ಮೂರು ವರ್ಷದ ಮಗುವಿನ ಮೇಲೆ ಗ್ಯಾಂಗ್ ರೇಪ್, ದೆಹಲಿಯಲ್ಲಿ ಮತ್ತೊಂದು ಭೀಕರ ಕೃತ್ಯ!

ಹಾಲುಗೆನ್ನೆಯ ಮಗು. ವಯಸ್ಸು ಕೇವಲ 3 ವರ್ಷ. ಇನ್ನು ಪುಟ್ಟ ಪುಟ್ಟ ಹೆಜ್ಜೆ ಮೂಲಕ ಜಗತ್ತನ್ನು ಬೆರಗುಗಣ್ಣಿನಿಂದ ನೋಡುವ ವಯಸ್ಸು. ಆದರೆ ಈ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ದೆಹಲಿಯಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದ್ದು, ಭಾರತವೇ ಬೆಚ್ಚಿ ಬಿದ್ದಿದೆ.

Brutal Crime 3 year old child gang raped in National Capital Delhi 2 accused arrested ckm

ನವದೆಹಲಿ(ಫೆ.04): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಒಂದರ ಮೇಲೊಂದರಂತೆ ನಡೆಯುತ್ತಲೇ ಇದೆ. ಪ್ರತಿ ಪ್ರಕರಣಗಳು ಭೀಕರತೆಯನ್ನು ಸಾರುತ್ತಿದೆ. ಇದೀಗ ಕೇವಲ 3 ವರ್ಷದ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ದೆಹಲಿ ಫತೇಹುಪುರಿ ಬೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 3 ವರ್ಷದ  ಮಗುವನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡ ಹೋದ ಇಬ್ಬರು ಕಾಮುಕರು ಅತ್ಯಾಚಾರ ಎಸಗಿ ಪರಾರಿಯಾದ ಘಟನೆ ನಡೆದಿದೆ. ನೆರೆಮನೆಯವರೇ ಅತ್ಯಾಚಾರ ಎಸಗಿದ್ದಾರೆ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಫತೇಹಪುರಿ ಬೇರಿ ವಲಯದಲ್ಲಿ ನೆಲೆಸಿರುವ ಕಾರ್ಮಿಕ ಕುಟುಂಬ 3 ವರ್ಷದ ಹೆಣ್ಣುಮಗಳನ್ನು ನೆರೆಮನೆಯಲ್ಲಿದ್ದ ಇಬ್ಬರು ಕಾಮಕರು ಪುಸಲಾಯಿಸಿ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ನೆರೆಮನೆಯಲ್ಲಿ ಪ್ರತಿ ದಿನ ಆಟವಾಡು ಈ ಮಗುವನ್ನು ಆರೋಪಿಗಳು ಕರೆದುಕೊಂಡು ಹೋಗಿ ಆತ್ಯಾಚಾರ ಎಸಗಿದ್ದಾರೆ. ಇತ್ತ ಮಗಳು ಕಾಣೆಯಾಗಿರುವುದ ಅರಿತ ಪೋಷಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. 

ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!

ಇದೇ ವೇಳೆ ಇದೇ ಕಾಲೋನಿ ನಿವಾಸಿ ಮಹಿಳೆಯೊಬ್ಬರು ನೆರೆಮನೆಯವರ ಜೊತೆ ಮಗು ಮುಂದಿನ ಕಾಲೋನಿಯತ್ತ ಸಾಗುತ್ತಿರುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ಪ್ರತಿ ದಿನ ಅವರ ಮನೆಯಲ್ಲೇ ಮಗು ಆಟವಾಡುವ ಕಾರಣ ಪ್ರಶ್ನಿಸಿಲ್ಲ ಎಂದಿದ್ದಾರೆ. ಈ ಮಾಹಿತಿ ತಿಳಿದ ಪೋಷಕರು ನಿರ್ಜನ ಪ್ರದೇಶದತ್ತ ಧಾವಿಸಿದ್ದಾರೆ. ಈ ವೇಳೆ ಮಗು ಅಳುತ್ತಾ ರಕ್ತ ಸ್ರಾವದ ನಡುವೆ ಬಿದ್ದಿತ್ತು.

ತಕ್ಷಣವೇ ಮಗುವನ್ನು ಎತ್ತಿ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪೊಲೀಸರು ಧಾವಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾಲೋನಿಯ ಬಹುತೇಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರು ಕಾಮುಕರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಇತ್ತ ಘಟನೆ ಬಳಿಕ ಇಬ್ಬರು ಪರಾರಿಯಾಗಿದ್ದರು. ಇವರ ಮೊಬೈಲ್ ಲೋಕೇಶನ್ ಹಾಗೂಇತರ ಮಾಹಿತಿ ಪಡೆದ ಪೊಲೀಸರು ಇಂದು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಇನ್ಸ್ಟಾಗ್ರಾಮ್‌ ಗೆಳೆಯನಿಂದ ರೇಪ್: ಸಾಮಾಜಿಕ ಜಾಲತಾಣದಲ್ಲಿ ನಗ್ನ ಚಿತ್ರ ಶೇರ್‌

3.5 ವರ್ಷದ ಬಾಲಕಿ ರೇಪ್‌, ಹತ್ಯೆ
ಕಾಮುಕನೊಬ್ಬ ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿ ಕೊಲೆ ಮಾಡಿರುವ ಹೇಯ ಕೃತ್ಯ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಾಗಲಕೋಟೆ ಮೂಲದ ಮಹಿಳೆ ಕಾಮಾಕ್ಷಿಪಾಳ್ಯದಲ್ಲಿ ಮೂರೂವರೆ ವರ್ಷದ ಬಾಲಕಿ ಜತೆಗೆ ನೆಲೆಸಿದ್ದಳು. ಕೌಟುಂಬಿಕ ಕಲಹದಿಂದ ಗಂಡನಿಂದ ದೂರವಿದ್ದ ಈ ಮಹಿಳೆಗೆ ಇತ್ತೀಚೆಗೆ ಆರೋಪಿಯ ಪರಿಚಯವಾಗಿ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು. ಹೀಗಾಗಿ ಆರೋಪಿಯು ಮಹಿಳೆಯ ಮನೆಯಲ್ಲೇ ನೆಲೆಸಿದ್ದ. ಮಹಿಳೆ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾಳೆ. ಆರೋಪಿಯು ಮದ್ಯದ ದಾಸನಾಗಿದ್ದು, ನಿರ್ದಿಷ್ಟಕೆಲಸವಿಲ್ಲ. ಸೋಮವಾರ ಮನೆಯಲ್ಲೇ ಇದ್ದ ಆರೋಪಿಯು ಸಂಜೆ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಹಲ್ಲೆಗೈದು ಕೊಲೆ ಮಾಡಿದ್ದಾನೆ.

ಸಂಜೆ ಗಾರ್ಮೆಂಟ್ಸ್‌ ಕೆಲಸ ಮುಗಿಸಿ ಮಹಿಳೆ ಮನೆಗೆ ಬಂದಾಗ, ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಈ ವೇಳೆ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಇಷ್ಟಾದರೂ ಆರೋಪಿ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸಿದ್ದಾನೆ. ಮಹಿಳೆಯ ಜತೆಗೆ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಸ್ಥಳೀಯರು 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ್ದು ಗಲಾಟೆ ಬಗ್ಗೆ ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios