದ್ದ ಹಲಗೆ ಬಿಟ್ಟು ಉಳಿದೆಲ್ಲವನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ.

ಕುವೈತ್ ನಲ್ಲಿ ಸಿಲುಕಿದ್ದ ಕೊಡಗಿನ ಮಹಿಳೆ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್

ಕಾಳಮ್ಮ ದೇವರ ವಿಗ್ರಹಕ್ಕೆ ತೊಡಿಸಿದ್ದ ದೇವರ 3 ಬಂಗಾರದ ಮುಖಪದ್ಮಗಳು, ಛತ್ರಿ, ಒಡವೆ‌ ಹಾಗೂ ದೇವಾಲಯದಲ್ಲಿದ್ದ ಹಣದ ಹುಂಡಿಯನ್ನೇ ದೋಚಿರುವ ಖದೀಮರು. ಸುಮಾರು 2.50 ಕೋಟಿ ಬೆಲೆಬಾಳುವ ಚಿನ್ನಾಭರಣ ಹಾಗೂ ಹುಂಡಿ ಹಣವನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ನಿನ್ನೆ ತಡರಾತ್ರಿ ಕಳ್ಳತನ ನಡೆದಿದ್ದು ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ವರ್ಷದ ಮಗುವಿನ ಮೇಲೆ ಗ್ಯಾಂಗ್ ರೇಪ್, ದೆಹಲಿಯಲ್ಲಿ ಮತ್ತೊಂದು ಭೀಕರ ಕೃತ್ಯ!

ಇಂದು ಸ್ಥಳಕ್ಕೆ ಖುದ್ದು  ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹಾಗೂ ಎಸ್ ಪಿ ರಾಹುಲ್‌ ಕುಮಾರ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಾಲಯ ಕದ್ದ ಖದೀಮರಿಗಾಗಿ ಹುಳಿಯಾರು ಪೊಲೀಸರಿಂದ  ತನಿಖೆ ಮುಂದುರಿದಿದೆ.

Follow Us:
Download App:
  • android
  • ios